ಮಾಸಿದ ಪತ್ರಿಕೆ, ಕಪ್ಪು-ಬಿಳುಪು ಚಿತ್ರ – ಪೇಪರ್ ತುಣುಕು ಹಂಚಿಕೊಂಡ ಪ್ರಶಾಂತ್ ನೀಲ್

– ಬೇಟೆಗೆ ಕಾಯ್ತಿದ್ದಾನೆ ರಣ ಬೇಟೆಗಾರ

ಬೆಂಗಳೂರು: ಕೆಜಿಎಫ್ ಮೊದಲ ಭಾಗ ನೋಡಿದವರು ಹಲವು ಪ್ರಶ್ನೆಗಳ ಜೊತೆ ಸಿನಿಮಾ ಮಂದಿರದಿಂದ ಹೊರ ಬಂದಿರ್ತಾರೆ. ಆ ಪ್ರಶ್ನೆಗಳ ಉತ್ತರ ಕಂಡುಕೊಳ್ಳಲು ಕೆಜಿಎಫ್-2ರ ನೋಡುವ ತವಕಲ್ಲಿದೆ ಅಭಿಮಾನಿ ಬಳಗ. ಜನವರಿ 8ರಂದು ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ದಿನ ಕೆಜಿಎಫ್ ಚಾಪ್ಟರ್ 2ರ ಟೀಸರ್ ಅನಾವರಣಗೊಳ್ಳಲಿದೆ. ಟೀಸರ್ ನಲ್ಲಿ ಕೆಲ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಎಂಬ ಸಣ್ಣದಾದ ಸುಳಿವನ್ನ ನಿರ್ದೇಶಕ ಪ್ರಶಾಂತ್ ನೀಲ್ ನೀಡಿದ್ದಾರೆ.

ಪ್ರಶಾಂತ್ ನೀಲ್ ಕಲ್ಪನೆಯ ಮಾಯಾಲೋಕದಲ್ಲಿ ಕೆಜಿಎಫ್ ಚಿತ್ರೀಕರಣ ನಡೆದಿದೆ. ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಕೆಜಿಎಫ್ ನಿರ್ಮಾಣದ ಶಿಲ್ಪಿ ಪ್ರಶಾಂತ್ ನೀಲ್, ಇಂದು ಸೋಶಿಯಲ್ ಮೀಡಿಯಾದಲ್ಲಿ ಕೆಲ ಪೇಪರ್ ಕಟಿಂಗ್ಸ್ ರೀತಿಯ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಕೆಜಿಎಫ್ ಮೊದಲ ಭಾಗದ ಸೂಪರ್ ರಾಕಿಂಗ್ ಡೈಲಾಗ್ ಗಳನ್ನ ನೆನಪಿಸಿದ್ದಾರೆ. ಮೊದಲ ಪಾರ್ಟ್ ನಲ್ಲಿಯಂತೆ ಎರಡನೇ ಭಾಗದಲ್ಲಿ ರಗಡ್ ಡೈಲಾಗ್ ಇರುವ ಸಣ್ಣ ಸುಳಿವನ್ನ ಪ್ರಶಾಂತ್ ನೀಲ್ ನೀಡಿದಂತೆ ಕಾಣಿಸ್ತಿದೆ. ಅದರ ಜೊತೆಯಲ್ಲಿ ಬೆಳಗ್ಗೆ ಕೈಯಲ್ಲೊಂದು ರಾಡ್ ಹಿಡಿದು ಯಾವುದೇ ಬೇಟೆಗೆ ಕಾಯುತ್ತಿರುವಂತೆ ರಾಕಿ ಕುಳಿತಿರುವ ಫೋಟೋ ಸಹ ಹಂಚಿಕೊಂಡಿದ್ದಾರೆ.

https://twitter.com/prashanth_neel/status/1346029653132103680

ಚಿನ್ನ ಸಿಕ್ಕಾಗ ಹುಟ್ಟಿದವ ಅದರ ಒಡೆಯನಾಗ್ತಾನಾ? ಅವನ ಅಂತ್ಯವಾಗುತ್ತಾ? ಆದ್ರೆ ಹೇಗಾಗುತ್ತೆ? ರಾಕಿ ಬಾಯ್ ಸಿನಿಮಾದ ನಾಯಕನಾ ಅಥವಾ ಖಳನಟನಾ? ಮುಂಬೈನಿಂದ ಬಂದವ ಹೇಗೆ ರೀನಾಳ ಪ್ರೀತಿಯನ್ನ ಉಳಿಸಿಕೊಳ್ಳತ್ತಾನಾ ಅನ್ನೋ ಹಲವು ಪ್ರಶ್ನೆಗೆ ಉತ್ತರ ಸಿಗಲಿದೆ.

https://twitter.com/prashanth_neel/status/1345956124302868480

Comments

Leave a Reply

Your email address will not be published. Required fields are marked *