ಮಹಿಳೆ ಒಪ್ಪಿಗೆ ಇಲ್ಲದೇ ಕಾಂಡೋಮ್ ತೆಗೆದ್ರೆ ಕಾನೂನು ಬಾಹಿರ

ಕ್ಯಾಲಿಫೋರ್ನಿಯಾ: ಸೆಕ್ಸ್ ವೇಳೆ ಮಹಿಳೆಯ ಒಪ್ಪಿಗೆ ಪಡೆಯದೇ ಕಾಂಡೋಮ್ ತೆಗೆಯೋದು ಕಾನೂನು ಬಾಹಿರ ಎಂದು ಆದೇಶಿಸಲು ಕ್ಯಾಲಿಫೋರ್ನಿಯಾ ಹೊಸ ಕಾಯ್ದೆ ತರಲು ಮುಂದಾಗಿದೆ. ಈ ಕಾಯ್ದೆ ಜಾರಿಗೆ ತರಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ಸಿಗಲಿದೆ ಎಂದು ವರದಿಯಾಗಿದೆ.

ಕ್ಯಾಲಿಫೋರ್ನಿಯಾ ಅಸೆಂಬ್ಲಿ ಸದಸ್ಯೆ ಕ್ರಿಸ್ಟಿನಾ ಗಾರ್ಸಿಯಾ, ಈ ಪ್ರಸ್ತಾವವನ್ನ ಅಧಿವೇಶನದಲ್ಲಿ ಮಂಡಿಸಿದ್ದಾರೆ. ಈ ಪ್ರಸ್ತಾವದ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಈ ಮಸೂದೆ ಪಾಸ್ ಆದ್ರೆ ಕ್ಯಾಲಿಫೋರ್ನಿಯಾ ಇಂತಹ ಕಾಯ್ದೆ ತಂದ ಅಮೆರಿಕದ ಮೊದಲ ರಾಜ್ಯವಾಗಲಿದೆ. ಇದನ್ನೂ ಓದಿ: ಮಾರುಕಟ್ಟೆಗೆ ಬಂತು ವಿಶ್ವದ ಅತಿ ಚಿಕ್ಕ ಕಾಂಡೋಮ

ಲೈಂಗಿಕ ಕ್ರಿಯೆ ವೇಳೆ ಮಹಿಳೆಗೆ ತಿಳಿಯದಂತೆ ಕಾಂಡೋಮ್ ತೆಗೆದು ಸೆಕ್ಸ್ ನಡೆಸಿದ್ರೆ ಸ್ಟೆಲ್ಥಿಂಗ್ ಎನ್ನಲಾಗುತ್ತದೆ. ಸ್ಟೆಲ್ಥಿಂಗ್ ಲೈಂಗಿಕ ಕಿರುಕುಳಕ್ಕೆ ಸಮನಾವಾದದ್ದು. ಮಹಿಳೆಯ ಅನುಮತಿ ಇಲ್ಲದೇ ಆಕೆಯನ್ನ ಸ್ಪರ್ಶಿಸೋದು, ಸೆಕ್ಸ್ ಗೆ ಆಹ್ವಾನಿಸೋದನ್ನ ಸೆಕ್ಷುವಲ್ ಬ್ಯಾಟರಿ ಎಂದು ಕರೆಯಲಾಗುತ್ತದೆ. ಇದು ಅನುಮತಿ ಇಲ್ಲದೇ ಕಾಂಡೋಮ್ ತೆಗೆಯುವುದನ್ನ ಅಪರಾಧ ಎಂದು ಸ್ಪಷ್ಟವಾಗಿ ಹೇಳುತ್ತದೆ. ಇದನ್ನೂ ಓದಿ: ಸೆಕ್ಸ್ ವೇಳೆ ಸ್ಫೋಟಗೊಂಡ ಕಾಂಡೋಮ್-ದೂರು ದಾಖಲಿಸಿದ ಮಹಿಳೆ

ಮಸೂದೆ ಮಂಡಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಕ್ರಿಸ್ಟಿನಾ ಗಾರ್ಸಿಯಾ, ದೇಶದಲ್ಲಿ ಎಲ್ಲ ವಿಷಯಗಳಿಗೂ ಸಂಬಂಧಿಸಿದ ಕಾನೂನುಗಳಿವೆ. ಸ್ಟೆಲ್ಥಿಂಗ್ (ಕಳ್ಳತನ) ಹೆಸರಲ್ಲಿ ನಡೆಯುವ ಲೈಂಗಿಕ ದೌರ್ಜನಕ್ಕೂ ಕಾನೂನಿನ ಅವಶ್ಯಕತೆ ಇದೆ. ಹಲವು ವರ್ಷಗಳಿಂದ ಸ್ಟೆಲ್ಥಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ಸಂತ್ರಸ್ತೆಗೆ ನ್ಯಾಯ ಸಿಗಬೇಕಾದ್ರೆ ಈ ಕಾನೂನು ಬೇಕಿದೆ. ಹೆಚ್ಚಾಗಿ ಕಪ್ಪು ವರ್ಣದ ಮಹಿಳೆಯ ಮೇಲೆ ಸ್ಟೆಲ್ಥಿಂಗ್ ಪ್ರಕರಣಗಳು ವರದಿ ಆಗುತ್ತೇವೆ. ಮಹಿಳೆಯ ಸುರಕ್ಷತೆ ಕಾನೂನು ಅನಿವಾರ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೆಳತಿಗೆ ಹೇಳದೇ ಕಾಂಡೋಮ್‍ಗೆ ರಂಧ್ರ ಹಾಕಿ ಸೆಕ್ಸ್- 4 ವರ್ಷ ಜೈಲು ಶಿಕ್ಷೆ

Comments

Leave a Reply

Your email address will not be published. Required fields are marked *