ಮಹಿಳೆ ಹೊಟ್ಟೆಯಲ್ಲಿ 16 ಕೆಜಿ ಗಡ್ಡೆ- ಸತತ 6 ಗಂಟೆಗಳ ಶಸ್ತ್ರಚಿಕಿತ್ಸೆ ಯಶಸ್ವಿ

ಭೋಪಾಲ್: ಇಪ್ಪತ್ತು ವರ್ಷದ ಮಹಿಳೆಯೊಬ್ಬಳ ಹೊಟ್ಟೆಯಲ್ಲಿದ್ದ 16 ಕೆ.ಜಿ ಗಡ್ಡೆಯನ್ನು ಭಾನುವಾರ ಭೋಪಾಲ್‍ನ ಖಾಸಗಿ ಆಸ್ಪತ್ರೆಯ ವೈದ್ಯರು ಸತತ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಹೊರತೆಗೆದಿದ್ದಾರೆ.

ಈ ಕುರಿತಂತೆ ಮಾತನಾಡಿದ ಆಸ್ಪತ್ರೆಯ ವ್ಯವಸ್ಥಾಪಕ ದೇವೆಂದ್ರ ಚಂದೋಲಿಯಾ, ಇದೊಂದು ಅಂಡಾಶಯದ ಗಡ್ಡೆಯಾಗಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಇದೀಗ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಎರಡು ದಿನಗಳ ಹಿಂದೆ ಮಹಿಳೆ ರಾಜ್‍ಗಢದಿಂದ ಬಂದಿದ್ದು, ಅವರ ಹೊಟ್ಟೆಯಲ್ಲಿದ್ದ ಗಡ್ಡೆ ಬಹಳ ದೊಡ್ಡದಾಗಿತ್ತು. ಅಲ್ಲದೆ ಇದರಿಂದ ಮಹಿಳೆಗೆ ಊಟ ಮಾಡಲು ಹಾಗೂ ಓಡಾಡಲು ಸಮಸ್ಯೆಯಾಗುತ್ತಿತ್ತು. ಈ ಗಡ್ಡೆಯನ್ನು ಅಂಡಾಶಯದ ಗಡ್ಡೆ ಎಂದು ಕರೆಯಲಾಗಿದ್ದು, ಮಹಿಳೆಯ 48 ಕೆ.ಜಿ ತೂಕವಿದ್ದರೆ, ಗಡ್ಡೆ 16 ಕೆ.ಜಿ ತೂಕವಿತ್ತು. ಅಲ್ಲದೆ ಇಂದೊಂದು ದೊಡ್ಡ ಶಸ್ತ್ರ ಚಿಕಿತ್ಸೆಯಾಗಿದೆ ಎಂದರು.

ಸರಿಯಾದ ಸಮಯಕ್ಕೆ ಗಡ್ಡೆಯನ್ನು ದೇಹದಿಂದ ತೆಗೆದು ಹಾಕದಿದ್ದಲ್ಲಿ ಮಹಿಳೆ ಬದುಕುಳಿಯುವ ಸಾಧ್ಯತೆ ಕಡಿಮೆಯಿತ್ತು. ಆದರೆ ಸುಮಾರು 6 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಇದೀಗ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದರು.

Comments

Leave a Reply

Your email address will not be published. Required fields are marked *