ಮಹಿಳೆಯೊಂದಿಗೆ ತರಕಾರಿ ತುಂಡರಿಸಿ ವೈರಲ್ ಆದ ಕೋತಿ

ಕೋತಿಯೊಂದು ಮಹಿಳೆಯೊಂದಿಗೆ ಕುಳಿತುಕೊಂಡು ತರಕಾರಿಯನ್ನು ತುಂಡರಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಕೋತಿಯೊಂದು ಮಹಿಳೆಯೊಬ್ಬರ ಪಕ್ಕ ಕುಳಿತುಕೊಂಡಿದೆ. ಮಹಿಳೆಯು ಒಂದು ಪಾತ್ರದಲ್ಲಿ ತರಕಾರಿಗಳನ್ನು ಮುಂದಿಟ್ಟುಕೊಂಡು ತರಕಾರಿಯನ್ನು ತುಂಡರಿಸುತ್ತಿದ್ದಾಳೆ. ಅವಳೊಂದಿಗೆ ಕೋತಿಯು ತರಕಾರಿಗಳನ್ನು ತುಂಡರಿಸುವ ಕಾರ್ಯಕ್ಕೆ ಮುಂದಾಗಿದೆ. ಆದರೆ ಕೋತಿಯ ಪಕ್ಕದಲ್ಲಿ ಕುಳಿತಿರುವ ಮಹಿಳೆಯ ಮುಖ ಮಾತ್ರ ಕಾಣಿಸುತ್ತಿಲ್ಲ. ಆದರೆ ಕೋತಿ ಮಾತ್ರ ಬಹಳ ವೇಗವಾಗಿ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಸೈ ಎನಿಸಿಕೊಂಡಿದೆ. ಈ ವಿಡಿಯೋವನ್ನು ಐಆರ್‍ಎಸ್ ಅಮನ್ ಪ್ರೀತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.

ಅಮನ್ ಪ್ರೀತ್ ಅವರು ವಿಡಿಯೋ ಟ್ವಿಟ್ಟರ್ ನಲ್ಲಿ  ಶೇರ್ ಮಾಡಿದ ಮೇಲೆ ಸುಮಾರು 11 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿ, 170 ಅಧಿಕ ಜನ ಮರು ಟ್ವೀಟ್ ಮಾಡಿ ಹಲವು ಕಮೆಂಟ್‍ಗಳೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *