ಮಡಿಕೇರಿಯಲ್ಲಿ ಶಿವರಾತ್ರಿ – ವೇಷಭೂಷಣ ತೊಟ್ಟು ಹಾಸ್ಯ ಮಾಡಿದ ಮಕ್ಕಳು

ಮಡಿಕೇರಿ: ಶಿವರಾತ್ರಿ ಎಂದರೆ ಸಾಮಾನ್ಯವಾಗಿ ಮನೆಗಳಲ್ಲಿ ಕುಟುಂಬದ ಸದಸ್ಯರು ಹಬ್ಬದ ಅಂಗವಾಗಿ ಜಾಗರಣೆ ಮಾಡುತ್ತಾರೆ. ದೇವಾಲಯಗಳಲ್ಲಿ ಪೂಜೆ ಭಜನೆ ಮಾಡಿ ಶಿವಾರಾಧನೆಯನ್ನು ಮಾಡುತ್ತಾರೆ. ಅದರೆ ಕೊಡಗಿನ ಪುಟಾಣಿಗಳು ಶಿವರಾತ್ರಿಯ ಜಾಗರಣೆಯನ್ನು ವಿಭಿನ್ನವಾಗಿ ಅಚರಣೆ ಮಾಡಿದ್ದಾರೆ.

ಮಡಿಕೇರಿಯ ಕಲಾ ನಗರ ಸಾಂಸ್ಕ್ರತಿಕ ಕಲಾ ವೇದಿಕೆಯ ವತಿಯಿಂದ ಕಣ್ಮರೆಯಾಗುತ್ತಿರುವ ನಮ್ಮ ಸಂಸ್ಕøತಿ ಆಚರಣೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಿವರಾತ್ರಿಯ ಅಂಗವಾಗಿ ಪುಟಾಣಿ ಮಕ್ಕಳು ಸುಮಾರು ಇಪ್ಪತ್ತು ಜನರ ತಂಡ ಮಾಡಿ ವಿವಿಧ ಬಗೆಯ ವೇಷಭೂಷಣ ಧರಿಸಿ ನಗರದ ರಾಘವೇಂದ್ರ ದೇವಾಲಯದ ಬಳಿಯ ನಿವಾಸಿಗಳ ಮನೆ ಮನೆಗೆ, ತೆರಳಿ ಮನೆಯಲ್ಲಿ ಹಾಸ್ಯ ನಾಟಕಗಳನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಹಾಸ್ಯಮಯ ಸವಿ ನೆನಪನ್ನು ಮರೆಯಲು ಸಾಧ್ಯವೇ ಇಲ್ಲದ ಹಾಗೆ ಸಾರ್ವಜನಿಕರ ಮನದಲ್ಲಿ ಉಲ್ಲಾಸ ಮೂಡಿಸಿದ್ದಾರೆ. ಇಲ್ಲಿ ಮತ್ತೊಂದು ವಿಶೇಷ ಅಂದರೆ ತಾಯಿ ತಮ್ಮ ಮಕ್ಕಳನ್ನು ಕೂಡ ಗುರುತಿಸಲಾದ ರೀತಿಯಲ್ಲಿ ಪುಟಾಣಿಗಳು ವೇಷಭೂಷಣ ಹಾಕಿ ರಂಜಿಸಿದ್ದಾರೆ.

Comments

Leave a Reply

Your email address will not be published. Required fields are marked *