ಮತ್ತೊಂದು ಚಾಲೆಂಜ್- ಗುಪ್ತಾಂಗವನ್ನೇ ಚಾಕುವಿನಿಂದ ಕತ್ತರಿಸಿಕೊಂಡ ಶಿಕ್ಷಕ

ನವದೆಹಲಿ: ಇಂಟರ್ನೆಟ್ ಚಾಲೆಂಜ್ ಸ್ವೀಕರಿಸಿ ಶಿಕ್ಷಕನೊಬ್ಬ 12 ಇಂಚಿನ ಚಾಕುವಿನಿಂದ ತನ್ನ ಗುಪ್ತಾಂಗವನ್ನೇ ಕತ್ತರಿಸಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಇಂಟರ್ ನೆಟ್ ಚಾಲೆಂಜ್‍ನಿಂದಾಗಿ ಶಿಕ್ಷಕ ಈ ರೀತಿ ಮಾಡಿಕೊಂಡಿದ್ದು, ತನ್ನ ರೂಮ್‍ಮೇಟ್ ಮೂಲಕ ಗುಪ್ತಾಂಗವನ್ನೇ ಕತ್ತರಿಸಿಕೊಂಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿ ಇದೀಗ ವಿಚಾರಣೆ ಎದುರಿಸುತ್ತಿದ್ದಾನೆ. ಶಿಕ್ಷಕನಿಗೆ ಈ ಬಗ್ಗೆ ಸಂಪೂರ್ಣ ಅರಿವಿದ್ದು, ಆದರೂ ಗುಪ್ತಾಂಗ ಕತ್ತರಿಸಲು ಒಪ್ಪಿಗೆ ನೀಡಿದ್ದಾನೆ.

ಯೂಟ್ಯೂಬ್ ವೀಡಿಯೋ ನೋಡಿ ಈ ರೀತಿ ಮಾಡಿದ್ದು, ಆಘಾತಕಾರಿ ವಿಡಿಯೋಗಳನ್ನು ಪೋಸ್ಟ್ ಮಾಡಿ ಹೆಚ್ಚು ಲೈಕ್ ಗಳಿಸುವ ಮೂಲಕ ಅಪಾರ ಪ್ರಮಾಣದಲ್ಲಿ ಹಣ ಗಳಿಸಬಹುದು ಎಂಬ ಕಾರಣಕ್ಕೆ ಶಿಕ್ಷಕ ಈ ರೀತಿ ಮಾಡಿದ್ದಾನೆ.

ಸ್ಪಾನಿಷ್ ಮೂಲದ ರಾಪರ್ ಆರೋನ್ ಬೆಲ್ಟ್ರಾನ್ ಈ ರೀತಿಯ ಕೆಲ ಸಾಮಾಜಿಕ ಜಾಲತಾಣಗಳ ಚಾಲೆಂಜ್‍ನಲ್ಲಿ ತೊಡಗಿದ್ದು, ತನ್ನ ಚಾನೆಲ್‍ನಲ್ಲಿ ಪೋಸ್ಟ್ ಮಾಡಿ ಈ ಮೂಲಕ ಹೆಚ್ಚು ವ್ಯೂವ್ಸ್ ಪಡೆಯುತ್ತಾನೆ. ಬೆಲ್ಟ್ರಾನ್ ವೀಡಿಯೋ ತಯಾರಕರಿಗೆ ಕನಿಷ್ಠ 200 ಯೂರೋ (ಸರಾಸರಿ 17,500 ರೂ.) ಗರಿಷ್ಠ 2,500 ಯೂರೋ(2,19,843 ರೂ.) ಗಳನ್ನು ನೀಡುತ್ತಾನೆ. ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ವ್ಯೂವ್ಸ್ ಬರುತ್ತವೆ ಎಂಬುದರ ಆಧಾರದ ಮೇಲೆ ದರವನ್ನು ನಿಗದಿಪಡಿಸುತ್ತಾನೆ ಎಂದು ವರದಿಯಾಗಿದೆ.

ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಪದವೀಧರ ಆಂಡ್ರ್ಯೂ ಬ್ರೀಚ್ ತನ್ನ ಗುಪ್ತಾಂಗ ಕತ್ತರಿಸಿಕೊಂಡಿರುವ ವೀಡಿಯೋವನ್ನು ಮಾರ್ಚ್ 2019ರಲ್ಲಿ ರೆಕಾರ್ಡ್ ಮಾಡಲಾಗಿತ್ತು. ಬಾಡಿಗೆ ಮನೆಯ ಬಳಿ ಹೆಚ್ಚು ರಕ್ತಸ್ರಾವವಾಗುತ್ತಿದ್ದನ್ನು ಪತ್ತೆಹಚ್ಚಿದ ಬಳಿಕ ಈ ಘಟನೆ ಬೆಳಕಿಗೆ ಬಂದಿತ್ತು. ಆಂಡ್ರ್ಯೂ ಬೆಲ್ಟ್ರಾನ್ ಹಾಗೂ ಇತರ ಇಬ್ಬರೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಗೋರಿ ವಿಡಿಯೋ ಚಾಲೆಂಜ್‍ಗಾಗಿ ಸ್ವಯಂಪ್ರೇರಿತನಾಗಿ ಆಂಡ್ರ್ಯೂ ಬ್ರೀಚ್ ತನ್ನ ಗುಪ್ತಾಂಗ ಕತ್ತರಿಸಲು ಹೇಳಿದ್ದ ಎಂದು ವರದಿಯಾಗಿದೆ.

ಘಟನೆ ಬಳಿಕ ಆಂಡ್ರ್ಯೂನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೇರ್ಪಟ್ಟಿದ್ದ ಗುಪ್ತಾಂಗವನ್ನು ಸರ್ಜನ್ಸ್ ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಜೋಡಿಸಿದ ಬಳಿಕ ಸಹ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ. ಘಟನೆ ಬಳಿಕ ಬ್ರಿಟನ್‍ಗೆ ಮರಳುವುದಕ್ಕೂ ಮುನ್ನ ಶಿಕ್ಷಕ 3 ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಬೆಲ್ಟ್ರಾನ್ ಈ ವೀಡಿಯೋ ಮಾಡಲು ತಿಳಿಸಿದ್ದರು, ನಾನೇ ಸ್ವ ಇಚ್ಛೆಯಿಂದ ನನ್ನ ಗುಪ್ತಾಂಗವನ್ನು ಕತ್ತರಿಸಿಕೊಂಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ಘಟನೆ ಬಳಿಕ ಬೆಲ್ಟ್ರಾನ್‍ನನ್ನು ಬಂಧಿಸಲಾಗಿತ್ತು. 4 ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದು, ಬಳಿಕ ಜಾಮೀನು ಸಿಕ್ಕಿದೆ.

Comments

Leave a Reply

Your email address will not be published. Required fields are marked *