ಮಡಿಕೇರಿ -ಮೈಸೂರು ರಸ್ತೆ ಸಂಪರ್ಕ ಬಂದ್‌ – ಸುತ್ತೂರು ಸೇತುವೆ ಮುಳುಗಡೆ

ಮಡಿಕೇರಿ/ಮೈಸೂರು: ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಮಡಿಕೇರಿ – ಮೈಸೂರು ರಸ್ತೆ ಸಂಪರ್ಕ ಕಡಿತಗೊಂಡಿದೆ.

ಕುಶಾಲನಗರ ಬಳಿಯ ರಸ್ತೆಯ ಮೇಲೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಕಾರಣ ಹೆದ್ದಾರಿ ಜಲಾವೃತವಾಗಿದೆ. ಹೆದ್ದಾರಿ ಬಂದ್‌ ಆಗಿರುವ ಕಾರಣ ಎರಡು ಕಡೆ ವಾಹನಗಳು ಸಾಲಾಗಿ ನಿಂತಿವೆ.

ಭಾರೀ ಮಳೆಯಿಂದ ಸುತ್ತೂರು ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸುತ್ತೂರು ಕ್ಷೇತ್ರದ ಸುತ್ತ ಮುತ್ತ ತೋಟ ಜಮೀನಿಗೆ ನೀರು ನುಗ್ಗಿದೆ. ಇದನ್ನೂ ಓದಿ: ಮಡಿಕೇರಿಯ ಜೋಡುಪಾಲ ಬಳಿ ಮತ್ತೆ ರಸ್ತೆ ಕುಸಿತ

ಕಬಿನಿ ಡ್ಯಾಂನಿಂದ ನದಿಗೆ 50ಸಾವಿರ ಕ್ಯೂಸೆಕ್‌ ನೀರು ಬಿಟ್ಟ ಹಿನ್ನಲೆಯಲ್ಲಿ ನಂಜನಗೂಡಿನ ಕಪಿಲಾ‌ ನದಿಯ ಸ್ನಾನಘಟ್ಟ ಮುಳುಗಡೆಯಾಗಿದೆ. ಮೆಟ್ಟಿಲುಗಳ ಬಳಿಯಿದ್ದ ರಾಮಾಂಜನೇಯ ದೇಗುಲ, ಅರಳಿಮರ ಸೇರಿದಂತೆ ನವಗ್ರಹ ವಿಗ್ರಹಗಳು ಸಹ ಮುಳುಗಡೆಯಾಗಿದೆ.

Comments

Leave a Reply

Your email address will not be published. Required fields are marked *