ಮಗನ ಔಷಧಿ ತರಲು ಬೆಂಗಳೂರಿಗೆ ಸೈಕಲ್ ನಲ್ಲಿ ಹೋಗಿ ಬಂದ ಅಪ್ಪ

– 280 ಕಿ.ಮೀ. ಸೈಕಲ್ ತುಳಿದ ತಂದೆ

ಮೈಸೂರು: ಕೊರೊನಾ ಲಾಕ್‍ಡೌನ್ ಪರಿಣಾಮವಾಗಿ ಮಗನ ಔಷಧಿಗಾಗಿ ತಂದೆ 280 ಕಿಲೋಮೀಟರ್ ಸೈಕಲ್ ತುಳಿದುಕೊಂಡು ಬೆಂಗಳೂರಿಗೆ ಹೋಗಿ ಬಂದಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕು ಗಾಣಿಗನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಗಾರೆ ಕೆಲಸಗಾರರಾಗಿರುವ ಆನಂದ್ ಅವರು ಮಗನಿಗಾಗಿ 280 ಕಿಲೋಮೀಟರ್, ಮೂರು ದಿನಗಳ ಕಾಲ ಸೈಕಲ್ ತುಳಿದು ಔಷಧಿ ತಂದಿರುವವರು. ಆನಂದ್ ಅವರ ಮಗ ಮಾನಸಿಕ ವಿಶೇಷ ಚೇತನನಾಗಿದ್ದು, ಕಳೆದ 10 ವರ್ಷಗಳಿಂದ ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇದೀಗ ಔಷಧಿ ಖಾಲಿಯಾಗಿದೆ. ಹಾಗಾಗಿ ಬೆಂಗಳೂರಿಗೆ ತೆರಳಿ ಔಷಧಿ ತರಲು ವಾಹನಗಳನ್ನು ವಿಚಾರಿಸಿದಾಗ ರಾಜ್ಯದಲ್ಲಿ ಕೊರೊನಾ ಲಾಕ್‍ಡೌನ್‍ನಿಂದಾಗಿ ಯಾರು ಕೂಡ ಬರಲು ಒಪ್ಪಲಿಲ್ಲಾ. ಹಾಗಾಗಿ ಸ್ವತಃ ಆನಂದ್ ಅವರು ಸೈಕಲ್‍ನಲ್ಲಿ ಹೋಗಿ ಬಂದಿದ್ದಾರೆ. ಇದನ್ನೂ ಓದಿ: ಪ್ರತಾಪ್ ಸಿಂಹ ಪ್ರಶ್ನಿಸಿದ್ದಕ್ಕೆ ಕೋವಿಡ್ ಲೆಕ್ಕ ಬಿಡುಗಡೆ ಮಾಡಿದ ರೋಹಿಣಿ ಸಿಂಧೂರಿ

ತಮ್ಮ ಪರಿಸ್ಥಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿರುವ ಆನಂದ್ ಅವರು, ಪ್ರತಿ ಎರಡು ತಿಂಗಳಿಗೊಮ್ಮೆ ಬೆಂಗಳೂರಿಗೆ ತೆರಳಿ ಔಷಧಿ ತರುವಂತಹ ಪರಿಸ್ಥಿತಿ ಇದೆ. ನಾನು ಸ್ಥಳೀಯ ಆಸ್ಪತ್ರೆಗಳಲ್ಲಿ ಔಷಧಿಯನ್ನು ವಿಚಾರಿಸಿದಾಗ ಸಿಕ್ಕಿರಲಿಲ್ಲ. ಹಾಗಾಗಿ ಬೆಂಗಳೂರಿಗೆ ತೆರಳಲು ವಾಹನಗಳನ್ನು ವಿಚಾರಿಸಿದೆ ಯಾರು ಕೂಡ ಸಹಾಯ ಮಾಡಲು ಒಪ್ಪಿಕೊಳ್ಳಲಿಲ್ಲ. ಹಾಗಾಗಿ ನಾನು ಸೈಕಲ್‍ನಲ್ಲಿ ಹೋಗಿ ಬಂದಿದ್ದೇನೆ. ಮಗನಿಗೆ 18 ವರ್ಷ ಆಗುವವರೆಗೆ ಔಷಧಿ ಕೊಡಿಸಬೇಕಾಗಿದ್ದು, ಒಂದು ದಿನ ತಪ್ಪಿದರೆ ಮತ್ತೆ 18 ವರ್ಷ ಔಷಧಿ ನೀಡಬೇಕಾದ ಸಂಕಷ್ಟ ಎದುರಾಗಿದೆ ಎಂದರು.

Comments

Leave a Reply

Your email address will not be published. Required fields are marked *