ಮಾರ್ಚ್ 11ಕ್ಕೆ ರಾಬರ್ಟ್ ಸಿನಿಮಾ ರಿಲೀಸ್

ಬೆಂಗಳೂರು: ಮಾರ್ಚ್ 11ಕ್ಕೆ ರಾಬರ್ಟ್ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗ್ತಿದೆ ಎಂದು ನಟ ದರ್ಶನ್ ಹೇಳಿದ್ದಾರೆ.

ಇಂದು ಫೇಸ್‍ಬುಕ್ ಲೈವ್ ಬಂದಿದ್ದ ಸಾರಥಿ ದರ್ಶನ್, ಆರಂಭದಲ್ಲಿ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದರು. ನಂತರ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ಮಾರ್ಚ್ 11ರಂದು ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಲಿದೆ. ಓಟಿಟಿ ಪ್ಲಾಟ್‍ಫಾರಂನಲ್ಲಿ ಸಿನಿಮಾ ಬಿಡುಗಡೆಗೆ ದರ್ಶನ್ ವಿರೋಧ ವ್ಯಕ್ತಪಡಿಸಿದರು. ಥಿಯೇಟರ್ ನಲ್ಲಿ ಕೇಳುವ ಚಪ್ಪಾಳೆಗಳೇ ನಮಗೆ ಮುಖ್ಯ. ಸದ್ಯ ಶೇ.50ರಷ್ಟು ಆಸನ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ. ಆದ್ರೂ ನಾವು ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ರಾಬರ್ಟ್ ಸಿನಿಮಾ ಬಿಡುಗಡೆ ನಂತರ ಎಲ್ಲ ಅಭಿಮಾನಿಗಳನ್ನ ಭೇಟಿ ಆಗುತ್ತೇನೆ. ಹಾಗಾಗಿ ಫೆಬ್ರವರಿ 16ರ ನನ್ನ ಬರ್ತ್ ಡೇಗೆ ದೂರದ ಊರುಗಳಿಂದ ಬರಬೇಡಿ. 2020ರಲ್ಲಿ ಕೊರೊನಾದಿಂದಾಗಿ ಎಷ್ಟೋ ಜನ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದೀರಿ. ಇಂತಹ ಸಮಯದಲ್ಲಿ ಹಣ ವ್ಯಯ ಮಾಡೋದು ಬೇಡ. ಎಷ್ಟೋ ಜನ ಕೆಲಸ ಕಳೆದುಕೊಂಡರು. ಹೊಟ್ಟೆಗೆ ಹಿಟ್ಟಿಲ್ಲ. 2020ರಲ್ಲಿ ವಿಧಿ ನಮಗೆ ಹಲವು ಪಾಠ ಕಲಿಸಿದೆ. ಆದ್ದರಿಂದ ಮೊದಲು ನೀವು ಚೆನ್ನಾಗಿರಿ. 2022ಕ್ಕೆ ಈ ಎಲ್ಲ ಕಷ್ಟಗಳು ದೂರವಾದ ಮೇಲೆ ಅದ್ಧೂರಿಯಾಗಿ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳೋಣ. ಕೊರೊನಾದಿಂದಾ ನಿಮ್ಮ ನಷ್ಟವನ್ನ ತುಂಬಿಕೊಳ್ಳಿ. ಶುಭಾಶಯ ತಿಳಿಸಲು ಬೆಂಗಳೂರಿಗೆ ಬರಬೇಡಿ ಅಂತ ಹೇಳಿದರು.

Comments

Leave a Reply

Your email address will not be published. Required fields are marked *