ಮನುಕುಲದ ಬಗ್ಗೆ ಯೋಚಿಸೋದು ಅಪರಾಧ ಆಗಿದ್ದು ಯಾವಾಗ?: ದಿಶಾ ರವಿ

ಬೆಂಗಳೂರು: ಟೂಲ್‍ಕಿಟ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದ ಬಳಿಕ ಮೊದಲ ಬಾರಿಗೆ ಪರಿಸರ ಹೋರಾಟಗಾರ್ತಿ ದಿಶಾ ರವಿ ಪ್ರತಿಕ್ರಿಯೆ ನೀಡಿದ್ದಾರೆ. ರೈತರ ಪ್ರತಿಭಟನೆಗೆ ಸಂಬಂಧಿಸಿದ ಟೂಲ್‍ಕಿಟ್ ಪ್ರಕರಣದಲ್ಲಿ ದಿಶಾ ಅವರನ್ನ ಬಂಧಿಸಲಾಗಿತ್ತು, ನಂತರ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಟ್ವಿಟ್ಟರ್ ನಲ್ಲಿ ನಾಲ್ಕು ಪುಟಗಳ ಪ್ರತಿಕ್ರಿಯೆ ನೀಡಿರುವ ದಿಶಾ ರವಿ, ಜನರ ಬಗ್ಗೆ ಯೋಚನೆ ಮಾಡೋದು ಯಾವಾಗ ಅಪರಾಧ ಆಯ್ತು ಎಂದು ಪ್ರಶ್ನೆ ಮಾಡಿದ್ದಾರೆ.

ತಮ್ಮ ಬಂಧನ ಮತ್ತು ನ್ಯಾಯಾಂಗ ಬಂಧನದಲ್ಲಿದ್ದ ದಿನಗಳ ಬಗ್ಗೆ ಬರೆದುಕೊಂಡಿರುವ ದಿಶಾ ರವಿ, ಅಲ್ಲಿ ನನ್ನನ್ನೇ ನಾನು ಪ್ರಶ್ನೆ ಮಾಡಿಕೊಳ್ಳುತ್ತಿದ್ದೆ, ಇದೆಲ್ಲ ಹೇಗಾಯ್ತು? ಆದ್ರೆ ನನ್ನ ಬಳಿ ಉತ್ತರವಿರಲಿಲ್ಲ. ಬಂದಿರೋ ಸಮಸ್ಯೆಯನ್ನ ಎದುರಿಸೋದು ಮಾತ್ರ ನನ್ನ ಮುಂದಿನ ಗುರಿಯಾಗಿತ್ತು. ಕೋರ್ಟ್ ನಲ್ಲಿ ನಿಂತಾಗ ನನಗೆ ಕಾನೂನಿನ ಸಹಾಯ ಸಿಗುತ್ತಾ ಅನ್ನೋದು ತಿಳಿದಿರಲಿಲ್ಲ. ಒಂದು ನ್ಯಾಯಾಧೀಶರು ನನ್ನನ್ನ ಕೇಳಿದ್ರೆ ಮನದ ಮಾತುಗಳನ್ನ ಹೇಳಲು ಸಿದ್ಧಳಾಗಿದ್ದೆ. ಆದ್ರೆ ಅಷ್ಟರಲ್ಲಿಯೇ ನನ್ನನ್ನು 5 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು.

ಜೈಲಿನಲ್ಲಿದ್ದಾಗ ಪ್ರತಿ ಗಂಟೆ, ನಿನಮಿಷ, ಸೆಕೆಂಡ್ ಜೀವನದಲ್ಲಿ ಹೊಸದಾಗಿ ಕಾಣಿಸುತ್ತಿತ್ತು. ಒಬ್ಬಳೇ ಕುಳಿತಾಗ, ಭೂಮಿ ಮೇಲೆ ಜನರ ಬಗ್ಗೆ ಯೋಚಿಸೋದು ಯಾವಾಗ ತಪ್ಪಾಯ್ತು? ಭೂಮಿ ಮೇಲೆ ಜೀವಿಸೋ ಹಕ್ಕು ನನಗೆ ಎಷ್ಟಿದೆಯೋ ಅವರಿಗೂ ಅಷ್ಟೇ ಇದೆ ಅಲ್ವಾ ವಿಚಾರಗಳು ನನ್ನನ್ನ ಕಾಡುತ್ತಿದ್ದವು. ಕೆಲ ಮಾಧ್ಯಮಗಳ ನನ್ನ ಕೆಲಸವನ್ನ ತಪ್ಪು ಎಂದು ಹೇಳಿದವು. ಆದರೆ ನ್ಯಾಯಾಲಯ ಆ ರೀತಿ ಹೇಳಿಲ್ಲ. ನನಗೆ ಕಡಿಮೆ ಶುಲ್ಕದಲ್ಲಿ ಹಿರಿಯ ವಕೀಲರು ನನ್ನ ಪರವಾಗಿ ವಾದ ಮಂಡಿಸಿದರು ಎಂದು ಬರೆದುಕೊಂಡಿದ್ದಾರೆ.

21 ವರ್ಷದ ದಿಶಾ ರವಿ ಓರ್ವ ಪರಿಸರ ಹೋರಾಟಗಾರ್ತಿಯಾಗಿದ್ದು, ಭಾರತದಲ್ಲಿ ಫ್ರೈಡೆ ಫಾರ್ ಫ್ಯೂಚರ್ ಹೆಸರಿನ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದ್ದರು. ದಿಶಾ ರವಿ ತಂದೆ ಮೈಸೂರಿನಲ್ಲಿ ಅಥ್ಲೆಟಿಕ್ಸ್ ಕೋಚ್ ಆಗಿದ್ದು ತಾಯಿ ಗೃಹಿಣಿಯಾಗಿದ್ದಾರೆ. ಈ ಟ್ವೀಟ್ ಮಾಡಿ ಬೆಂಬಲ ನೀಡಲು ಟೂಲ್ ಕಿಟ್ ಮುಖಾಂತರ ಹಣ ಪಡೆದ ಆರೋಪ ದಿಶಾ ರವಿ ಮೇಲಿದೆ.

ದೇಶದಲ್ಲಿ ನಡೆಯುತ್ತಿರುವ ಕೃಷಿ ಆಂದೋಲನವನ್ನು ಬೆಂಬಲಿಸಿ ಗ್ರೇಟಾ ಥನ್‍ಬರ್ಗ್ ಇತೀಚೆಗೆ ಟ್ವೀಟ್ ಮಾಡಿದ್ದರು. ಇದರ ಜೊತೆ ಇನ್ನೊಂದು ಟ್ವೀಟ್ ಮಾಡಿ ಒಂದು ಡಾಕ್ಯುಮೆಂಟ್ ರಿಲೀಸ್ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಹೇಗೆ ಚಳವಳಿ ನಡೆಸಬೇಕು ಎಂಬ ಕಾರ್ಯಯೋಜನೆ ಟೂಲ್ ಕಿಟ್ ನಲ್ಲಿತ್ತು. ಆ ಟ್ವೀಟ್ ಭಾರತದಲ್ಲಿನ ಕೃಷಿ ಚಳವಳಿಯಲ್ಲಿ ವಿದೇಶಿ ಶಕ್ತಿಗಳ ಕೈವಾಡವನ್ನು ಬಯಲಿಗೆಳೆದಿದೆ ಎಂದು ಬಿಜೆಪಿ ಆಪಾದಿಸಿತ್ತು. ಈ ಆರೋಪಗಳ ಬೆನ್ನಲ್ಲೇ ಗ್ರೇಟಾ ಥನ್‍ಬರ್ಗ್ ಟೂಲ್ ಕಿಟ್ ತನ್ನ ಟ್ವೀಟ್ ಡಿಲೀಟ್ ಮಾಡಿದ್ದರು. ನಂತರ ಹೊಸ ಟ್ವೀಟ್ ಮಾಡಿ ಹೊಸ ಟೂಲ್ ಕಿಟ್ ಬಿಡುಗಡೆ ಮಾಡಿದ್ದರು.

Comments

Leave a Reply

Your email address will not be published. Required fields are marked *