ಮರಿ ಟೈಗರ್ ಹುಟ್ಟುಹಬ್ಬಕ್ಕೆ ರಾಬರ್ಟ್ ತಂಡದಿಂದ ಗಿಫ್ಟ್

ಬೆಂಗಳೂರು: ಟೈಗರ್ ಪ್ರಭಾಕರ್ ಪುತ್ರ ಮರಿ ಟೈಗರ್ ವಿನೋದ್ ಪ್ರಭಾಕರ್ ಬಹುದಿನಗಳ ನಂತರ ದೊಡ್ಡ ಬ್ರೇಕ್ ಸಿಗುವ ನಿರೀಕ್ಷೆಯಲ್ಲಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಅವರ ಹುಟ್ಟುಹಬ್ಬಕ್ಕೆ ಚಿತ್ರ ತಂಡ ಭರ್ಜರಿ ಗಿಫ್ಟ್ ನೀಡಿದೆ.

ಈಗಾಗಲೇ ರಾಬರ್ಟ್ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಎಲ್ಲ ಅಂದುಕೊಂತೆ ಆಗಿದ್ದರೆ ಕ್ರಿಸ್ ಪ್ರಯುಕ್ತ ಡಿಸೆಂಬರ್ 25ರಂದು ಚಿತ್ರ ತೆರೆ ಕಾಣಬೇಕಿತ್ತು. ಆದರೆ ಕೊರೊನಾ ಮಹಾಮಾರಿಯಿಂದಾಗಿ ಚಿತ್ರೀಕರಣ ಸ್ವಲ್ಪ ತಡವಾಯಿತು. ಮಾತ್ರವಲ್ಲ ಇದೀಗ ಸ್ಟಾರ್ ನಟರ ಚಿತ್ರಗಳನ್ನು ಬಿಡುಗಡೆ ಮಾಡಲು ಅನುಮತಿ ಇಲ್ಲ. ಹೀಗಾಗಿ ಸಿನಿಮಾ ಬಿಡುಗಡೆ ತಡವಾಗಿದೆ.

ರಿಲೀಸ್ ತಡವಾದರೂ ಚಿತ್ರತಂಡ ಹಾಡು, ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳನ್ನು ತಣಿಸಿದೆ. ಆದರೂ ಅಭಿಮಾನಿಗಳು ಬಹುನಿರೀಕ್ಷಿತ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಡಿ ಬಾಸ್ ಈ ಸಿನಿಮಾದಲ್ಲಿ ತ್ರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಇನ್ನೂ ಹೆಚ್ಚಿದೆ. ಹೀಗಾಗಿ ಚಿತ್ರ ಬಿಡುಗಡೆ ಕುರಿತು ಎದುರು ನೋಡುತ್ತಿದ್ದಾರೆ.

ಇದೆಲ್ಲದರ ನಡುವೆ ಮರಿ ಟೈಗರ್ ಹುಟ್ಟುಹಬ್ಬಕ್ಕೆ ಚಿತ್ರ ತಂಡ ಭರ್ಜರಿ ಉಡುಗೊರೆ ನಿಡಿದ್ದು, ಅವರ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಪೋಸ್ಟರ್ ನಲ್ಲಿ ವಿನೋದ್ ಪ್ರಭಾಕರ್ ಗನ್ ಹಿಡಿದು ಮಾಸ್ ಲುಕ್ ನೀಡಿದ್ದು, ಬಾಯಿ ಮೇಲೆ ಗನ್ ಹಿಡಿದು ನಿಶ್ಶಬ್ದದ ಸಂಕೇತ ನೀಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಫಿದಾ ಆಗಿದದ್ದಾರೆ. ಆದರೆ ವಿನೋದ್ ಪ್ರಭಾಕರ್ ದರ್ಶನ್ ಜೊತೆ ಸಪೋರ್ಟಿವ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೋ ಅಥವಾ ಎದುರಾಳಿಯಾಗಿಯೋ ಎಂಬುದು ಅಭಿಮಾನಿಗಳ ಸದ್ಯ ಪ್ರಶ್ನೆಯಾಗಿದೆ.

ಡಿಸೆಂಬರ್ 3 ವಿನೋದ್ ಪ್ರಭಾಕರ್ ಹುಟ್ಟುಹಬ್ಬವಾಗಿದ್ದು, ಸ್ನೇಹಿತರು ಅಭಿಮಾನಿಗಳು ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಚಿತ್ರ ತಂಡ ಸಹ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಪ್ರ್ರೈಸ್ ನೀಡಿದೆ.

ರಾಬರ್ಟ್ ಡಿ ಬಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರವಾಗಿದ್ದು, ಚಿತ್ರದ ಹಾಡುಗಳು, ಟೀಸರ್ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿವೆ. ಉಮಾಪತಿ ನಿರ್ಮಾಣ, ತರುಣ್ ಸುಧೀರ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಮೊದಲ ಬಾರಿಗೆ ದರ್ಶನ್ ತ್ರಿಪಾತ್ರದಲ್ಲಿ ನಟಿಸುತ್ತಿರೋದರಿಂದ ಚಿತ್ರ ಹೆಚ್ಚು ಭರವಸೆಯನ್ನು ಮೂಡಿಸಿದೆ. ರಾಬರ್ಟ್ ಗೆ ಜೊತೆಯಾಗಿ ಆಶಾ ಭಟ್ ನಟಿಸುತ್ತಿದ್ದು, ಜಗಪತಿ ಬಾಬು, ರವಿ ಕಿಶನ್, ರವಿ ಶಂಕರ್, ದೇವರಾಜ್, ವಿನೋದ್ ಪ್ರಭಾಕರ್ ಸೇರಿದಂತೆ ದೊಡ್ಡ ತಾರಾ ಬಳಗವಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.

Comments

Leave a Reply

Your email address will not be published. Required fields are marked *