ಮಾಸ್ಕ್‌ ಇಲ್ಲದೇ ಜಾಲಿ ರೌಂಡ್ಸ್‌ – ಯುವತಿಯರಿದ್ದ ಕಾರು ಸೀಝ್‌

ಬೆಂಗಳೂರು: ಲಾಕ್‌ಡೌನ್‌ ನಡುವೆಯೂ ಅನಗತ್ಯವಾಗಿ ಓಡಾಡುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಸಂಡೇ ಲಾಕ್‌ಡೌನ್‌ ಘೋಷಣೆಯಾಗಿದ್ದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ಪೊಲೀಸರು ರಸ್ತೆಗೆ ಇಳಿದಿದ್ದರು. ಕಾರಣ ಇಲ್ಲದೇ ಅನಗತ್ಯವಾಗಿ ತಿರುಗಾಡುತ್ತಿದ್ದ ಮಂದಿಗೆ ಪೊಲೀಸರು ಲಾಠಿ ಏಟು ನೀಡಿ ಮರಳಿ ಕಳುಹಿಸಿದ್ದಾರೆ.

ವಿಜಯನಗರ ಮೆಟ್ರೋ ನಿಲ್ದಾಣದ ಬಳಿ ಪೊಲೀಸರ ಬಿಗಿ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಮಾಸ್ಕ್ ಇಲ್ಲದೆ ಜಾಲಿ ರೌಂಡ್ಸ್ ಗೆ ಬಂದ ಇಬ್ಬರು ಯುವತಿಯರ ಕಾರನ್ನು ಪೊಲೀಸರು ಸೀಝ್‌ ಮಾಡಿದರು.

ಈ ವೇಳೆ ವ್ಯಕ್ತಿಯೊಬ್ಬ ಮಗನ ಜೊತೆ ಬಂದಿದ್ದಾನೆ. ಯಾವ ಕಡೆಗೆ ಎಂದು ಕೇಳಿದ್ದಕ್ಕೆ ಮಟನ್‌ ತರಲು ಎಂದು ಹೇಳಿದ್ದಾನೆ. ಮತ್ತಷ್ಟು ಪ್ರಶ್ನೆ ಕೇಳುತ್ತಿದ್ದಂತೆ ಆತ ಗೊಂದಲಕ್ಕೆ ಬಿದ್ದಿದ್ದಾನೆ. ಕೊನೆಗೆ ಪೊಲೀಸರು ಬೈಕ್‌ ಅನ್ನು ಸೀಝ್‌ ಮಾಡಲು ಮುಂದಾದಾಗ ದುಡ್ಡು ನೀಡುತ್ತೇನೆ. ದಯವಿಟ್ಟು ಬೈಕ್‌ ಕೊಡಿ ಎಂದು ಕೇಳಿದ್ದಾನೆ. ಪೊಲೀಸರು ಬೈಕ್‌ ಸೀಝ್‌ ಮಾಡಿ ಆತನಿಗೆ ಲಾಠಿ ಏಟು ನೀಡಿ ಕಳುಹಿಸಿದ್ದಾರೆ.

ವ್ಯಕ್ತಿಯೊಬ್ಬ ಪತ್ನಿ, ಮಗನನ್ನು ಕುರಿಸಿಕೊಂಡು ಬಂದಿದ್ದಾನೆ. ಪೊಲೀಸರು ಅಡ್ಡ ಹಾಕಿ ಕೇಳಿದಾಗ ದೇವಾಲಯದಲ್ಲಿ ಪೂಜೆ ಮಾಡಿ ಬರುತ್ತಿರುವುದಾಗಿ ಸುಳ್ಳು ಹೇಳಿದ್ದಾನೆ. ಕೂಡಲೇ ಪೊಲೀಸರು ಆತನ ಗಾಡಿಯನ್ನು ಜಪ್ತಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *