ಮಾಸ್ಕ್ ಧರಿಸದ ವರನಿಗೆ 2,100 ರೂ. ದಂಡ

-ಸಾಮಾಜಿಕ ಅಂತರ ನಿಯಮ ಉಲ್ಲಂಘನೆ

ಭೋಪಾಲ್: ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದಕ್ಕೆ ವರನಿಗೆ ನಗರಸಭೆ ಅಧಿಕಾರಿಗಳು 2,100 ರೂ. ದಂಡ ವಿಧಿಸಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ವರ ಧಮೇಂದ್ರ ನಿರಾಲೆ ಲಾಕ್‍ಡೌನ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ. ಮಾಸ್ಕ್ ಧರಿಸದಕ್ಕೆ 1 ಸಾವಿರ ರೂ. ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳದಕ್ಕೆ 1,100 ರೂ. ದಂಡ ಹಾಕಲಾಗಿದೆ ಎಂದು ಇಂದೋರಿನ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ವಿವೇಕ್ ಗಂಗ್ರೇಡ್ ಹೇಳಿದ್ದಾರೆ.

ಮದುವೆಯಲ್ಲಿ ಕೇವಲ 12 ಜನರು ಭಾಗಿಯಾಗುವಂತೆ ಷರತ್ತು ವಿಧಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ 12 ಜನರು ಒಂದೇ ವಾಹನದಲ್ಲಿ ಬಂದಿದ್ದಾರೆ. ಯಾರು ಸಹ ಮಾಸ್ಕ್ ಧರಿಸಿರಲಿಲ್ಲ. ಇಂದೊರ್ ನಗರದಲ್ಲಿ ಒಟ್ಟು 4,069 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 174 ಜನರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಇಂದೋರಿನಲ್ಲಿ ಕಟ್ಟುನಿಟ್ಟಿನ ಕ್ರಮಗಳು ಕೈಗೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *