ಮಲೆನಾಡು ಭಾಗಕ್ಕೆ ಒಂದೊಳ್ಳೆ ಸುದ್ದಿ – ಒಂದೇ ದಿನ ಎರಡು ಪುಂಡಾನೆ ಸೆರೆ

-ಕೋವಿಡ್ 19 ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕಾರ್ಯಾಚರಣೆ

ಹಾಸನ: ಜಿಲ್ಲೆಯ ಸಕಲೇಶಪುರ, ಅಲೂರು ಭಾಗದಲ್ಲಿ ಉಪಟಳ ನೀಡುತಿದ್ದ ಎರಡೂ ಪುಂಡಾನೆಗಳನ್ನು ಸೆರೆ ಹಿಡಿಯಲಾಗಿದ್ದು, ರೇಡಿಯೋ ಕಾಲರ್ ಅಳವಡಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ ಬಸವರಾಜ್ ತಿಳಿಸಿದ್ದಾರೆ.

ಕೋವಿಡ್ ಕಾಲದಲ್ಲಿ ನಡೆದ ಆನೆಗಳ ಸರೆ ಕಾರ್ಯಾಚರಣೆ ಸವಾಲಿನದ್ದಾಗಿತ್ತು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿ ಸಿಬ್ಬಂದಿ, ಆನೆಗಳ ಮಾವುತರು, ಆರೈಕೆಗಾರರೆಲ್ಲರಿಗೂ ಒಂದು ದಿನ ಮೊದಲೇ ಕೋವಿಡ್ ಪರೀಕ್ಷೆ ನಡೆಸಿ ಸೋಂಕು ಇಲ್ಲದೆ ಇರುವುದನ್ನು ಖಾತರಿಪಡಿಸಿಕೊಂಡು ಕಾರ್ಯಾಚರಣೆ ಮಾಡಲಾಯಿತು. ಇದನ್ನು ಓದಿ: ಅತ್ತ ರೈಲು ಬರ್ತಿತ್ತು, ಇತ್ತ ಹಳಿಯಲ್ಲಿ ಸ್ಕೂಟಿ ಸಿಲುಕಿತ್ತು!

ಮೂರು ದಿನಗಳ ಕಾರ್ಯಾಚರಣೆ ಯೋಜನೆ ರೂಪಿಸಿಕೊಳ್ಳಲಾಗಿತ್ತು. ಆದರೆ ಸಮರ್ಥ ಹಾಗೂ ನುರಿತ ಅಧಿಕಾರಿಗಳು, ಸಿಬ್ಬಂದಿ, ಅಭಿಮನ್ಯು ಸೇರಿಂದಂತೆ ಅನುಭವಿ ಆನೆಗಳ ಪ್ರಯತ್ನದಿಂದ ಒಂದೇ ದಿನದಲ್ಲಿ ಎರಡೂ ಆನೆಗಳು ಸೆರೆ ಸಿಕ್ಕಿದೆ. ಎರಡೂ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿದ್ದು, ದೂರದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ್, ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿ, ಸಿಬ್ಬಂದಿ ಹಾಗೂ ಎಲ್ಲಾ ರೀತಿಯ ಸಹಕಾರ ನೀಡಿದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇದನ್ನು ಓದಿ: ಕೋವಿಡ್ ಬಳಿಕ ಮಕ್ಕಳಲ್ಲಿ ಕಾಣಿಸಿಕೊಳ್ಳುವ HLH ಸಮಸ್ಯೆ ರಾಯಚೂರಿನಲ್ಲಿ ಪತ್ತೆ

Comments

Leave a Reply

Your email address will not be published. Required fields are marked *