ರಾಯಚೂರು: ಕೆರೆ ನೋಡಲು ಹೋಗಿದ್ದ ಬಾಲಕ ನೀರು ಪಾಲಾಗಿರುವ ಘಟನೆ ಜಿಲ್ಲೆಯ ಕೃಷ್ಣಗಿರಿ ಹಿಲ್ಸ್‌ನಲ್ಲಿರುವ ಕೆರೆಯಲ್ಲಿ ನಡೆದಿದೆ.
ಆದರ್ಶ್ (13) ಮೃತ ಬಾಲಕ. ಆದರ್ಶ್ 8ನೇ ತರಗತಿ ವಿದ್ಯಾರ್ಥಿಯಾಗಿದ್ದು, ಶನಿವಾರ ಬೆಳಗ್ಗೆ 8 ಗಂಟೆಗೆ ಮನೆ ಪಾಠಕ್ಕೆಂದು ಹೋಗಿದ್ದನು. ಆದರೆ ಸಂಜೆಯಾದರೂ ಆದರ್ಶ್ ಮನೆಗೆ ವಾಪಸ್ ಬಂದಿರಲಿಲ್ಲ. ಆದರೆ ಇಂದು ಕೆರೆಯಲ್ಲಿ ಆದರ್ಶ್ ಶವ ಪತ್ತೆಯಾಗಿದೆ.

ಆದರ್ಶ್ ಮನೆ ಪಾಠ ಮುಗಿಸಿದ ನಂತರ ಸ್ನೇಹಿತರೊಂದಿಗೆ ಕೆರೆಗೆ ತೆರಳಿದ್ದನು ಎನ್ನಲಾಗಿದೆ. ಯಾಕೆಂದರೆ ಕೆರೆ ದಡದಲ್ಲಿ ಬೈಕ್ ಮತ್ತು ಬಟ್ಟೆ ಪತ್ತೆಯಾಗಿದ್ದವು. ನಂತರ ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿದೆ ಅಗ್ನಿಶಾಮಕ ದಳ ಬಾಲಕನಿಗಾಗಿ ಕೆರೆಯಲ್ಲಿ ಶೋಧಕಾರ್ಯ ನಡೆಸಿದೆ. ಈ ವೇಳೆ ಆದರ್ಶ್ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.

ಸದರಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳದಲ್ಲಿ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. ಕೆರೆಯಲ್ಲಿ ಈಜಲು ಹೋಗಿ ಬಾಲಕ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Leave a Reply