‘ಮನೆಗೆಲಸಕ್ಕೆ ಬರಬೇಡಿ’- ವಯೋವೃದ್ಧೆಯ ಬದುಕು ಬದಲಿಸಿದ ಕೊರೊನಾ

ಬೆಂಗಳೂರು: ಕೊರೊನಾ ಸುನಾಮಿ ಹಲವರ ಬದುಕನ್ನು ಅತಂತ್ರ ಮಾಡಿದೆ. ಲಾಕ್‍ಡೌನ್‍ಗೂ ಮುಂಚೆ ಹೇಗೋ ಜೀವನಸಾಗಿಸುತ್ತಿದ್ದ ವಯೋವೃದ್ಧೆಯರು ಈಗ ದುಡಿಮೆಗಾಗಿ ಗಾಳಿ, ಬಿಸಿಲು, ಮಳೆ ಎನ್ನದಂತೆ ದುಡಿಯಬೇಕಿದೆ. ಕೊರೊನಾ ಎಂಬ ಮಹಾಮಾರಿ ಬದುಕು ಬದಲಿಸಿ ಈಗ ಬೀದಿಯಲ್ಲಿ ನಿಂತು ಕೆಲಸ ಮಾಡುವಂತೆ ಮಾಡಿದೆ.

ಮನೆಗೆಲಸ ಮಾಡುತ್ತಿದ್ದ ಮಹಿಳೆ, ಕಳೆದ 10 ವರ್ಷಗಳಿಂದ ತಿಂಗಳಿಗೊಮ್ಮೆ ಸಂಬಳ. ಹತ್ತಾರು ಮನೆಯಲ್ಲಿ ಅಡುಗೆ, ಕ್ಲಿನಿಂಗ್ ಕೆಲಸ ಇಷ್ಟೇ ಈಕೆ ಪ್ರಪಂಚವಾಗಿತ್ತು. ಆದರೆ ಇದೀಗ ಎಲ್ಲವೂ ಬದಲಾಗಿದೆ. ಕೊರೊನಾದಿಂದ ಮನೆ ಕೆಲಸದವರನ್ನು ಒಂದೊಂದಾಗಿ ತೆಗೆಯುವ ಪ್ರಕ್ರಿಯೆ ಶುರುವಾಯಿತು.

ಕಡೆಗೆ ಮನೆಗೆಲಸ ಇಲ್ಲದೇ ದಾರಿ ಕಾಣಲ್ಲ. ಈ ಕೆಲಸ ಬಿಟ್ಟು ಬೇರೆ ತಿಳಿಯದ ಈಕೆಗೆ ಕಡೆಗೆ ಕಂಡಿದ್ದು, ಸೊಪ್ಪಿನ ವ್ಯಾಪಾರ, ಲಾಕ್‍ಡೌನ್,  ಕರ್ಫ್ಯೂ ಏನಿದ್ದರೂ ಸೊಪ್ಪು ಮಾರಾಟ ಮಾಡಬಹುದು. ಮಳೆ, ಗಾಳಿ, ಬಿಸಿಲು ಏನಿದ್ದರೂ ನಿತ್ಯ ತಿನ್ನೊ ಅನ್ನಕ್ಕೆ ಅಡ್ಡಿ ಇಲ್ಲ. ಆದರೆ ಅನೇಕಲ್ ಗೆ ಹೋಗಿ ಮಾಲ್ ತರಬೇಕು. ಇದೇ ಸವಾಲಾಗಿರುವುದು ಎಂದು ಮನೆಕೆಲಸದಾಕೆ ಜಯಮ್ಮ ಹೇಳುತ್ತಾರೆ.

ರೇಷನ್ ಕಾರ್ಡ್ ಇಲ್ಲ ಉಚಿತ ಅಕ್ಕಿ ಇಲ್ಲ, ಕೋವಿಡ್ ಬಂದರೆ ಕಡಿಮೆ ಬೆಲೆಗೆ ಟ್ರೀಟ್ಮೆಂಟ್ ಸಹ ಇಲ್ಲ. ಹೀಗಾಗಿ ಬದುಕು ದುಸ್ತರವಾಗಿದೆ. ಸರ್ಕಾರ ನಮಗೆ ಕನಿಷ್ಠ ಕೆಲಸ ಕೊಡಲು ಆಗಲ್ಲ, ಕೊರೊನಾದಿಂದ ದುಡಿಮೆ ಕಳೆದುಕೊಂಡ ನಮಗೆ ರೇಷನ್ ಕಾರ್ಡ್ ಕೊಡಿ ಅನ್ನೊದೆ ಡಿಮ್ಯಾಂಡ್ ಆಗಿದೆ.

Comments

Leave a Reply

Your email address will not be published. Required fields are marked *