ಮಹಿಳೆಯರಿಗೆ ನಗ್ನ ವಿಡಿಯೋ ಕಾಲ್- ಬರೋಬ್ಬರಿ 500 ಮಂದಿಗೆ ಕರೆ

– ಕೇವಲ 5 ತರಗತಿವರೆಗೆ ಓದಿದ್ದ ಆರೋಪಿ
– ಪ್ರತ್ಯೇಕ ಸಾಫ್ಟ್‌ವೇರ್ ಬಳಸಿ ವಿಡಿಯೋ ಕಾಲ್

ನವದೆಹಲಿ: ಆಧುನಿಕ ತಂತ್ರಜ್ಞಾನವನ್ನು ಬಳಿಸಿಕೊಂಡು ಮಹಿಳೆಯರಿಗೆ ಹಿಂಸೆ ನೀಡುತ್ತಿದ್ದ ಆರೋಪದಲ್ಲಿ ದೆಹಲಿಯ ಎನ್‍ಸಿಆರ್ ನಿವಾಸಿಯಾಗಿರುವ 22 ವರ್ಷದ ಯುವಕನನ್ನು ಪೊಲೀಶರು ಬಂಧಿಸಿದ್ದಾರೆ.

ದೀಪಕ್ ಬಂಧಿತ ಆರೋಪಿಯಾಗಿದ್ದು, ವಿಡಿಯೋ ಕಾಲ್ ಮಾಡಲು ಪ್ರತ್ಯೇಕ ಸಾಫ್ಟ್‌ವೇರ್ ಬಳಿಕೆ ಮಾಡಿ ಮಹಿಳೆಯರು, ಯುವತಿಯರೊಂದಿಗೆ ನಗ್ನವಾಗಿ ನಿಂತು ಅಸಭ್ಯವಾಗಿ ಮಾತನಾಡುತ್ತಿದ್ದ. ಅಲ್ಲದೇ ಆತನ ಮೊಬೈಲ್‍ನಲ್ಲಿ ಬರೋಬ್ಬರು 500 ಮಂದಿ ಮಹಿಳೆಯರ ಫೋನ್ ನಂಬರ್ ಪತ್ತೆಯಾಗಿದ್ದು, ಆತ ಕೇವಲ 5ನೇ ತರಗತಿವರೆಗೆ ಮಾತ್ರ ಓದಿದ್ದಾನೆ ಎಂದು ಘಾಜಿಯಾಬಾದ್ ಪೊಲೀಸರು ತಿಳಿಸಿದ್ದಾರೆ.

ದೇಶದ ವಿವಿಧ ರಾಜ್ಯಗಳಿಗೆ ಸೇರಿದ ಮಹಿಳೆಯರು, ಯುವತಿಯರಿಗೆ ಕರೆ ಮಾಡಿ ಹಿಂಸೆ ನೀಡುತ್ತಿದ್ದ. ಮಹಿಳಾ ವಕೀಲರೊಬ್ಬರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿರುವ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂದಿದ್ದಾರೆ. ಆರೋಪಿ ತನಗೆ ತೋಚಿದ್ದ ನಂಬರ್ ಟೈಪ್ ಮಾಡಿ ಮೊದಲು ಫೋನ್ ಮಾಡುತ್ತಿದ್ದ. ಫೋನ್ ಮಹಿಳೆಯರು ರಿಸೀವ್ ಮಾಡಿದರೆ ಅಂತಹ ನಂಬರ್ ಗಳನ್ನು ಸೇವ್ ಮಾಡಿಕೊಳ್ಳುತ್ತಿದ್ದ. ಆ ಬಳಿಕ ಅವರ ವಾಟ್ಸಾಪ್‍ಗೆ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದ. ಒಂದೊಮ್ಮೆ ಅವರು ಆರೋಪಿ ನಂಬರ್ ಬ್ಲಾಕ್ ಮಾಡಿದರೆ ಪ್ರತ್ಯೇಕ ಸಾಫ್ಟ್‌ವೇರ್ ಬಳಸಿ ವಿಡಿಯೋ ಕಾಲ್ ಮಾಡುತ್ತಿದ್ದ.

ಪ್ರತ್ಯೇಕ ಸಾಫ್ಟ್‌ವೇರ್ ಬಳಕೆ ಮಾಡುತ್ತಿದ್ದ ಕಾರಣ ಪೊಲೀಸರಿಗೆ ಆತನ ಐಪಿ ವಿಳಾಸ ಪತ್ತೆ ಮಾಡುವುದು ಕಷ್ಟಸಾಧ್ಯವಾಗುತ್ತಿತ್ತು. ದೆಹಲಿ, ಪಂಜಾಬ್ ಮತ್ತು ಉತ್ತರ ಪ್ರದೇಶಕ್ಕೆ ಸೇರಿದ ಹಲವು ಮಹಿಳೆರಿಗೆ ಈತ ಇದೇ ಕಿರುಕುಳ ನೀಡಿದ್ದ.

ಯುವತಿ ದೂರು ನೀಡಿದ ಬಳಿಕ ಆರೋಪಿಯ ನಂಬರ್ ಮೇಲೆ ನಿಗಾ ವಹಿಸಿದ್ದ ಪೊಲೀಸರು, ವಾಟ್ಸಾಪ್ ಕಾಲ್ ಆಧರಿಸಿ ಇಂಟರ್ ನೆಟ್ ಸರ್ವಿಸ್ ಪ್ರೋವೈಡರ್ ಐಪಿ ಅರ್ಡಸ್‍ಅನ್ನು ಪತ್ತೆ ಮಾಡಿದ್ದರು. ಸೈಬರ್ ಕ್ರೈಂ ಆಯೋಪದ ಅಡಿ ದೂರು ದಾಖಲಿಸಿ ಯುವಕನನ್ನು ಬಂಧಿಸಿದ್ದರು. ಸದ್ಯ ಘಟನೆಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

ಪ್ರಕರಣದ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿರುವ ಸೈಬರ್ ಸೆಲ್ ಪೊಲೀಸ್ ಅಧಿಕಾರಿ ಅಭಯ್, ಯುವತಿಯೊಬ್ಬಳಿಗೆ ವಾಟ್ಸಾಪ್ ಕಾಲ್ ಮಾಡಿದ್ದ ಆಧಾರದ ಮೇಲೆ ಆತನನ್ನು ಬಂಧಿಸಲು ಸಾಧ್ಯವಾಗಿತ್ತು. ಎಷ್ಟೇ ಫೇಕ್ ವಾಟ್ಸಾಪ್ ಖಾತೆಗಳನ್ನು ಆರೋಪಿ ತೆರೆದಿದ್ದ ಆರೋಪಿ ಮಹಿಳೆರಿಗೆ ಕಿರುಕುಳ ನೀಡುತ್ತಿದ್ದ. ಇಂತಹ ಪ್ರಕರಣಗಳನ್ನು ನಿಯಂತ್ರಿಸಲು ವಾಟ್ಸಾಪ್ ಸಂಸ್ಥೆಗೂ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *