ಮಂಜು, ದಿವ್ಯಾ ಸುರೇಶ್ ನಡುವೆ ಬಿರುಕು

ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳು ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಮೊದಲು ಇದ್ದಂತೆ ಇಲ್ಲ. ಪ್ರತಿಯೊಬ್ಬರ ಯೋಚನೆ, ಆಟ, ಮಾತು ಎಲ್ಲವೂ ಒದಲಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ನಡೆದಿರುವ ಕೆಲವು ವಿಚಾರಗಳು ಇದೀಗ ಮನೆಯಲ್ಲಿ ಬೆಂಕಿ ಹೊತ್ತಿ ಉರಿಯಲು ಕಾರಣವಾಗಿದೆ.

ಆರಂಭದಿಂದಲೂ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ಆತ್ಮೀಯವಾಗಿದ್ದಾರೆ. ಆರಂಭದಲ್ಲಿ ಪ್ರೀತಿ ಮತ್ತು ಮದುವೆಯ ನಾಟಕ ಮಾಡಿಕೊಂಡು ಇತರೆ ಸ್ಪರ್ಧಿಗಳನ್ನು ನಕ್ಕು ನಲಿಸಿ ಕೊಂಡು ಇದ್ದರು. ಆದರೆ ಈ ಜೋಡಿ ಮಧ್ಯೆ ಇದೀಗ ಬಿರುಕು ಕಾಣಿಸಿಕೊಂಡಿದೆ. ಇಬ್ಬರು ಬೇಸರದಿಂದ ಮಾತನಾಡಿಕೊಂಡಿದ್ದಾರೆ.

ಸೆಕೆಂಡ್ ಇನ್ನಿಂಗ್ಸ್ ಆರಂಭದಲ್ಲಿ ಇನ್ಮೇಲೆ ಸಿಂಗಲ್ ಆಗಿ ಆಟ ಆಡುವೆ ಅಂತಲೂ ಮಂಜು ಪಾವಗಡ ಸುದೀಪ್ ಅವರ ಬಳಿ ಹೇಳಿದ್ದರು. ಬಿಗ್‍ಬಾಸ್ ಮನೆಯಲ್ಲಿ ನಡೆದ ಯಾವುದೋ ಗೇಮ್ ವಿಚಾರವಾಗಿ ಮಂಜು ಬೇಸರ ಮಾಡಿಕೊಂಡಿದ್ದರು. ಈ ವೇಳೆ ದಿವ್ಯಾ ಸುರೇಶ್ ಮಂಜು ಇರುವಲ್ಲಿಗೆ ಬಂದು ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ಆಗ ಇಬ್ಬರ ನಡುವೆ ನಡೆದಿರುವ ಸಂಭಾಷಣೆ ಕೇಳಿದರೆ ಇಬ್ಬರು ಸಖತ್ ಬೇಸರವಾದಂತೆ ಕಾಣಿಸುತ್ತಿದೆ.

ನೀನು ಮಾಡಿದ್ದು ತಪ್ಪು ಎಂದು ದಿವ್ಯಾ ಸುರೇಶ್‍ಗೆ ಮಂಜು ಹೇಳಿದ್ದಾರೆ. ಆಗ ದಿವ್ಯಾ ಶುಭಾಗೂ ನಿಧಿಗೂ ಇದೇ ತರಹ ಸಪೋರ್ಟ್ ಮಾಡ್ತೀಯಾ ಅಲ್ವಾ? ಮುಂಚೆ ತರಹ ಇದ್ಯಾ ನನ್ನ ಜೊತೆ? ನೀನು ನನ್ನೊಂದಿಗೆ ಮುಂಜೆಯ ಹಾಗೇ ಮಾತನಾಡುತ್ತಿಲ್ಲ ಎಂದು ದಿವ್ಯಾ ಮಂಜು ಬಳಿ ಕೇಳಿದ್ದಾರೆ. ಆಗ ಮಂಜು ಇದೀಗ ಮುಂಚೆ ತರಹ ಇರೋಕೆ ಆಗಲ್ಲ ಅಂತ ನೇರವಾಗಿ ದಿವ್ಯಾ ಸುರೇಶ್ ಮುಖಕ್ಕೆ ಹೊಡೆದಂತೆ ಮಂಜು ನೇರವಾಗಿ ಹೇಳಿದ್ದಾರೆ.

ನೀನು ತುಂಬಾ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾ ಇದ್ದೀಯಾ ಎಂದು ದಿವ್ಯಾ ಹೇಳಿದ್ದಾರೆ. ಆಗ ಮಂಜು ನಾವಿಬ್ಬರು ಮಾತನಾಡುವುದೇ ಬೇಡ ಎಂದು ಮಂಜು ನೇರವಾಗಿ ಹೇಳಿದ್ದಾರೆ. ಆಗ ದಿವ್ಯಾ ಕಣ್ಣೀರು ಹಾಕುತ್ತಾ ಅಲ್ಲಿಂದ ಎದ್ದು ಹೋಗಿದ್ದಾರೆ. ಈ ಮೂಲಕವಾಗಿ ಮಂಜು ತನ್ನ ಆಟದ ವೈಖರಿಯನ್ನು ಬದಲಾಯಿಸಿಕೊಂಡಿದ್ದಾರೆ. ಈ ವಾರದಲ್ಲಿ ನಡೆದ ಟಾಸ್ಕ್ ಮತ್ತು ಇತ್ಯಾದಿ ವಿಚಾರಗಳಿಂದ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಮಧ್ಯೆ ಭಿನ್ನಾಭಿಪ್ರಾಯ ಮೂಡಿರುವುದು ಸ್ಪಷ್ಟವಾಗಿದೆ.

ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ಮಧ್ಯೆ ಏನಾಯ್ತು? ಇಬ್ಬರ ಸ್ನೇಹ ಮುರಿದುಬೀಳುತ್ತಾ? ಅಥವಾ ಇದೇನಾದ್ರೂ ಗೇಮ್ ಪ್ಲ್ಯಾನಿಂಗ್ ಮಾಡಿಕೊಂಡಿದ್ದಾರ? ಅಥವಾ ತಮ್ಮ ಆಟವನ್ನು ಶುರು ಮಾಡಿಕೊಂಡಿದ್ದಾರ? ಈ ಎಲ್ಲಾ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

Comments

Leave a Reply

Your email address will not be published. Required fields are marked *