ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯವರ ಕಾರ್ಟೂನ್ ಶೇರ್ ಮಾಡಿದ್ದಾರೆ ಎಂದು ಶಿವಸೇನಾ ಕಾರ್ಯಕರ್ತರು ಮಾಜಿ ನೌಕಪಡೆಯ ಅಧಿಕಾರಿಯೋರ್ವರಿಗೆ ಥಳಿಸಿದ್ದರು. ಈ ಸಂಬಂಧ ಆರು ಜನ ಶಿವಸೇನಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಮಾಜಿ ನೌಕಪಡೆಯ ಅಧಿಕಾರಿ 65 ವರ್ಷದ ಮದನ್ ಶರ್ಮಾ ಥಳಿತಕ್ಕೊಳಗಾದ ವೃದ್ಧ. ಮುಂಬೈನ ಕಂಡಿವಲ್ಲಿಯ ಪೂರ್ವದಲ್ಲಿರುವ ಅವರ ಮನೆಯ ಮುಂದೆ ಥಳಿಸಲಾಗಿದೆ. ಈ ದೃಶ್ಯ ಕಟ್ಟದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಘಟನೆಯಲ್ಲಿ ವೃದ್ಧನ ಕಣ್ಣಿಗೆ ಮತ್ತು ಮುಖಕ್ಕೆ ಗಂಭೀರವಾಗಿ ಗಾಯಗಳಾಗಿತ್ತು.

ಈ ವಿಚಾರವಾಗಿ ದೂರು ನೀಡಿದ್ದ ಶರ್ಮಾ, ನಾನು ಉದ್ಧವ್ ಠಾಕ್ರಗೆ ಸಂಬಂಧಿಸಿದ ಕಾರ್ಟೂನ್ ಅನ್ನು ನಮ್ಮ ಸಮಾಜದ ವಾಟ್ಸಾಪ್ ಗ್ರೂಪಿನಲ್ಲಿ ಶೇರ್ ಮಾಡಿದ್ದೆ. ನಂತರ ಕಮಲೇಶ್ ಕದಮ್ ಎಂಬವರು ನನಗೆ ಕರೆ ಮಾಡಿದರು. ಜೊತೆಗೆ ನನ್ನ ವಿಳಾಸ ಮತ್ತು ಹೆಸರನ್ನು ತಿಳಿದುಕೊಂಡರು. ನಂತರ ಆತ ಜನರನ್ನು ಕರೆದುಕೊಂಡು ನಮ್ಮ ಮನೆ ಬಳಿ ಬಂದು, ಮನೆಯಿಂದ ಹೊರಗೆ ಬರುವಂತೆ ನನಗೆ ಕರೆ ಮಾಡಿದ. ನಾನು ಹೋದಾಗ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಸುಮಾರು ಆರು ಜನರು ಸೇರಿಕೊಂಡು ಶರ್ಮಾ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ವಿಡಿಯೋದಲ್ಲಿ ಮೊದಲು ಮನೆಯಿಂದ ಹೊರ ಹೋಗುವ ಮದನ್ ಶರ್ಮಾ ನಂತರ ಮನೆಯೊಳಗೆ ಓಡಿ ಬರುತ್ತಾರೆ. ಅದರೂ ಅವರನ್ನು ಬಿಡದ ಯುವಕರ ಅವರ ಶರ್ಟ್ ಪಟ್ಟಿ ಹಿಡಿದು ಹೊರಗೆ ಎಳೆದುಕೊಂಡು ಬಂದು ಹಲ್ಲೆ ಮಾಡುಡಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಶರ್ಮಾ ಅವರ ಫೋಟೋ ಶೇರ್ ಮಾಡಿ ಶಿವಸೇನಾದ ಮೇಲೆ ಕಿಡಿಕಾರಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್, ಒಂದು ಚಿತ್ರವನ್ನು ವಾಟ್ಸಪ್‍ನಲ್ಲಿ ಶೇರ್ ಮಾಡಿದ್ದಾರೆ ಎಂದು ಓರ್ವ ನೌಕಪಡೆಯ ಮಾಜಿ ಅಧಿಕಾರಿಗೆ ಗೂಂಡಾಗಳು ಥಳಿಸಿರುವ ಸುದ್ದಿ ಕೇಳಿ ಶಾಕ್ ಆಯ್ತು. ಈ ಗೂಂಡಾ ರಾಜನೀತಿಯನ್ನು ನಿಲ್ಲಿಸಿ ಉದ್ಧವ್ ಠಾಕ್ರೆ ಜೀ. ಈ ಗೂಂಡಾಗಳಿಗೆ ಕಠಿಣ ಶಿಕ್ಷೆ ವಿಧಿಸಿ ಎಂದು ನಾನು ಒತ್ತಾಯಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.
अभिनेत्री कंगना राणावत के कार्यालय की तोड़फोड़ करके अपनी मर्दानगी दिखाने वाले सत्ताधारी शिवसेना ने अब सत्ता के मद में एक बुजुर्ग भूतपूर्व नौसेना अधिकारी मदन शर्मा को मारपीट करते हुए उनकी आंख को जबरदस्त चोट पहुंचाई है। मुख्यमंत्री घरबैठे तानाशाही चला रहे है। pic.twitter.com/qF2NVcIN55
— Atul Bhatkhalkar (@BhatkhalkarA) September 11, 2020

Leave a Reply