ಮಾಜಿ ಸಿಎಂ ಪದ ಬಳಕೆ ತಪ್ಪು, ಕೆಲಸವನ್ನ ಟೀಕಿಸಲಿ: ಶಾಸಕಿ ಪೂರ್ಣಿಮಾ

ಚಿತ್ರದುರ್ಗ: ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸುವಾಗ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಪದ ಬಳಕೆ ತಪ್ಪು. ಸಂಸದೆಯವರ ಕೆಲಸಗಳ ಟೀಕಿಸಲಿ, ಅವರ ಹೇಳಿಕೆಗಳನ್ನು ಖಂಡಿಸಲಿ. ಆದ್ರೆ ಮಹಿಳಾ ಸಂಸದರ ಬಗ್ಗೆ ಮಾತನಾಡುವಾಗ ಬಳಕೆ ಸರಿಯಾಗಿರಬೇಕೆಂದು ಬಿಜೆಪಿ ಶಾಸಕಿ ಪೂರ್ಣಿಮಾ ಹೇಳಿದ್ದಾರೆ.

ಸಂಸದರ ಹೇಳಿಕೆಗಳ ತಪ್ಪಿದ್ರೆ ರಾಜಕೀಯವಾಗಿ ಟೀಕಿಸಲಿ. ಟೀಕೆ ಮಾಡುವ ಆಡುವ ಮಾತುಗಳು ಬೇರೆ ಅರ್ಥ ನೀಡುವಂತಿರಬಾರದು. ಮುಂದಿನ ದಿನಗಳಲ್ಲಿ ರಾಜಕಾರಣಿಗಳು ಹೇಗೆ ಇರಬೇಕು ಎಂಬುದನ್ನ ನೋಡಿ ಕಲಿಯುವ ಜನರು ಇರ್ತಾರೆ. ಕುಮಾರಸ್ವಾಮಿ ಅವರು ಸರಳತೆಗೆ ಎಲ್ಲರಿಗೂ ಇಷ್ಟ ಆಗ್ತಾರೆ. ಕೆಲವೊಮ್ಮೆ ಕೋಪದಲ್ಲಿ ಮಾತನಾಡುವಾಗ ಸರಿಯಾದ ಪದ ಬಳಸಲಿ ಅನ್ನೋದು ನನ್ನ ಅಭಿಪ್ರಾಯ ಎಂದರು. ಇದನ್ನೂ ಓದಿ: ಇಂದು ಗಣಿಗಾರಿಕೆ ಪ್ರದೇಶಕ್ಕೆ ಸಂಸದೆ ಸುಮಲತಾ ಅಂಬರೀಶ್ ಭೇಟಿ

ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?:ಕೆಆರ್‍ಎಸ್ ಜಲಾಶಯದ ಗೇಟ್ ಗೆ ಮಂಡ್ಯ ಸಂಸದರನ್ನು ಮಲಗಿಸಿಬಿಟ್ಟರೆ ನೀರು ಹೋಗುವುದು ನಿಲ್ಲಬಹುದೇನೊ? ಅನುಕಂಪದ ಅಲೆ ಮೇಲೆ ಮಂಡ್ಯ ಸಂಸದೆಯಾಗಿ ಆಯ್ಕೆಯಾದ ಮೇಲೆ ಜನರ ಕೆಲಸ ಮಾಡಬೇಕು. ಇಲ್ಲದಿದ್ರೆ, ಮುಂದಿನ ಚುನಾವಣೆಯಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಹೆಣ್ಣಿನ ಬಗ್ಗೆ ಹೇಗೆ ಮಾತಾಡ್ಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು: ಸುಮಲತಾ ಕಿಡಿ – ಇಂತಹ ಮಾತುಗಳಿಗೆ ನಾನು ಐ ಡೋಂಟ್ ಕೇರ್ ಅಂದ್ರು ಸಂಸದೆ

Comments

Leave a Reply

Your email address will not be published. Required fields are marked *