ಮಟಮಟ ಮಧ್ಯಾಹ್ನವೇ ಬಸ್ ನಿಲ್ದಾಣದಲ್ಲಿ ಪ್ರೇಮಿಗಳ ಕಿಸ್ಸಿಂಗ್

ಮಂಡ್ಯ: ಈ ಹಿಂದೆ ಮೆಟ್ರೋದಲ್ಲಿ, ಬಸ್ಸಿನಲ್ಲಿ ಲವ್ವರ್ಸ್ ಪರಸ್ಪರ ಕಿಸ್ ಮಾಡಿಕೊಳ್ಳೋದನ್ನು ನೋಡಿದ್ದೇವೆ. ಇದೀಗ ಸಕ್ಕರೆ ನಾಡು ಮಂಡ್ಯದಲ್ಲಿ ಪ್ರೇಮಿಗಳು ಕಿಸ್ ಮಾಡ್ಕೊಂಡು ಸಾರ್ವನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಹೌದು. ಮಂಡ್ಯದ ಜಿಲ್ಲೆಯ ಕೆ.ಆರ್.ಪೇಟೆ ಬಸ್ ನಿಲ್ದಾಣದಲ್ಲಿ ಪ್ರೇಮಿಗಳು ಮಟಮಟ ಮಧ್ಯಾಹ್ನವೇ ಪರಸ್ಪರ ಕಿಸ್ ಮಾಡಿಕೊಳ್ಳುವ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ ಈ ಮೂಲಕ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ ಪ್ರೇಮಿಗಳ ದಿನ ಬರಲಿದೆ. ಈ ವ್ಯಾಲೆಂಟೈನ್ಸ್ ದಿನ ಹತ್ತಿರ ಬರುತ್ತಿದ್ದಂತೆ ಯುವ ಜೋಡಿಯೊಂದು ಸಾರ್ವಜನಿಕ ಸ್ಥಳದಲ್ಲಿ ಮೈ ಮರೆತಿದೆ. ಯುವಕನೊಬ್ಬ ಯುವತಿಗೆ ಚುಂಬಿಸಿ ಅಶ್ಲೀಲವಾಗಿ ವರ್ತಿಸಿದ್ದಾನೆ.

ಸಾರ್ವಜನಿಕರು ಓಡಾಡುತ್ತಿದ್ದರೆ ಕ್ಯಾರೇ ಎನ್ನದೇ ಜೋಡಿ ಕಿಸ್ಸಿಂಗ್ ನಲ್ಲಿ ತೊಡಗಿರುವುದು ಜನರ ಸಿಟ್ಟಿಗೆ ಕಾರಣವಾಗಿದೆ. ಅಲ್ಲದೆ ಪ್ರೇಮಿಗಳ ಚುಂಬನದ ವೀಡಿಯೋವನ್ನು ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲ ವರ್ತನೆಗೆ ಜನ ಆಕ್ರೋಶ ಹೊರಹಾಕಿದ್ದಾರೆ.

Comments

Leave a Reply

Your email address will not be published. Required fields are marked *