ಮಾಸ್ಕ್ ಧರಿಸಿ ಕೋಲುಗಳಿಂದ ಹಾರ ಬದಲಿಸಿಕೊಂಡ ವಧು-ವರ

ಪಾಟ್ನಾ: ಕೊರೊನಾಂತಕದಿಂದ ನವಜೋಡಿ ವಿಭಿನ್ನವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಕೋಲುಗಳನ್ನ ಬಳಸಿ ಹಾರ ಬದಲಿಸಿಕೊಂಡಿದ್ದಾರೆ. ಸದ್ಯ ಜೋಡಿಯ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇನ್ನು ನವ ಜೋಡಿ ಮದುವೆಯಲ್ಲಿ ಭಾಗಿಯಾಗಿದ್ದವರೆಲ್ಲ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ನಿಯಮಗಳನ್ನ ಪಾಲಿಸಿದ್ದಾರೆ.

ಈ ವಿಶೇಷ ಮದುವೆ ಬಿಹಾರದ ಅನುಮಂಡಲ್ ಕ್ಷೇತ್ರದ ತೆಘ್ರಾದಲ್ಲಿ ನಡೆದಿದೆ. ಗಿರಿಧರಲಾಲ್ ಪುತ್ರ ಕೃತೇಶ್ ಕುಮಾರ್ ಮದುವೆ ಜ್ಯೋತಿ ಕುಮಾರಿ ಅವರನ್ನ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾದ್ರು. ಏಪ್ರಿಲ್ 30ರಂದು ಮದುವೆ ನಡೆದಿದ್ದು, ಕೊರೊನಾ ನಿಯಮಗಳನ್ನ ಪಾಲಿಸಿದ್ದರಿಂದ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಭಟ್ಕಳದ ಯುವಕನ ಆನ್‍ಲೈನ್ ವಿವಾಹ- ಮದುವೆಯಲ್ಲಿ ಪಾಲ್ಗೊಂಡ ನೂರಾರು ಮಂದಿ

ಕೊರೊನಾ ನಿಯಂತ್ರಣಕ್ಕಾಗಿ ಬಿಹಾರ ಸರ್ಕಾರ ಸಹ ಹಲವು ನಿಬಂಧನೆಗಳನ್ನು ಹಾಕಿದೆ. ಮದುವೆಗಳಲ್ಲಿ 50ಕ್ಕಿಂತ ಹೆಚ್ಚಿನ ಜನರು ಭಾಗವಹಿಸುವಂತಿಲ್ಲ ಎಂದು ಷರತ್ತು ವಿಧಿಸಿದೆ. ಕೊರೊನಾ ಜೀವನಶೈಲಿಯನ್ನೇ ಬದಲಿಸಿದ್ದು, ಇಂಟರ್ ನೆಟ್ ಮೂಲಕ ಮದುವೆ, ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಕೆಲವರು ತಮ್ಮ ಮದುವೆಯನ್ನ ಲೈವ್ ಮಾಡುವ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದನ್ನೂ ಓದಿ: ಕೊರೊನಾ ವೀಕೆಂಡ್ ಲಾಕ್ ಡೌನ್: ವಿವಾಹ ಸಂಭ್ರಮವಾಯ್ತು ಯೂಟ್ಯೂಬ್ ಲೈವ್!

Comments

Leave a Reply

Your email address will not be published. Required fields are marked *