ಮಹಿಳೆ ಸೇರಿದಂತೆ 6 ಮಾವೋವಾದಿಗಳನ್ನ ಹೊಡೆದುರಳಿಸಿದ ಆ್ಯಂಟಿ ನಕ್ಸಲ್ ಫೋರ್ಸ್

ಹೈದರಾಬಾದ್: ಇಂದು ಬೆಳಗ್ಗೆ ಆಂಧ್ರ ಪ್ರದೇಶದ ವಿಶಾಖಪಟ್ಟಣ ವ್ಯಾಪ್ತಿಯಲ್ಲಿ ಆರು ಮಾವೋವಾದಿಗಳನ್ನು ಆ್ಯಂಟಿ ನಕ್ಸಲ್ ಫೋರ್ಸ್ ಹೊಡೆದುರಳಿಸಿದೆ. ಮೃತರಲ್ಲಿ ಓರ್ವ ಮಹಿಳೆ ಸಹ ಒಬ್ಬರು. ಮೃತರು ನಿಷೇಧಿತ ತಂಡ ಸಿಪಿಐ(ಮಾವೋವಾದಿ)ಯ ಸದಸ್ಯರಾಗಿದ್ದರು.

ಇಂದು ಬೆಳಗ್ಗೆ ಆ್ಯಂಟಿ ನಕ್ಸಲ್ ಫೋರ್ಸ್ ಗ್ರೌಂಡ್ ಮತ್ತು ವಿಶೇಷ ದಳದವರು ಥಿಗ್ಲಮೆಟ್ಟಾ ಗ್ರಾಮದ ವ್ಯಾಪ್ತಿಯಲ್ಲಿ ಸರ್ಚಿಂಗ್ ಆಪರೇಷನ್ ಆರಂಭಿಸಿದ್ದರು. ಈ ವೇಳೆ ಮಾವೋವಾದಿಗಳು ಮತ್ತು ಸರ್ಚಿಂಗ್ ಆಪರೇಷನ್ ತಂಡದ ನಡುವೆ ಗುಂಡಿನ ಕಾಳಗ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಒಟ್ಟು ಆರು ಜನರನ್ನು ಹೊಡೆದುರಳಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೇರಳದಲ್ಲಿ ಮಾವೋವಾದಿಗಳ ಹತ್ಯೆ – ಚಿಕ್ಕಮಗಳೂರಿನ ಇಬ್ಬರು ಸಾವು

ಸುರಕ್ಷಬಲ ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ. ಮೃತರ ಬಳಿಯಲ್ಲಿದ್ದ ಆಯುಧಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸರ್ಚಿಂಗ್ ಆಪರೇಷನ್ ಮುಂದುವರಿದಿದೆ ಎಂದು ಚಿಂತಾಪಲ್ಲೆಯ ಎಎಸ್‍ಪಿ ವಿದ್ಯಾಸಾಗರ್ ಹೇಳಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ಕೊಂದು ಸೇಡು ತೀರಿಸಿಕೊಳ್ಳುತ್ತೇವೆ – ಕೇರಳ ಸಿಎಂಗೆ ಮಾವೋವಾದಿಗಳಿಂದ ಪತ್ರ

Comments

Leave a Reply

Your email address will not be published. Required fields are marked *