‘ಮದ್ವೆ ನಂತರವೂ ದೈಹಿಕ ಸಂಬಂಧ ಮುಂದುವರಿಸು’ – ಚಿಕ್ಕಪ್ಪನ ವಿರುದ್ಧ ಯುವತಿ ದೂರು

– ಖಾಸಗಿ ವಿಡಿಯೋವನ್ನ ಯುವತಿಯ ತಂದೆಗೆ ಕಳುಹಿಸಿದ

ಗಾಂಧಿನಗರ: ಅನೈತಿಕ ಸಂಬಂಧದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಚಿಕ್ಕಪ್ಪನ ವಿರುದ್ಧ ಯುವತಿಯೊಬ್ಬಳು ದೂರು ದಾಖಲಿಸಿರುವ ಘಟನೆ ಗುಜರಾತ್‍ನ ಸೂರತ್‍ನಲ್ಲಿ ನಡೆದಿದೆ.

ಸೌರಾಷ್ಟ್ರ ಮೂಲದ 25 ವರ್ಷದ ಯುವತಿ ಸೂರತ್‍ನ ಪುನಾ ಪ್ರದೇಶದಲ್ಲಿ ವಾಸಿಸುತ್ತಿದ್ದಾಳೆ. ಸೀರೆಗಳಿಗೆ ಕುಸುರಿ ಮತ್ತು ಲೇಸ್ ವರ್ಕ್ ಮಾಡುವ ಮೂಲಕ ಜೀವನ ನಡೆಸುತ್ತಿದ್ದಳು. ಇದೀಗ 30 ವರ್ಷದ ತನ್ನ ಚಿಕ್ಕಪ್ಪ ಕರಣ್ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾನೆ ಎಂದು ಆತನ ವಿರುದ್ಧ ದೂರು ದಾಖಲಿಸಿದ್ದಾಳೆ.

ಏನಿದು ಪ್ರಕರಣ?
ಆರೋಪಿ ಕರಣ್ ಯುವತಿಯ ತಂದೆಯ ಸಂಬಂಧಿಯಾಗಿದ್ದು, ಚಿಕ್ಕಪ್ಪ ಆಗಬೇಕು. ಈತ ಪ್ರತಿದಿನ ಯುವತಿಯ ಮನೆಗೆ ಭೇಟಿ ನೀಡುತ್ತಿದ್ದನು. ಆದರೆ ಯುವತಿಗೆ ತನ್ನನ್ನು ಚಿಕ್ಕಪ್ಪ ಎಂದು ಕರೆಯಬೇಡ ಎಂದಿದ್ದನು. ಒಂದು ವರ್ಷದ ಹಿಂದೆ ಕರಣ್ ಆಕೆಗೆ ಪ್ರಪೋಸ್ ಮಾಡಿದ್ದು, ನಂತರ ಇಬ್ಬರು ಸಂಬಂಧ ಹೊಂದಿದ್ದರು. ಸಂಬಂಧ ಹೊಂದಿದ ಒಂದು ತಿಂಗಳ ನಂತರ ಆತ ಇಬ್ಬರು ಒಟ್ಟಿಗೆ ಇದ್ದಾಗ ವಿಡಿಯೋಗಳನ್ನು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ತಿಂಗಳ ಹಿಂದೆ ಯುವತಿಯ ಕುಟುಂಬದವರು ಆಕೆಗೆ ಮದುವೆ ಮಾಡಲು ಹುಡುಗನನ್ನು ಹುಡುಕುತ್ತಿದ್ದರು. ಈ ಬಗ್ಗೆ ತಿಳಿದು ಕರಣ್ ಮದುವೆಯ ನಂತರವೂ ತನ್ನೊಂದಿಗೆ ದೈಹಿಕ ಸಂಬಂಧವನ್ನು ಮುಂದುವರಿಸುವಂತೆ ಕೇಳಿದ್ದಾನೆ. ಆಗ ಯುವತಿಯ ಇದಕ್ಕೆ ನಿರಾಕರಿಸಿದ್ದು, ಆತನೊಂದಿಗಿನ ಸಂಬಂಧವನ್ನು ನಿಲ್ಲಿಸಿದ್ದಾಳೆ.

ಇದರಿಂದ ಕೋಪಗೊಂಡ ಕರಣ್ ಖಾಸಗಿ ವಿಡಿಯೋವನ್ನು ಆಕೆಯ ತಂದೆಗೆ ಕಳುಹಿಸಿದ್ದಾನೆ. ಜೊತೆಗೆ ಆಕೆಯ ಕುಟುಂಬದವರಿಗೆ ಮತ್ತು ಇತರ ಕೆಲವರಿಗೆ ಕಳುಹಿಸಿದ್ದಾನೆ. ತಕ್ಷಣ ಕುಟುಂಬದವರು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.

ಐಪಿಸಿ ಸೆಕ್ಷನ್ ಮತ್ತು ಐಟಿ ಕಾಯ್ದೆಯ ಅಡಿಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದು, ಪೂನಾ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆರೋಪಿ ದೂರು ದಾಖಲಿಸುತ್ತಿದ್ದಂತೆ ತನ್ನ ಊರಿಗೆ ಪರಾರಿಯಾಗಿದ್ದಾನೆ. ಹೀಗಾಗಿ ಪೊಲೀಸರು ಆತನಿಗಾಗಿ ಶೋಧ ಕಾರ್ಯ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *