ಮತ್ತೊಂದು ದುಬಾರಿ ಬೆಲೆಯ ಕಾರು ಖರೀದಿಸಿದ ಸನ್ನಿ ಲಿಯೋನ್

ವಾಷಿಂಗ್ಟನ್: ಬಾಲಿವುಡ್ ಬೆಡಗಿ ನಟಿ ಸನ್ನಿ ಲಿಯೋನ್ ಬಳಿ ಈಗಾಗಲೇ ಸಾಕಷ್ಟು ಐಷಾರಾಮಿ ಕಾರುಗಳಿವೆ. ಇದೀಗ ನಟಿ ಮತ್ತೊಂದು ದುಬಾರಿ ಬೆಲೆಯ ಕಾರನ್ನು ಖರೀದಿಸಿದ್ದಾರೆ.

ವಿಶ್ವದ ಅತೀ ಪ್ರಖ್ಯಾತ ಬ್ರಾಂಡ್‍ಗಳಲ್ಲಿ ಒಂದಾಗಿರುವ ಇಟಲಿಯ ಮಾಸೆರಾಟಿ ಗಿಬ್ಲಿ ಸೆಡಾನ್ ಕಾರನ್ನು ನಟಿ ಸನ್ನಿ ಲಿಯೋನ್ ಖರೀದಿಸಿದ್ದಾರೆ. ಇದು ನಟಿ ಸನ್ನಿ ಲಿಯೋನ್‍ಗೆ ತುಂಬಾ ಇಷ್ಟವಾದ ಕಾರಾಗಿದೆ. ಬಿಳಿ ಬಣ್ಣದ ಕಾರು ಖರೀದಿಸಿ ಅದರ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಫೋಟೋವನ್ನು ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಕಾರು ಖರೀದಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ಕಾರನ್ನು ತೆಗೆದುಕೊಳ್ಳುವ ಮುನ್ನ ಸನ್ನಿ ಲಿಯೋನ್ ಮಾಸೆರಾಟಿ ಶೋ ರೂಮ್ ನಿಂದ ವಿಡಿಯೋ ಮಾಡಿ ಸಂತಸ ಹಂಚಿಕೊಂಡಿದ್ದರು. ಬಳಿಕ ಕಾರು ಖರೀದಿಸಿದ ಖುಷಿಯನ್ನು ಇನ್‌ಸ್ಟಾಗ್ರಾಂ, ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಪತಿಯ ಜೊತೆ ಕಾರು ಡ್ರೈವ್ ಹೋಗಿದ್ದಾರೆ. ‘ಪ್ರತೀ ಬಾರಿ ಈ ಕಾರನ್ನು ಓಡಿಸುವಾಗ ತುಂಬಾ ಸಂತಸವಾಗುತ್ತೆ’ ಎಂದು ಸನ್ನಿ ಲಿಯೋನ್ ಹೇಳಿಕೊಂಡಿದ್ದಾರೆ.

ಇಟಾಲಿಯನ್ ಸ್ಪೋರ್ಟ್ಸ್ ಹಾಗೂ ಲಕ್ಸುರಿ ಕಾರಾಗಿರುವ ಮಾಸೆರಾಟಿ ಗಿಬ್ಲಿ, ನಾಲ್ಕು ಸೀಟ್ ಸೆಡಾನ್ ಕಾರಾಗಿದೆ. ಸನ್ನಿ ಖರೀದಿಸಿದ ನೂತನ ಗಿಬ್ಲಿ ಕಾರಿನ ಬೆಲೆ 1.31 ಕೋಟಿ ರೂಪಾಯಿ ಆಗಿದೆ. ಈ ಕಾರು ಮೂರು ಲೀಟರ್, V6 ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ. ಗಿಬ್ಲಿ ಸ್ಪೋರ್ಟ್ಸ್ ಕಾರಿನ ಎಂಜಿನ್ 420bhp ಹಾಗೂ 580Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ನಟಿ ಸನ್ನಿ ಲಿಯೋನ್ ಈಗಾಗಲೇ ಮಾಸೆರಾಟಿ ಕ್ವಾಟ್ರೋಪೋರ್ಟ್, ಮಾಸೆರಾಟಿ ಗಿಬ್ಲಿ ಲಿಮಿಟೆಡ್ ಎಡಿಶನ್ ಕಾರು ಖರೀದಿಸಿದ್ದಾರೆ. ಸದ್ಯಕ್ಕೆ ನಟಿ ಸನ್ನಿ ಲಿಯೋನ್ ಮೇ ತಿಂಗಳಲ್ಲಿ ಮಕ್ಕಳ ಜೊತೆ ಲಾಸ್ ಏಂಜಲೀಸ್‍ಗೆ ತೆರಳಿದ್ದರು. ಲಾಕ್‍ಡೌನ್ ಕೊಂಚ ಸಡಿಲಿಕೆ ಆಗುತ್ತಿದ್ದಂತೆ ಸನ್ನಿ ಭಾರತದಿಂದ ಲಾಸ್ ಏಂಜಲೀಸ್‍ಗೆ ಪಯಣ ಬೆಳೆಸಿದ್ದರು.

Comments

Leave a Reply

Your email address will not be published. Required fields are marked *