ಮಗುವಿಗೆ ಕೈ ತುತ್ತು ತಿನ್ನಿಸಿದ ಯಜಮಾನ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ತಮ್ಮ ನೆಚ್ಚಿನ ಪ್ರಾಣಿ, ಪಕ್ಷಿಗಳ ಜೊತೆ ಕಾಲಕಳೆಯುತ್ತಿದ್ದಾರೆ. ದರ್ಶನ್ ಅವರು ಪ್ರಾಣಿಗಳ ಆರೈಕೆಯಲ್ಲಿ ನಿರತರಾಗಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೀಗ ನಟ ದರ್ಶನ್ ಮಗುವಿನ ಜೊತೆ ಮಗುವಾಗಿ ಆಟವಾಡಿರುವ ವಿಡಿಯೋ ವೈರಲ್ ಆಗಿದೆ.

ನಟ ದರ್ಶನ್ ತಮ್ಮ ಸ್ನೇಹಿತರ ಮನೆಯಲ್ಲಿ ಊಟ ಮಾಡಿ, ಕುಟುಂಬದವರ ಜೊತೆ ಪ್ರೀತಿಯಿಂದ ಸ್ವಲ್ಪ ಸಮಯ ಕಳೆದಿದ್ದಾರೆ. ಇದೀಗ ಅವರು ಸ್ನೇಹಿತರ ಕುಟುಂಬದಲ್ಲಿ ಕಾಲಕಳೆದಿರುವ ವಿಡಿಯೋಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲಿ ದರ್ಶನ್ ಅವರು ತಮ್ಮ ತೊಡೆಯ ಮೇಲೆ ಪುಟ್ಟ ಕಂದಮ್ಮನನ್ನು ಕೂರಿಸಿಕೊಂಡು ಕೈ ತುತ್ತು ತಿನ್ನಿಸಿದ್ದಾರೆ. ಅಲ್ಲದೇ ಮಗುವಿನ ಜೊತೆ ಸ್ವಲ್ಪ ಸಮಯ ಆಟ ಕೂಡ ಆಡಿರುವುದನ್ನು ಕಾಣಹುದಾಗಿದೆ.

‘ಕಮರೊಟ್ಟು ಚೆಕ್‍ಪೋಸ್ಟ್’ ಸಿನಿಮಾ ನಿರ್ಮಾಪಕ ಚೇತನ್ ರಾಜ್ ಮಗುವಿನ ಜೊತೆ ದರ್ಶನ್ ಕಾಲಕಳೆದಿದ್ದಾರೆ. ಚೇತನ್ ರಾಜ್ ‘ಜಯಮ್ಮನ ಮಗ’, ‘ಜೈ ಮಾರುತಿ 800’ ಸಿನಿಮಾಗಳ ನಿರ್ಮಾಪಕ ರಮೇಶ್ ಅವರ ಅಳಿಯರಾಗಿದ್ದು, ದರ್ಶನ್ ಬಹುಕಾಲದ ಗೆಳೆಯರಾಗಿದ್ದಾರೆ. ಹೀಗಾಗಿ ವಾರಕೊಮ್ಮೆ ಇಬ್ಬರೂ ಭೇಟಿಯಾಗುತ್ತಿರುತ್ತಾರೆ.

ಅದೇ ರೀತಿ ಶುಕ್ರವಾರ ದರ್ಶನ್ ಗೆಳೆಯ ರಮೇಶ್ ಮನೆಗೆ ಭೇಟಿ ನೀಡಿದ್ದರು. ಅವರ ಮನೆಯಲ್ಲಿ ದರ್ಶನ್ ನಾನ್‍ವೆಜ್ ಊಟ ಮಾಡಿದ್ದಾರೆ. ಈ ವೇಳೆ ಚೇತನ್ ರಾಜ್ ಮಗುವಿನ ದರ್ಶನ್ ಜೊತೆ ಆಟವಾಡಿದ್ದಾರೆ. ಇತ್ತೀಚೆಗೆಷ್ಟೆ ದರ್ಶನ್ ತಮ್ಮ ಮೈಸೂರಿನ ಫಾರ್ಮ್ ಹೌಸ್‍ನಲ್ಲಿ ಪ್ರೀತಿಯ ಪ್ರಾಣಿಗಳಿಗೆ ಮೇವು ಕತ್ತರಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

Comments

Leave a Reply

Your email address will not be published. Required fields are marked *