ಮತದಾರರಿಗೆ ನೀಡುತ್ತಿದ್ದ 200 ಕೆಜಿ ಜಲೇಬಿ, 1050 ಸಮೋಸ ಪೊಲೀಸರ ವಶಕ್ಕೆ

ಲಕ್ನೋ: ಹಸಂಗಂಜ್‍ನ ಗ್ರಾಮ ಪಂಚಾಯತಿ ಚುನಾವಣೆ ಸಮೀಪದಲ್ಲಿದ್ದು, ಈ ಹಿನ್ನೆಲೆ ಅಭ್ಯರ್ಥಿಯೊಬ್ಬರು ಮತದಾರರಿಗೆ ಹಂಚುತ್ತಿದ್ದ ಎರಡು ಕ್ವಿಂಟಲ್(200)ಕೆ.ಜಿ ಜಲೇಬಿ ಹಾಗೂ 1,050 ಸಮೋಸಾಗಳನ್ನು ಉನ್ನಾವ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೋವಿಡ್ ನಿಯಮ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರಿಂದ ಇದೀಗ ಪ್ರಕರಣ ದಾಖಲಿಸಿದ್ದು, ಈ ಸಂಬಂಧ 10 ಮಂದಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಕುರಿತಂತೆ ಮಾಹಿತಿ ದೊರೆತ ಮೇರೆಗೆ ಪೊಲೀಸರು ಅಭ್ಯರ್ಥಿಯ ನಿವಾಸದ ಮೇಲೆ ದಾಳಿ ನಡೆಸಿ ಎಲ್‍ಪಿಜಿ ಸಿಲಿಂಡರ್, ಹಿಟ್ಟು, ತುಪ್ಪ ಮತ್ತು ಜಲೇಬಿ ಮತ್ತು ಸಮೋಸ ತಯಾರಿಸಲು ಬಳಸುತ್ತಿದ್ದ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಪಂಚಾಯತ್ ಚುನಾವಣೆ ಏಪ್ರಿಲ್ 15 ರಿಂದ ನಾಲ್ಕು ಹಂತಗಳಲ್ಲಿ ನಡೆಯಲಿದ್ದು, ಅಂತಿಮ ಹಂತದ ಚುನಾವಣೆ ಏಪ್ರಿಲ್ 29ರಂದು ನಡೆಯಲಿದೆ ಹಾಗೂ ಫಲಿತಾಂಶ ಮೇ 2 ರಂದು ಪ್ರಕಟವಾಗಲಿದೆ.

Comments

Leave a Reply

Your email address will not be published. Required fields are marked *