ಮಾಂಸ ತುಂಡಿನ ಆಸೆ ತೋರಿಸಿ 30ಕ್ಕೂ ಹೆಚ್ಚು ಶ್ವಾನಗಳ ಮೇಲೆ ಅತ್ಯಾಚಾರ- ವಿಕೃತಕಾಮಿ ಅರೆಸ್ಟ್

– ತರಕಾರಿ ಮಾರುವ ವ್ಯಕ್ತಿಯಿಂದ ಕೃತ್ಯ
– ವ್ಯಕ್ತಿಯ ಕೃತ್ಯಕ್ಕೆ ಮನನೊಂದು ಸ್ಥಳೀಯರಿಂದ ದೂರು

ಮುಂಬೈ: 68 ವರ್ಷದ ತರಕಾರಿ ಮಾರಾಟ ಮಾಡುವ ವ್ಯಕ್ತಿ 30ಕ್ಕೂ ಹೆಚ್ಚು ಹೆಣ್ಣು ಶ್ವಾನಗಳ ಮೇಲೆ ಅತ್ಯಾಚಾರ ಎಸಗಿ ಪೊಲೀಸರ ಬಲಗೆ ಬಿದ್ದಿದ್ದಾನೆ.

ಅಂಧೇರಿಯ ಜುಹು ಗಲ್ಲಿಯ ನಿವಾಸಿ ಅಹ್ಮದ್ ಷಾ (68) ಬಂಧಿತ ಆರೋಪಿಯಾಗಿದ್ದಾನೆ. ಈತ ತರಕಾರಿ ಮಾರಾಟ ಮಾಡಿ ಜೀವನವನ್ನು ಸಾಗಿಸುತ್ತಾನೆ. ಏಕಾಂಗಿಯಾಗಿ ವಾಸಿಸುವ ಅಹ್ಮದ್ 30 ಕ್ಕೂ ಹೆಚ್ಚು ನಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸ್ಥಳೀಯ ನಿವಾಸಿಯೊಬ್ಬರು ಈ ಕೃತ್ಯದ ವೀಡಿಯೋ ಸಾಕ್ಷ್ಯಗಳನ್ನು ಸಂಗ್ರಹಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.

ಏಕಾಂಗಿಯಾಗಿ ವಾಸಿಸುವ ಅಹ್ಮದ್ ಷಾ ತಡರಾತ್ರಿಯಲ್ಲಿ ಶ್ವಾನಗಳಿಗೆ ಮಾಂಸ ತುಂಡಿನ ಆಸೆಯನ್ನು ತೋರಿಸಿ ಕರೆದು ಅತ್ಯಾಚಾರ ಎಸಗುತ್ತಿದ್ದನು. ಈ ಹಿಂದೊಮ್ಮೆ ಈತನಿಗೆ ಸ್ಥಳೀಯ ನಿವಾಸಿಗಳು ಹಾಗೆ ಮಾಡದಂತೆ ಎಚ್ಚರಿಕೆ ನೀಡಿದ್ದರು. ಇದೀಗ ಸ್ಥಳೀಯ ನಿವಾಸಿಯೊಬ್ಬರು ಈ ಕೃತ್ಯದ ವೀಡಿಯೋ ಸಾಕ್ಷ್ಯಗಳನ್ನು ಸಂಗ್ರಹಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಡಿ ಎನ್ ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೀದಿ ನಾಯಿಗಳ ಮೇಲೆ ಶಾಹಿ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ಸ್ಥಳಿಯರೊಬ್ಬರು ಆರೋಪಿಸಿದ್ದರು. ನಾವು ಪುರಾವೆ ಕೇಳಿದಾಗ, ಅವರು ಡಿಸೆಂಬರ್ 2020ರಲ್ಲಿ ನಡೆದ ಘಟನೆ ವೀಡಿಯೋ ಕಳುಹಿಸಿದ್ದಾರೆ. ಅಲ್ಲಿ ಶಾಹಿ ನಾಯಿಯ ಮೇಲೆ ಅತ್ಯಾಚಾರ ಮಾಡುತ್ತಿರುವುದು ಕಂಡುಬಂದಿದೆ. ಪ್ರಾಣಿಗಳ ಮೇಲೆ ಅತ್ಯಾಚಾರಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎನ್‍ಜಿಒ ಎಲ್ಲಾ ಪ್ರಾಣಿಗಳಿಗೆ ಸುರಕ್ಷತೆ ಒದಗಿಸುವಂತೆ ಕೋರಿದೆ.

ವಿಚಾರಣೆಯ ಸಮಯದಲ್ಲಿ, ಆರೋಪಿ ಈ ಪ್ರದೇಶದಲ್ಲಿ 30 ರಿಂದ 40 ನಾಯಿಗಳ ಮೇಲೆ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಜುಹು ಗಲ್ಲಿಯಲ್ಲಿರುವ ಎಲ್ಲಾ ಹೆಣ್ಣು ನಾಯಿಗಳ ವೈದ್ಯಕೀಯ ಪರೀಕ್ಷೆಯನ್ನು ನಡೆಸುತ್ತಿದ್ದೇವೆ. ಬಲಿಪಶು ನಾಯಿಗಳ ಪಟ್ಟಿಯನ್ನು ನಾವು ಸಲ್ಲಿಸುತ್ತೇವೆ. ಇದು ಘೋರ ಅಪರಾಧ, ಆರೋಪಿಗೆ ಮಾನವೀಯತೆ ಇಲ್ಲದ ಕೃತ್ಯವಾಗಿದೆ. ಆರೋಪಿಯನ್ನು ಬಂಧಿಸಿದ್ದೇವೆ ವಿಚಾರಣೆ ನಡೆಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *