ಮದುವೆಯಾಗಬೇಕಿದ್ದ ಮಹಿಳಾ ಎಸ್‍ಐ ನೇಣು ಬಿಗಿದು ಆತ್ಮಹತ್ಯೆ

ಲಕ್ನೋ: ಸಬ್ ಇನ್ಸ್‍ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ಮದುವೆಗೆ ಕೆಲವು ದಿನಗಳು ಬಾಕಿ ಇರುವಾಗ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸಬ್ ಇನ್ಸ್‍ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ನನ್ನ ಸಹೋದರಿಯ ಮೇಲೆ ಪೊಲೀಸ್ ಅಕಾಡೆಮಿ ಬೋಧಕ ಅತ್ಯಾಚಾರ ಎಸಗಿದ್ದಾನೆ. ಆಕೆಯನ್ನು ಚಹಾ ಕುಡಿಯಲು ಬಾ ಎಂದು ಕರೆದು ಅದರಲ್ಲಿ ನಿದ್ರೆಮಾತ್ರೆಗಳನ್ನು ಬೆರೆಸಿಕೊಟ್ಟಿದ್ದನು. ಆಕೆಯ ಮೇಲೆ ಅತ್ಯಾಚಾರ ಮಾಡಿ ವೀಡಿಯೋವನ್ನು ಮಾಡಿಕೊಂಡಿಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದನು. ಈ ವಿಚಾರವಾಗಿ ಮನನೊಂದಿದ್ದ ನನ್ನ ಸಹೋದರಿ ಮದುವೆಗೆ ಕೆಲವು ದಿನಗಳು ಬಾಕಿ ಇರುವಾಗ ಉತ್ತರ ಪ್ರದೇಶದ ಮೊರಾದಾಬಾದ್‍ನಲ್ಲಿ ನೇಣು ಬಿಗಿದುಕೊಂಡಿದ್ದಾಳೆ ಎಂದು ಮಹಿಳೆಯ ಸಹೋದರ ಆರೋಪಿಸಿದ್ದಾನೆ.

ಕಳೆದ 7 ವರ್ಷಗಳಿಂದ ಮಹಿಳೆ ಬೋಧಕನೊಂದಿಗೆ ಡೇಟಿಂಗ್ ಮಾಡುತ್ತಿದ್ದಳು. ದಿನಕ್ಕೆ 25 ಬಾರಿ ಗಿಂತ ಹೆಚ್ಚು ಸಮಯ ಆತನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದಳು. ಅವಳು ಬೇರೆಯವರನ್ನು ಮದುವೆಯಾಗಲು ಹೊರಟಿದ್ದಳು. ಈ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಇತ್ತು. ಮದುವೆಯನ್ನು ನಿಲ್ಲಿಸುವಂತೆ ಆಕೆಗೆ ಹೇಳಿದ್ದನು. ಆದರೆ ಆಕೆ ಇದಕ್ಕೆ ಒಪ್ಪಲಿಲ್ಲ, ಮಹಿಳಾ ಎಸ್‍ಐಗೆ ಆತ ಬ್ಲ್ಯಾಕ್‍ಮೇಲ್ ಮಾಡಲು ಪ್ರಾರಂಭಿಸಿದ್ದನು. ಈ ವಿಚಾರವಾಗಿ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಮಹಿಳಾ ಎಸ್‍ಐ ಸಾವಿಗೆ ನಿಖರವಾದ ಕಾರಣವೇನು ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.

Comments

Leave a Reply

Your email address will not be published. Required fields are marked *