ಮನೆಯಿಂದ ಹೊರಟೋಗಿ ಬಿಡೋಣ ಅನ್ನಿಸಿತ್ತು : ಮಂಜು

ಬಿಗ್ ಬಾಸ್ ಮನೆಯಲ್ಲಿ ಈಗ ಅರ್ಧ ಶತಕದ ಸಂಭ್ರಮದಲ್ಲಿ ಸ್ಪರ್ಧಿಗಳಿದ್ದಾರೆ. ಬಿಗ್‍ಬಾಸ್ ಶುರುವಾಗಿ ಬರೋಬ್ಬರಿ 50 ದಿನ ಆಗಿದೆ. ಆ ಹಿನ್ನೆಲೆಯಲ್ಲಿ ಮನೆಯ ಎಲ್ಲ ಸದಸ್ಯರಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿನ ನೆನಪು ಇಟ್ಟುಕೊಳ್ಳುವಂತಹ ಘಟನೆ ಮತ್ತು ಮರೆಯುವಂತಹ ಘಟನೆಗಳ ಬಗ್ಗೆ ಸ್ಪರ್ಧಿಗಳು ಹೇಳಬೇಕಿತ್ತು. ಆಗ ಮಂಜು ಪಾವಗಡ ತುಂಬಾ ಬೇಸರದಿಂದ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಾನು ಎಲ್ಲರ ಜೊತೆಗೆ ತುಂಬ ಸಂತೋಷದಿಂದ ಇದ್ದೇನೆ. ಖುಷಿಯಾಗಿ, ಮಜಾವಾಗಿದ್ದೇನೆ. ಎಲ್ಲವನ್ನು ನಾನು ನೆನಪಲ್ಲಿ ಇಟ್ಕೋತಿನಿ. ಆದರೆ, ಮರೆಯಬೇಕು ಅಂದರೆ, ನಿನ್ನೆಯ ದಿನವನ್ನು ನಾನು ಮರೆಯುವುದಕ್ಕೆ ಇಷ್ಟಪಡ್ತಿನಿ. ಯಾಕೆಂದರೆ ನನ್ನ ಜೀವನದಲ್ಲಿ ಅಷ್ಟೊಂದು ನೋವು ಯಾವತ್ತೂ ಆಗಿರಲಿಲ್ಲ. ನನ್ನ ಕರಿಯರ್, ನಟನಾ ಜೀವನ ಎಲ್ಲ ಸೇರಿಸಿ ಹೇಳ್ತಾ ಇದ್ದೀನಿ. ನನ್ನ 33 ವರ್ಷಗಳಲ್ಲಿ ಯಾವತ್ತೂ ಹೀಗೆ ಆಗಿರಲಿಲ್ಲ! ಅಷ್ಟೊಂದು ನೋವು ನಿನ್ನೆ ಆಯ್ತು. ಇಲ್ಲಿ ನಾನು ಒಬ್ಬನೇ ಅನ್ನಿಸೋಕೆ ಸ್ಟಾರ್ಟ್ ಆಯ್ತು ಎಂದು ಹೇಳುತ್ತಾ ಮಂಜು ಭಾವುಕರಾದರು.

ತಪ್ಪೋ, ಸರಿನೋ, ನೀನ್ ಮಾಡಿದ್ದು ತಪ್ಪು ಅಂತ ಹೇಳೋದಕ್ಕೆ ಆದರೂ ಒಬ್ಬರು ಬರಬೇಕು ಗುರು. 50 ದಿನದ ಜರ್ನಿ. ರಪರಪ ಅಂತ ಹೋಯ್ತು. ಅವೆಲ್ಲ ಖುಷಿಯಾದ ದಿನಗಳು. ನಿನ್ನೆಯಿಂದ ಯಾರೂ ಮುಖ ಕೂಡ ನೋಡ್ತಾ ಇಲ್ಲ. ಯಾರೂ ಮಾತನಾಡಿಸುತ್ತಿಲ್ಲ. ಜೊತೆಯಲ್ಲಿ ಇದ್ದೇವೆ ಗುರು, ನೀನ್ ಮಾಡಿದ್ದು ತಪ್ಪು ಅಂತ ಹೇಳಿ. ನಾನು ಒಪೆÇ್ಕೀತಿನಿ… ಸರಿ ಅಂತನಾದರೂ ಹೇಳು… ಟಾಸ್ಕ್‍ಗಳನ್ನು ಹೊರತುಪಡಿಸಿ, ನಾವು ಸಂಬಂಧಗಳನ್ನು ಬೆಳೆಸಿದ್ದೇವೆ. ನಿನ್ನೆ ಹೊರಟೋಗಿ ಬಿಡೋಣ ಅಂತನ್ನಿಸಿದೆ ನನಗೆ. ಎಷ್ಟೇ ಕ್ಲೋಸ್ ಇರಲಿ, ಯಾರು ಪ್ರತಿಕ್ರಿಯೆ ನೀಡದೇ ಇದ್ದಾಗ, ನಾಟಕ ಮಾಡ್ತಾ ಇದ್ದಾರೆ ಅನ್ನಿಸಿಬಿಡುತ್ತದೆ. ಆ ರೀತಿ ಯಾರು ಮಾಡಬೇಡಿ.. ನಿನ್ನೆಯ ಘಟನೆಯನ್ನು ನಾನು ಮರೆಯುವುದಕ್ಕೆ ಪ್ರಯತ್ನಿಸುತ್ತೇನೆ ಎಂದು ಮಂಜು ಹೇಳಿದರು.

 ಮಂಜು ಒಂದು ಟಾಸ್ಕ್‍ನಲ್ಲಿ ದಿವ್ಯಾ ಸುರೇಶ್ ಅವರಿಗೆ ಸಹಾಯ ಮಾಡಿದ್ದು, ಇಡೀ ಮನೆ ಮಂದಿಯ ದ್ವೇಷ, ಸಿಟ್ಟು, ಬೇಸರಕ್ಕೆ ಕಾರಣವಾಗಿದೆ. ಮಂಜು ಮೊದಲಿನಂತೆ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಅವರು ಕೆಲವು ದಿನಗಳಿಂದ ತುಂಬಾ ಬೇಸರದಿಂದ ಇದ್ದಾರೆ ಎನ್ನುವುದು ಸತ್ಯ. ಸ್ನೇಹಕ್ಕಾಗಿ ಸಹಾಯ ಮಾಡಲು ಹೋಗಿ ಮಂಜು ಕುರಿತಾಗಿ ಬಿಗ್‍ಬಾಸ್ ಸ್ಪರ್ಧಿಗಳು, ಮತ್ತು ವೀಕ್ಷಕರಿಗೆ ಕೊಂಚ ಬೇಸರ ಇರುವುದು ಹೌದು.

Comments

Leave a Reply

Your email address will not be published. Required fields are marked *