ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕೊರೊನಾ ಸೋಂಕಿನ ಗುಣಲಕ್ಷಣಗಳು

ನವದೆಹಲಿ : ವಿಶ್ವಾದ್ಯಂತ ವಯಸ್ಸಿನ ಬೇಧ ಭಾವವಿಲ್ಲದೇ ಕೊರೊನಾ ಸೋಂಕು ವ್ಯಾಪಿಸಿಕೊಳ್ತಿದೆ. ಭ್ರೂಣದಲ್ಲಿರುವ ಹಸುಗೂಸುಗಳಿಂದ ವೃದ್ಧರವರೆಗೂ ಕೊರೊನಾ ಭೀತಿ ಕಾಡಲು ಆರಂಭಿಸಿದೆ. ಹೀಗೆ ಕಾಣಿಸಿಕೊಳ್ತಿರುವ ಕೊರೊನಾ ಸೋಂಕಿನ ಗುಣಲಕ್ಷಣಗಳು ಮಾತ್ರ ಭಿನ್ನವಾಗಿದೆ.

ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಅಧ್ಯಯನವೊಂದು ನಡೆದಿದ್ದು, ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುವ ಮುನ್ನ ಆಗಬಹುದಾದ ಬದಲಾವಣೆಗಳ ಬಗ್ಗೆ ವಿವರಣೆ ನೀಡಲಾಗಿದೆ.

ಸಾಮಾನ್ಯ ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುವಾಗ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಳ್ಳುವುದುಂಟು ಇದನ್ನು ಕೊರೊನಾ ಸೋಂಕಿನ ಗುಣಲಕ್ಷಣಗಳು ಎಂದು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದೆ. ಆದರೆ ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗ ಇದ್ಯಾವುದೇ ಲಕ್ಷಣಗಳು ಪತ್ತೆಯಾಗದೇ ಇತರೆ ಲಕ್ಷಣಗಳು ಕಂಡು ಬಂದಿದೆ. ಮಕ್ಕಳಲ್ಲಿ ಕೋವಿಡ್ -19 ಕಾಣಿಸಿಕೊಳ್ಳುವಾಗ ಅತಿಸಾರ, ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ ಎಂದು ಹೊಸ ಅಧ್ಯಯನ ಹೇಳಿದೆ.

ಫ್ರಾಂಟಿಯರ್ಸ್ ಇನ್ ಪೀಡಿಯಾಟ್ರಿಕ್ಸ್ ಜರ್ನಲ್‌ ನಲ್ಲಿ ಪ್ರಕಟವಾದ ಹೊಸ ಸಂಶೋಧನಾ ವರದಿ ಪ್ರಕಾರ ಮಕ್ಕಳಲ್ಲಿ ಕೊರೊನಾ ಸೋಂಕು ಕೆಮ್ಮಿನಿಂದ ಪ್ರಾರಂಭವಾಗುವುದಿಲ್ಲ. ಅರಂಭದಲ್ಲಿ ಉಸಿರಾಟದ ಸಮಸ್ಯೆಯೂ ಕಾಣಿಸಿಕೊಳ್ಳುವುದಿಲ್ಲ. ಮಕ್ಕಳಲ್ಲಿ ಸೊಂಕಿದ್ದರೇ ಮೊದಲು ಜೀರ್ಣಾಂಗವ್ಯೂಹದಲ್ಲಿ ಸಮಸ್ಯೆ ಹೆಚ್ಚಾಗುತ್ತದೆ ಬಳಿಕ ಅತಿಸಾರವಾಗಿ ಜ್ವರ ಕಾಣಿಸಿಕೊಳ್ಳುತ್ತದೆ ಎಂದು ಉಲ್ಲೇಖಿಸಲಾಗಿದೆ.

ಕೊರೊನಾ ಸೋಂಕಿತ ಮಕ್ಕಳ ಮೇಲೆ ನಡೆದ ಅಧ್ಯಯನ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಫ್ರಾಂಟಿಯರ್ಸ್ ಇನ್ ಪೀಡಿಯಾಟ್ರಿಕ್ಸ್ ಜರ್ನಲ್‌ ನಲ್ಲಿ ಪ್ರಕಟವಾದ ಲೇಖನದಲ್ಲಿ ತಿಳಿಸಲಾಗಿದೆ.

Comments

Leave a Reply

Your email address will not be published. Required fields are marked *