– ವೀಡಿಯೋ ವೈರಲ್
ಲಕ್ನೋ: ಮದುವೆಯಲ್ಲಿ ಉಗುಳಿ ರೋಟಿ ತಯಾರಿಸುತ್ತಿದ್ದ ಯುವಕನನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಸೋಹೆಲ್ ಬಂಧಿತ ಯುವಕ. ಮೀರತ್ ಮದುವೆಯಲ್ಲಿ ಅಡುಗೆ ಮಾಡುತ್ತಿದ್ದ ಸೋಹೆಲ್ ಪ್ರತಿ ರೋಟಿಯ ಮೇಲೆ ಉಗುಳಿ ಬೇಯಿಸುತ್ತಿದ್ದನು. ಕೆಲವರು ಈ ದೃಶ್ಯ ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ವೀಡಿಯೋ ವೈರಲ್ ಬಳಿಕ ಮೀರತ್ ಹಿಂದೂ ಜಾಗರಣ ವೇದಿಕೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿ, ಆರೋಪಿಯನ್ನ ಬಂಧಿಸುವಂತೆ ಒತ್ತಾಯಿಸಿತ್ತು.

ಮೀರತ್ ನಗರದ ಅರೋಮಾ ಗಾರ್ಡನ್ ನಲ್ಲಿ ಈ ಮದುವೆ ನಡೆದಿರೋದನ್ನ ಹಿಂದೂ ಜಾಗರಣ ವೇದಿಕೆಯೇ ಪೊಲೀಸರಿಗೆ ಮಾಹಿತಿ ನೀಡಿತ್ತು. ಮೀರತ್ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಸಚಿನ್ ಸಿರೋಹಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಕಾರ್ಯಕರ್ತರು ಆರೋಪಿಯ ಗುರುತು ಪತ್ತೆ ಮಾಡಿದ್ದರು. ಸದ್ಯ ಆರೋಪಿ ಸೋಹೆಲ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
अब तो शादी ब्याह में खाना खाने में झिझक होगी । कितनी गंदी हरकत है। https://t.co/MreNyTFkmO
— Meenakshi Joshi (@IMinakshiJoshi) February 21, 2021

Leave a Reply