ಮದುವೆಯಾಗಬೇಕಾದವಳು ಮಸಣಕ್ಕೆ – ಕಾಣೆಯಾದ ಯುವತಿ ಕೊಳೆತ ಶವವಾಗಿ ಪತ್ತೆ

– ಅನುಮಾನಾಸ್ಪದವಾಗಿ ಸಿಕ್ತು ಮೃತದೇಹ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಾಣೆಯಾದ ಯುವತಿ ಕೊಳೆತ ಶವವಾಗಿ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಹನುಮಂತಪುರ ಗೇಟ್ ಬಳಿಯ ಕೆರೆಯಲ್ಲಿ ಪತ್ತೆಯಾಗಿದ್ದಾಳೆ.

ಹೌದು ಬೆಂಗಳೂರಿನ ಆಂಧ್ರಹಳ್ಳಿ ನಿವಾಸಿ ದೀಪ ಶವವಾಗಿ ಪತ್ತೆ ಯಾಗಿದ್ದಾಳೆ. ದೀಪ ಬಾವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗುತ್ತಿದೆ. ಮದುವೆ ಫಿಕ್ಸ್ ಆಗುತ್ತಿದ್ದಂತೆ ಅಕ್ರಮ ಸಂಬಂಧ ಬಯಲಿಗೆ ಬರುತ್ತದೆ ಅಥವಾ ನಾದಿನಿ ಕೈ ತಪ್ಪಿ ಹೊಗುತ್ತಾಳೆ ಎಂದು ಬಾವನೇ ಕೊಲೆ ಮಾಡಿರಬಹುದಾ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ.

ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ. ರವಿ.ಡಿ.ಚನ್ನಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭದ್ರಾವತಿ ಮೂಲದ ಪುನೀತ್‍ನ ಜೊತೆ ಮೃತ ದೀಪಳ ಮದುವೆಗೆ ಕುಟುಂಬಸ್ಥರು ಈಗಾಗಲೇ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಆದರೆ ವಿಪರ್ಯಾಸ ಎಂಬಂತೆ ದೀಪ ಶವವಾಗಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತಪಡಿಸಿರುವ ಪೋಷಕರು ತನಿಖೆಗೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಇದೀಗ ಶವವನ್ನು ಕೊರೊನಾ ಪರೀಕ್ಷೆ ಕಳುಹಿಸಲಾಗಿದೆ. ಕೊಲೆ ಮತ್ತು ಕೊರೊನಾ ಮಧ್ಯೆ ಆತಂಕದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಭಯದಲ್ಲಿ ಈಗ ಕಾಲ ಕಳೆಯವಂತಾಗಿದೆ.

Comments

Leave a Reply

Your email address will not be published. Required fields are marked *