ಮುಂಬೈ: ಮದುವೆ ಸಮಾರಂಭದಲ್ಲಿ ಕೋವಿಡ್ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ದಂಪತಿಗೆ 50 ಸಾವಿರ ದಂಡ ವಿಧಿಸಿರುವ ಘಟನೆ ಮಹರಾಷ್ಟ್ರದ ಪಾಲ್ಘರ್‍ನಲ್ಲಿ ನಡೆದಿದೆ.

ಕಳೆದ ವರ್ಷ ದೇಶದಲ್ಲಿ ಕೋವಿಡ್-19 ಮಹಾಮಾರಿ ಅಟ್ಟಹಾಸ ಮೆರೆದಿತ್ತು. ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಜನ ತತ್ತರಿಸಿ ಹೋಗಿದ್ದರು. ಅಲ್ಲದೆ ಎಲ್ಲೆಡೆ ಲಾಕ್‍ಡೌನ್ ಜಾರಿಗೊಳಿಸಿ ಹಲವು ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ನಂತರ ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಕಂಡು ಹಿಡಿದು, ಇದೀಗ ದೇಶ ಕೊಂಚ ಮಟ್ಟಿಗೆ ಸುಧಾರಿಸಿಕೊಳ್ಳುತ್ತಿದೆ. ಆದರೆ ಇದೀಗ ಕೊರೊನಾ ದೇಶದಲ್ಲಿ ಮತ್ತೆ ತನ್ನ ಆರ್ಭಟವನ್ನು ಶುರು ಮಾಡುತ್ತಿದೆ.

ಈ ನಡುವೆ ಮಹಾರಾಷ್ಟ್ರದಲ್ಲಿ ಕೊರೊನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಮತ್ತೆ ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೊಳಿಸಿದೆ. ಅಲ್ಲದೆ ಈ ಹಿಂದೆ ಲಾಕ್‍ಡೌನ್ ಸಮಯದಲ್ಲಿ ಹೇರಲಾಗಿದ್ದ ಕೆಲವೊಂದಷ್ಟು ನಿಯಮಗಳನ್ನು ಮತ್ತೆ ಜಾರಿಗೆ ತಂದಿದೆ.
ಆದರೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಕೋವಿಡ್-19 ನಿಯಮವನ್ನು ಉಲ್ಲಂಘಿಸಿ ಮಗನ ಮದುವೆ ಮಾಡುತ್ತಿದ್ದ ದಂಪತಿಗೆ 50,000 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಈ ಮದುವೆ ಸಮಾರಂಭದಲ್ಲಿ 300 ಮಂದಿ ಭಾಗವಹಿಸಿದ್ದು, ಅವರಲ್ಲಿ ಎಷ್ಟೋ ಮಂದಿ ಮಾಸ್ಕ್ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಹಾಗಾಗಿ ವರನ ಪೋಷಕರಿಗೆ 50,000 ದಂಡ ವಿಧಿಸಲಾಗಿದೆ ಎಂದು ತಹಶೀಲ್ದಾರ್ ಉದ್ಧವ್ ಕದಮ್ ಹೇಳಿದ್ದಾರೆ.

Leave a Reply