ಮಂಜು ಚಪ್ಪಲಿ ಹೊರಗೆಸೆದ ವೈಷ್ಣವಿ!

ಷ್ಟುದಿನ ಮನೆಯಲ್ಲಿ ಸೈಲೆಂಟ್ ಆಗಿದ್ದ ವೈಷ್ಣವಿ, ಗರ್ಲ್ ಹಾಸ್ಟೆಲ್ ವರ್ಸಸ್ ಬಾಯ್ಸ್ ಹಾಸ್ಟೆಲ್ ಟಾಸ್ಕ್ ನೀಡಿದಾಗಲಿಂದಲೂ ಮನೆಯಲ್ಲಿ ರೌಡಿಯಂತೆ ಅವಾಜ್ ಹಾಕುತ್ತಾ ಮಿಂಚುತ್ತಿದ್ದಾರೆ.

ನಿನ್ನೆ ರಘು ಬಾಯ್ಸ್ ಹಾಸ್ಟೆಲ್‍ಗೆ ವೈಷ್ಣವಿಯನ್ನು ಎತ್ತಿಕೊಂಡು ಹೋಗಿ ಹಾಕೋಣ. ಎರಡು ಪಾಯಿಂಟ್ ಆದರೂ ಸಿಗುತ್ತದೆ ಎಂದು ಅಣಕಿಸುತ್ತಿರುತ್ತಾರೆ. ಆಗ ವೈಷ್ಣವಿ ಧೈರ್ಯ ಇದ್ದರೆ ಇಲ್ಲಿ ಬಂದು ಮಾತಾಡು ಎಂದು ಅವಾಜ್ ಹಾಕುತ್ತಾರೆ. ಆಗ ರಘು ವೈಷ್ಣವಿ ಚಪ್ಪಲಿಯನ್ನು ಜೋರಾಗಿ ಒದೆಯುತ್ತಾರೆ. ನಂತರ ವೈಷ್ಣವಿಯವರ ಮತ್ತೊಂದು ಕಾಲಿನ ಚಪ್ಪಲಿಯನ್ನು ಶಮಂತ್ ಹಾಗೂ ರಘು ಸೇರಿಕೊಂಡು ಗಾರ್ಡನ್ ಏರಿಯಾದ ಮೇಲಿರುವ ಸ್ಪೀಕರ್‍ವೊಂದರ ಮೇಲೆ ಇಡುತ್ತಾರೆ.

ನಂತರ ವೈಷ್ಣವಿಯನ್ನು ಎಳೆದುಕೊಂಡು ಹೋಗಲು ಮಂಜು, ರಾಜೀವ್, ಶಮಂತ್, ರಘು ಪ್ರಯತ್ನಿಸುತ್ತಾರೆ. ಈ ವೇಳೆ ಶುಭ ವೈಷ್ಣವಿಯನ್ನು ಸೇವ್ ಮಾಡಲು ಶುಭಾ ಪೂಂಜಾ ಸಖತ್ ಸರ್ಕಸ್ ನಡೆಸುತ್ತಾರೆ. ಆದರೂ ಬಿಡದ ಹುಡುಗರು ವೈಷ್ಣವಿಯನ್ನು ಬಾಯ್ಸ್ ಹಾಸ್ಟೆಲ್ ವಿಭಾಗಕ್ಕೆ ಎಳೆದುಕೊಂಡು ಹೋಗುತ್ತಾರೆ. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ವೈಷ್ಣವಿ ಓಡಿ ಬರುತ್ತಾರೆ. ಮತ್ತೆ ವೈಷ್ಣವಿಯನ್ನು ಎತ್ತಿಕೊಂಡು ಬಿಸಾಕಿ ಬಿಡುತ್ತೇನೆ ಎಂದು ಮಂಜು ಹೇಳುತ್ತಾರೆ.

ಆಗ ಶುಭ ಮಂಜುರವರ ಒಂದು ಚಪ್ಪಲಿಯನ್ನು ದೂರಕ್ಕೆ ಎಸೆದರೆ ವೈಷ್ಣವಿ ಮತ್ತೊಂದು ಚಪ್ಪಲಿಯನ್ನು ಸ್ಪೀಕರ್ ಮೇಲೆ ಎಸೆಯಲು ಹೋಗಿ ಬಿಗ್ ಮನೆಯ ಕಾಂಪೌಂಡ್‍ನಿಂದ ಹೊರಕ್ಕೆ ಎಸೆಯುತ್ತಾರೆ. ಈ ವೇಳೆ ಇದನ್ನು ಕಂಡು ಮನೆ ಮಂದಿಯೆಲ್ಲಾ ಸೂಪರ್ ಎಂದು ನಗುತ್ತಾ ಚಪ್ಪಾಳೆ ಹೊಡೆಯುತ್ತಾರೆ.

ಬಳಿಕ ಮಂಜು ಶನಿವಾರ ನೀನು ಹೀಲ್ಸ್ ಚಪ್ಪಲಿ ಹಾಕಿಕೊಳ್ಳುತ್ತೀಯಾ ಅಲ್ವಾ? ಐತೆ ಇರು ಎಂದು ರೇಗಿಸುತ್ತಾರೆ.

Comments

Leave a Reply

Your email address will not be published. Required fields are marked *