ಮಾವನ ಜೊತೆ 10 ತಿಂಗ್ಳ ಮಗುವಿನ ಸಮೇತ ಸೊಸೆ ಎಸ್ಕೇಪ್

– ಮನೆಯವರಿಗೆ ನಿದ್ದೆ ಮಾತ್ರೆ ನೀಡಿದ್ರು
– ಸಿಸಿಟಿವಿ ನೋಡಿ ಪತಿ, ಕುಟುಂಬದವರಿಗೆ ಶಾಕ್

ಚಂಡೀಗಢ: ವ್ಯಕ್ತಿಯೊಬ್ಬ ತನ್ನ ಮಗನ ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಕೊನೆಗೆ ಸೊಸೆಯ ಜೊತೆಯೇ ಎಸ್ಕೇಪ್ ಆಗಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

ಪಾಣಿಪತ್‍ನ ಸೋನಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಮಾವನನ್ನು ಸಲೀಂ ಎಂದು ಗುರುತಿಸಲಾಗಿದೆ. ಸಲೀಂ ತನ್ನ ಸೊಸೆ ಜೊತೆ ಪರಾರಿಯಾಗಿದ್ದಾನೆ. ಇಬ್ಬರೂ ಪ್ಲಾನ್ ಮಾಡಿ ಮನೆ ಬಿಟ್ಟು ಓಡಿ ಹೋಗಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಮಹಿಳೆ ಸಲೀಂ ಮಗ ಅಬ್ದುಲ್ ಜೊತೆ ಮದುವೆಯಾಗಿದ್ದಳು. ಈ ದಂಪತಿಗೆ ಮೂರು ವರ್ಷದ ಮಗಳು ಮತ್ತು 10 ತಿಂಗಳ ಮಗ ಇದ್ದನು. ಆದರೆ ಮಾವ ಸಲೀಂ ತನ್ನ ಸೊಸೆ ಜೊತೆಯೇ ಅನೇಕ ದಿನಗಳಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಇವರ ಸಂಬಂಧದ ಬಗ್ಗೆ ಮನೆಯ ಇತರರಿಗೆ ತಿಳಿದಿರಲಿಲ್ಲ. ಆದರೆ ಇತ್ತೀಚೆಗೆ ತಮ್ಮ ಅನೈತಿಕ ಸಂಬಂಧಕ್ಕೆ ಮನೆಯವರು ಅಡ್ಡಿಪಡಿಸುತ್ತಾರೆಂದು ಇಬ್ಬರೂ ಓಡಿ ಹೋಗಲು ನಿರ್ಧರಿಸಿದ್ದರು.

ಅದರಂತೆಯೇ ಒಂದು ದಿನ ರಾತ್ರಿ ಊಟದಲ್ಲಿ ನಿದ್ದೆ ಮಾತ್ರೆ ಮಿಕ್ಸ್ ಮಾಡಿದ್ದರು. ಮನೆಯವರು ಊಟ ಮಾಡಿದ ನಂತರ ಎಲ್ಲರೂ ನಿದ್ದೆಗೆ ಜಾರಿದ್ದಾರೆ. ಮನೆಯ ಸದಸ್ಯರು ನಿದ್ದೆ ಮಾಡಿದ ನಂತರ ಮೊದಲಿಗೆ ಮಾವ ಸಲೀಂ ಮುಂಜಾನೆ 4 ಗಂಟೆಗೆ ಮನೆಯಿಂದ ಹೊರಗೆ ಹೋಗಿ ಸೊಸೆಗಾಗಿ ಕಾಯುತ್ತಿದ್ದನು. ಸ್ವಲ್ಪ ಸಮಯದ ನಂತರ 10 ತಿಂಗಳ ಮಗುವಿನ ಜೊತೆ ಸೊಸೆ ಮಾವನ ಜೊತೆ ಓಡಿ ಹೋಗಿದ್ದಾಳೆ.

ಫೋನ್ ತೆಗೆದುಕೊಂಡು ಹೋದರೆ ಮನೆಯವರು ಟ್ರೇಸ್ ಮಾಡುತ್ತಾರೆ ಎಂದು ಇಬ್ಬರು ಫೋನ್‍ಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ಮುಂಜಾನೆ ಮನೆಯವರು ಎದ್ದು ಎಲ್ಲ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಸಂಬಂಧಿಕರ ಬಳಿ ಇವರ ಬಗ್ಗೆ ವಿಚಾರಿಸಿದ್ದಾರೆ. ಆದರೆ ಯಾವುದೇ ಮಾಹಿತಿ ಪತ್ತೆಯಾಗಿಲ್ಲ. ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಆಗ ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಇಬ್ಬರು ಓಡಿ ಹೋಗಿರುವುದು ಕಂಡುಬಂದಿದೆ. ಮಾವ, ಸೊಸೆ ಪರಾರಿಯಾಗುವವರೆಗೂ ಇಬ್ಬರ ಸಂಬಂಧದ ಬಗ್ಗೆ ಮನೆಯವರಿಗೆ ಗೊತ್ತಾಗಿಲ್ಲ. ಇದರಿಂದ ಮನೆಯವರು ಆಘಾತಕ್ಕೊಳಗಾಗಿದ್ದಾರೆ. ಸದ್ಯಕ್ಕೆ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *