ಮರಣೋತ್ತರ ಪರೀಕ್ಷೆ ಪೂರ್ಣ- ಮತ್ತೊಂದು ಆಸ್ಪತ್ರೆಗೆ ದೇಹದ ಭಾಗ ರವಾನೆ

ಮುಂಬೈ: ಧೋನಿ ಸಿನಿಮಾ ಖ್ಯಾತಿಯ ಸುಶಾಂತ್‌ ಸಿಂಗ್‌ ರಜಪೂತ್‌ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಮೇಲ್ನೋಟಕ್ಕೆ ಇದು ಆತ್ಮಹತ್ಯಾ ಪ್ರಕರಣ ಎಂಬ ತೀರ್ಮಾನಕ್ಕೆ ಬರಲಾಗಿದೆ.

ಬಾಂದ್ರಾ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿದ್ದ ಸುಶಾಂತ್‌ ಅವರ ಮೃತದೇಹವನ್ನು ಡಾ. ಆರ್‌ಎನ್‌ ಕೂಪರ್‌ ಜನರಲ್‌ ಆಸ್ಪತ್ರಗೆ ರಾತ್ರಿ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಪರೀಕ್ಷೆ ಪೂರ್ಣಗೊಂಡಿದ್ದರೂ ಯಾವುದಾದರೂ ವಿಷಕಾರಕ ಅಂಶ ಇದೆಯೇ ಎಂದು ಪತ್ತೆ ಹಚ್ಚಲು ದೇಹದ ಭಾಗಗಗಳನ್ನು ಜೆಜೆ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

ಸುಶಾಂತ್‌ ಸಿಂಗ್‌ ಅವರ ಅಂತ್ಯಸಂಸ್ಕಾರವನ್ನು ತಂದೆ ಮತ್ತು ಸಂಬಂಧಿಕರು ನಡೆಸಲಿದ್ದು, ಇಂದು ಕುಟುಂಬದ ಸದಸ್ಯರು ಪಾಟ್ನಾದಿಂದ ಮುಂಬೈಗೆ ಬರಲಿದ್ದಾರೆ.

ಸುಶಾಂತ್‌ ಸಿಂಗ್‌ ರಜಪೂತ್‌ ನಿವಾಸಕ್ಕೆ ಭೇಟಿ ನೀಡಿದ್ದ ಡಿಸಿಪಿ ಅಭಿಷೇಕ್‌ ತ್ರಿಮೂಖೆ ಪ್ರತಿಕ್ರಿಯಿಸಿ, ಮೇಲ್ನೋಟಕ್ಕೆ ಇದು ಆತ್ಮಹತ್ಯಾ ಪ್ರಕರಣದಂತೆ ಕಾಣುತ್ತದೆ. ಕೃತ್ಯ ನಡೆದ ಸ್ಥಳದಲ್ಲೇ ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಗಲಿಲ್ಲ ಎಂದು ತಿಳಿಸಿದ್ದರು. ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಕೊನೆಯ ಮೂರು ಗಂಟೆ ಹೇಗಿತ್ತು?

ಸುಶಾಂತ್ ಸಾವಿಗೆ ಇದುವರೆಗೂ ನಿಖರ ಕಾರಣ ತಿಳಿದು ಬಂದಿಲ್ಲ ಮತ್ತು ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಹ ಲಭ್ಯವಾಗಿಲ್ಲ. ಪೊಲೀಸರು ಮನೆಯಲ್ಲಿದ್ದ ಮೂವರು ಮತ್ತು ನೆರೆಹೊರೆಯವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸುಶಾಂತ್ ಸಿಂಗ್ ಬಳಸುತ್ತಿದ್ದ ಮೊಬೈಲ್ ಸಹ ಪರಿಶೀಲನೆ ನಡೆಸಲಾಗುತ್ತಿದೆ.

ಖಾಸಗಿ ವಾಹಿನಿಯ ಪವಿತ್ರ ರಿಶ್ತಾ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಸುಶಾಂತ್, ಕೈ ಪೋ ಚೇ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ತದನಂತರ ಬಿಡುಗಡೆಯಾಗಿದ್ದ ‘ಶುದ್ಧ್ ದೇಶಿ ರೊಮ್ಯಾನ್ಸ್’ ಸಿನಿಮಾದ ನಟನೆ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಜೀವನಾಧರಿತ ಚಿತ್ರ ಸುಶಾಂತ್ ಸಿಂಗ್ ದೊಡ್ಡ ಮಟ್ಟದ ಬ್ರೇಕ್ ನೀಡಿತ್ತು.

2009ರಲ್ಲಿ ಪವಿತ್ರ ರಿಸ್ತಾ ಸಿನಿಮಾಕ್ಕಾಗಿ ಇಂಡಿಯನ್‌ ಟೆಲಿವಿಷನ್‌ ಅಕಾಡೆಮಿ ಪ್ರಶಸ್ತಿ, 2010ರಲ್ಲಿ ಬೆಸ್ಟ್‌ ಸ್ಟಾರ್‌ ಎಂಟರ್‌ಟೈನ್ಮೆಂಟ್‌ ಪ್ರಶಸ್ತಿ ಸಿಕ್ಕಿತ್ತು. ಎಂಎಸ್‌ ಧೋನಿ ಅನ್‌ಟೋಲ್ಡ್‌ ಸ್ಟೋರಿ ಸಿನಿಮಾದ ಅಭಿನಯಕ್ಕಾಗಿ 2017ರಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ನಡೆದ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ ಕಾರ್ಯಕ್ರಮದಲ್ಲಿ ಉತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದರು.

Comments

Leave a Reply

Your email address will not be published. Required fields are marked *