ಮಳೆಗಾಗಿ ಕತ್ತೆಯ ಮೇಲೆ ವರನ ಮೆರವಣಿಗೆ

-ವರನಾದ ನಗರದ ಅಧ್ಯಕ್ಷ

ಭೋಪಾಲ್: ಮಳೆಗಾಗಿ ಓರ್ವನನ್ನು ವರನ್ನಾಗಿ ಮಾಡಿ ಕತ್ತೆಯ ಮೇಲೆ ಮೆರವಣಿಗೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ಮೆರವಣಿಗೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇಂದೋರ್ ನಗರದ ಅಧ್ಯಕ್ಷ ಶಿವ್ ಡಿಂಗೂ ಕತ್ತೆಯ ಮೇಲೆ ಕುಳಿತು ಬೀದಿ ಬೀದಿಗಳಲ್ಲಿ ಮೆರವಣಿಗೆ ಬಂದಿದ್ದಾರೆ. ಮೆರವಣಿಗೆ ಬಳಿಕ ಎಲ್ಲರೂ ಸ್ಮಶಾನಕ್ಕೆ ಬಂದಿದ್ದಾರೆ. ಕತ್ತೆಯ ಮೇಲೆ ಕುಳಿತ ವರನಿಗೆ ಸ್ಥಳೀಯರು ಉಪ್ಪುನಿಂದ ದೃಷ್ಟಿ ತೆಗೆದು, ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ಕುರಿತು ಮಾತನಾಡಿರವ ಶಿವ್ ಡಿಂಗೂ, ಮಳೆಗಾಲ ಆರಂಭವಾದ್ರೂ ನಮ್ಮ ಭಾಗದಲ್ಲಿ ವರುಣ ದೇವ ಇನ್ನೂ ಕೃಪೆ ತೋರಿಲ್ಲ. ಹಾಗಾಗಿ ನಗರದ ಹಿರಿಯರು ಸೇರಿ ಕತ್ತೆಯ ಮೇಲೆ ಮೆರವಣಿಗೆ ಮಾಡಿಸುವ ನಿರ್ಧಾರಕ್ಕೆ ಬರಲಾಯ್ತು. ಕೊನೆಗೆ ನಾನೇ ವರನ ವೇಷ ಧರಿಸಿ ಕತ್ತೆಯ ಮೇಲೆ ಕುಳಿತೆ. ಈ ಹಿಂದೆಯೂ ಈ ರೀತಿ ಮಾಡಿದಾಗ ಮಳೆ ಬಂದಿತ್ತು. ಪೂಜೆಯ ಫಲವಾಗಿ ಮಳೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *