ಮಂಜು ವಿರುದ್ಧ ತಿರುಗಿ ಬಿದ್ದ ದಿವ್ಯಾ

ಬಿಗ್‍ಬಾಸ್ ಮನೆಯ ಜೋಡಿಯೊಂದು ಕಿತ್ತಾಡಿಕೊಂಡಿದೆ. ಕೈ ಹಿಡಿದುಕೊಂಡು ಜೊತೆ ಜೊತೆಯಾಗಿ ನಡೆದಾಡುತ್ತಾ ನಕ್ಕು ನಲಿಯುತ್ತಿದ್ದ ಜೋಡಿ ಇದೀಗ ಬಿಗ್‍ಬಾಸ್ ಮನೆಯಲ್ಲಿ ಮುನಿಸಿಕೊಂಡು ಸುದ್ದಿಯಾಗಿದೆ.

ಹೌದು ಬಿಗ್‍ಬಾಸ್ ಮನೆಯಲ್ಲಿ ಮೊದಲಿನಿಂದಲೂ ಬಿಗ್‍ಬಾಸ್ ಕ್ಯಾಮೆರಾ ಮತ್ತು ವೀಕ್ಷಕರ ಕಣ್ಣಿಗೆ ಬಿದ್ದಿದ್ದು ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಮುದ್ದಾದ ಜೋಡಿ. ಈ ಜೊಡಿ ಮೊದಲಿನಿಂದ ತಮಾಷೆ, ಹರಟೆ, ಜೊತೆಯಲ್ಲಿಯೆ ಹೆಚ್ಚು ಸಮಯ ಕಳೆಯುವ ಮೂಲಕವಾಗಿ ಗುರುತಿಸಿಕೊಂಡಿತ್ತು. ಇದೀಗ ಮೊದಲ ಬಾರಿ ಕಿತ್ತಾಡಿಕೊಂಡಿದೆ.

ಪ್ರಶಾಂತ್ ಸಂಬರ್ಗಿ ಆಟ ಮನೆಯಲ್ಲಿ ಶುರುವಾಗಿದೆ. ಮಂಜು ವಿರುದ್ಧವಾಗಿ ಎಲ್ಲರ ಬಳಿ ಹೇಳಿ ಎಲ್ಲರೂ ಮಂಜು ವಿರುದ್ಧವಾಗಿ ತಿರುಗಿ ಬೀಳುವಂತೆ ಸಂಬರ್ಗಿ ಮಾಡಿದ್ದಾರೆ. ಮಂಜುಗೆ ಅತ್ಯಂತ ಹತ್ತಿರ ಎಂದರೆ ದಿವ್ಯಾ ಸುರೇಶ್ ಇದೀಗ ಅವರ ಇಬ್ಬರ ಮಧ್ಯೆ ಜಗಳ ಪ್ರಾರಂಭವಾಗಿದೆ. ನಿನ್ನೆ ಇಬ್ಬರು ಮಾತಿಗೆ ಮಾತು ಆಡಿಕೊಂಡಿದ್ದಾರೆ.

ನೀನು ಮಂಜುನ ಬಾಲ ಆಗಿದ್ದೀಯಾ.. ನೆರಳಲ್ಲಿ ಬದುಕಬೇಡ, ಯಾರೊಬ್ಬರ ಪ್ರಾಪರ್ಟಿ ಆಗಬಾರದು ಎಂದು ಸಂಬರ್ಗಿ ದಿವ್ಯಾಗೆ ಹೇಳಿದ್ದರು. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡ ದಿವ್ಯಾ ಮಂಜುನನ್ನು ದೂರ ಇಡಲು ಆರಂಭಿಸಿದ್ದರು.

ಬಿಗ್‍ಬಾಸ್ ಮನೆಯಲ್ಲಿ ಕಿಚನ್ ಡಿಪಾರ್ಟ್‍ಮೆಂಟ್ ನೀಡಲಾಗಿತ್ತು. ಆದರೆ ಮಂಜು ಅಡುಗೆ ಮನೆಗೆ ಹೋಗದೆ ಹೊರ ಭಾಗದಲ್ಲಿ ಕುಳಿತು ಮಾತನಾಡುತ್ತಾ ಇದ್ದರು. ನಾನು ವಾಕಿಂಗ್ ಮುಗಿಸಿ ಬಂದು ಪಾತ್ರೆ ತೊಳೆಯುತ್ತೇನೆ ಎಂದು ಮಂಜು ಹೇಳಿದ್ದರು. ಆದರೆ ದಿವ್ಯಾ ಪಾತ್ರೆ ತೊಳೆಯುವ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ ನಾನು ಕಿಚನ್ ಹೋಗಲ್ಲ ಎಂದು ಮಂಜು ಹೇಳಿದ್ದಾರೆ. ಈ ವೇಳೆ ದಿವ್ಯಾ ಮಂಜುಗೆ ಮಾತಿಗೆ ಮಾತು ಆಗಿದೆ. ಮಂಜು ಈ ವಿಚಾರವಾಗಿ ಕೊಂಚ ಬೇಸರವಾಗಿದ್ದಾರೆ. ಬಿಗ್‍ಬಾಸ್‍ಮನೆಯಲ್ಲಿ ಎಷ್ಟು ಚೆನ್ನಾಗಿ ಮಾತನಡಿಕೊಂಡು ಇರುವವರು ಯಾವ ಸಮಯದಲ್ಲಿ ಬೇಕಾದರು ಕಿತ್ತಾಡಿಕೊಳ್ಳಬಹುದು ಎನ್ನುವುದು ಮಾತ್ರ ಸತ್ಯ.

Comments

Leave a Reply

Your email address will not be published. Required fields are marked *