ಮಕ್ಕಳನ್ನು ಬಳಸಿ ಮೊಬೈಲ್ ಕಳ್ಳತನ- ಆಂಧ್ರದ ಖತರ್ನಾಕ್ ಗ್ಯಾಂಗ್ ಅಂದರ್

ಗದಗ: ಮಕ್ಕಳು ಹಾಗೂ ಮಹಿಳೆಯರನ್ನು ಬಳಸಿ ಮೊಬೈಲ್ ಹಾಗೂ ಇತರೆ ವಸ್ತಿಗಳನ್ನು ಕದಿಯುತ್ತಿದ್ದ ಖತರ್ನಾಕ್ ಗ್ಯಾಂಗ್‍ನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ರೋಣ ಪಟ್ಟಣದಲ್ಲಿ ಘಟನೆ ನಡೆದಿದ್ದು, ರೋಣ ಪಟ್ಟಣದ ಹೊರವಲಯದಲ್ಲಿ ಠಿಕಾಣಿ ಹೂಡಿದ್ದ ಆಂಧ್ರಪ್ರದೇಶ ಮೂಲದ ಗ್ಯಾಂಗ್‍ನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಕದಿಯುವ ವೇಳೆ ಖದೀಮರು ಸಾರ್ವಜನಿಕರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ನಂತರ ಕಳ್ಳರನ್ನು ಹಿಡಿದು ಗೂಸಾ ನೀಡಿ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತರ ಬಳಿ ಇದ್ದ 5 ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಬೈಲ್ ಕಳ್ಳರ ಹಾವಳಿಗೆ ಜನ ಕಂಗಾಲಾಗಿದ್ದರು. ರೋಣ ಪಟ್ಟಣದ ಹೊರವಲಯದಲ್ಲಿ ಠಿಕಾಣಿ ಹೂಡಿದ್ದ ಆಂಧ್ರ ಪ್ರದೇಶ ಮೂಲದ ಗ್ಯಾಂಗ್, ಮಕ್ಕಳು, ಮಹಿಳೆಯರ ಮೂಲಕ ಮೊಬೈಲ್ ಕಳ್ಳತನ ಮಾಡಿಸುತ್ತಿತ್ತು ಎಂದು ಆರೋಪಿಸಲಾಗಿದೆ. ರೋಣ, ಗದಗ, ಗಜೇಂದ್ರಗಡ, ನರೇಗಲ್, ಬಾದಾಮಿ, ಬನಶಂಕರಿ ಸಂತೆ, ಜಾತ್ರೆ ಇರುವ ಗದ್ದಲ, ಜನನಿಬಿಡ ಸ್ಥಳಗಳನ್ನು ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು.

ಈ ಬಾಲಕ ರೋಣ ಸಂತೆಯಲ್ಲಿ ಮೊಬೈಲ್ ಕಳ್ಳತನ ಮಾಡುವ ವೇಳೆ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದಾನೆ. ನಂತರ ಈ ಬಾಲಕನ ಸಂಬಂಧಿ ಮಹಿಳೆಯನ್ನು ವಶಕ್ಕೆ ಪಡೆದು ಗೂಸಾನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳರ ಕೈಚಳಕದ ಕುರಿತು ಈ ಹಿಂದೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ. ಪೊಲೀಸರ ನಡೆಯ ಬಗ್ಗೆ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದರು.

Comments

Leave a Reply

Your email address will not be published. Required fields are marked *