ಮನೆಯಲ್ಲಿ ಮಾಡಿ ಘಮಘಮಿಸುವ ಪಾಲಕ್ ಚಿಕನ್ ಕರಿ

ಮಾಂಸಹಾರಿಗಳು ವಿವಿಧ ಬಗೆಯ ಆಹಾರಗಳನ್ನು ಸವಿಯಲು ಇಷ್ಟ ಪಡುತ್ತಾರೆ. ಹೋಟೆಲ್‍ಗಳಲ್ಲಿ ಸಿಗುವ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸಲು ಇಷ್ಟ ಪಡುತ್ತಾರೆ. ಹೀಗಾಗಿ ನೀವು ಇಂದು ಹೋಟೆಲ್‍ನಲ್ಲಿ ಸಿಗುವ ಟೇಸ್ಟ್ ಹಾಗೇಯೆ ಪಾಲಾಕ್ ಚಿಕನ್ ಮಾಡಿ ಸವಿಯಿರಿ.

ಬೇಕಾಗುವ ಸಾಮಗ್ರಿಗಳು:
* ಕೋಳಿ ಮಾಂಸ – 1 ಕೆ.ಜಿ
*ಪಾಲಕ್ – 1 ಕಟ್ಟು *
*ಈರುಳ್ಳಿ – 1
*ಬೆಳ್ಳುಳ್ಳಿ – 4
*ಅಡುಗೆ ಎಣ್ಣೆ – 1 ಕಪ್
*ಅರಿಶಿನ – 1 ಟೀ ಸ್ಪೂನ್
*ಖಾರದ ಪುಡಿ – 1 ಟೀ ಸ್ಪೂನ್
*ಜೀರಿಗೆ – 1 ಟೀ ಸ್ಪೂನ್
*ಕೊತ್ತಂಬರಿ – 1 ಟೀ ಸ್ಪೂನ್
*ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:
* ಕೋಳಿ ಮಾಂಸವನ್ನು ತೊಳೆದು ಸ್ವಚ್ಛಗೊಳಿಸಿ ಪಕ್ಕಕ್ಕಿಡಿ.

* ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿಕೊಳ್ಳಿ. ಇದಕ್ಕೆ ಬೆಳ್ಳುಳ್ಳಿಯನ್ನು ಹಾಕಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ.
* ಕತ್ತರಿಸಿದ ಈರುಳ್ಳಿಯನ್ನು ಹಾಕಿ, ಕಂದು ಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ. ಜೀರಿಗೆ, ಕೊತ್ತಂಬರಿ ಪುಡಿ, ಅರಿಶಿಣ, ಅಡುಗೆಎಣ್ಣೆ, ಖಾರದಪುಡಿ ಎಲ್ಲಾ ಮಸಾಲೆ ಪದಾರ್ಥಗಳನ್ನು ಹಾಕಿ 2 ನಿಮಿಷ ಬಿಡಿ.

* ನಂತರ 1 ಕಪ್ ನೀರನ್ನು ಹಾಕಿ ಪೇಸ್ಟ್ ರೀತಿ ಬಾಣಲೆಯಲ್ಲಿ ಕಲೆಸಿಕೊಳ್ಳಿ.
* ಬಾಣಲೆಯಲ್ಲಿ ಒಮ್ಮೆ ಮಸಾಲೆಯಲ್ಲ ಸೇರಿದ ಮೇಲೆ, ಅದಕ್ಕೆ ಕೋಳಿ ಮಾಂಸವನ್ನು ಹಾಕಿ ಚೆನ್ನಾಗಿ ಬೇಯಿಸಬೇಕು.

* ಕೋಳಿ ಮಾಂಸವು ಮೃದುವಾಗುವವರೆಗೆ ಬೇಯಿಸಿ. ಅಗತ್ಯ ಬಿದ್ದರೆ ನೀರನ್ನು ಬೆರೆಸಿ.
* ಯಾವಾಗ ಕೋಳಿ ಮಾಂಸವು ಬೆಂದಿತು ಎನಿಸುತ್ತದೆಯೋ, ಆಗ ಅದಕ್ಕೆ ಪಾಲಕ್ ಸೇರಿಸಿ. ಬಾಣಲೆಯ ಮುಚ್ಚಳವನ್ನು ಮುಚ್ಚಿ. ಮಧ್ಯಮ ಗಾತ್ರದ ಉರಿಯಲ್ಲಿ ಇವುಗಳನ್ನು ಬೇಯಿಸಿದರೆ ರುಚಿಯಾದ ಪಾಲಕ್ ಚಿಕನ್ ಕರಿ ಸಿದ್ಧವಾಗುತ್ತದೆ.

Comments

Leave a Reply

Your email address will not be published. Required fields are marked *