ಮಂಜುರನ್ನು ಸುಳ್ಳುಗಾರ ಎಂದ ದಿವ್ಯಾ ಸುರೇಶ್!

-ಮಂಜು ಮಾತನಾಡದ್ದಕ್ಕೆ ಮುನಿಸಿಕೊಂಡ ದಿವ್ಯಾ ಸುರೇಶ್

ಬಿಗ್‍ಬಾಸ್ ಶೋ ಆರಂಭದಲ್ಲಿಯೇ ಮಂಜು ಎಣೆದ ಬಲೆಗೆ ಬಿದ್ದ ದಿವ್ಯಾ ಸುರೇಶ್, ಇದೀಗ ಎಲ್ಲಿಯೇ ಹೋದರೂ, ಬಂದರೂ ಮಂಜು ಜಪ ಮಾಡುತ್ತಾರೆ. ಹಲವಾರು ಬಾರಿ ಈ ಜೋಡಿ ಕಿತ್ತಾಡಿದರು, ಮುನಿಸಿಕೊಂಡರೂ ನಂತರ ಕೆಲವೇ ಸಮಯದಲ್ಲಿ ಎಲ್ಲವನ್ನು ಮರೆತು ಒಟ್ಟಿಗೆ ಹೊಂದಿಕೊಂಡು ಖುಷಿಖುಷಿಯಾಗಿರುತ್ತಾರೆ. ಸದ್ಯ ನಿನ್ನೆ ದಿವ್ಯಾ ಸುರೇಶ್ ಮಂಜು ನನ್ನೊಂದಿಗೆ ಮಾತನಾಡುತ್ತಿಲ್ಲ ಎಂದು ಮುನಿಸಿಕೊಂಡು ಚಿಕ್ಕಮಕ್ಕಳಂತೆ ನೀನು ನನ್ನ ಜೊತೆ ಮಾತನಾಡುತ್ತಿಲ್ಲ ಎಂದು ಮಂಜು ಬಳಿ ಹೇಳಿಕೊಂಡಿದ್ದಾರೆ.

ನಾನು ದಿವ್ಯಾ ಉರುಡುಗನ ಕರೆದೆ ಆದರೆ ಅವಳು ವಾಶ್ ರೂಮ್‍ಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದಳು. ನೀನು ಕೂಡ ನನ್ನ ಜೊತೆ ಮಾತನಾಡುತ್ತಿಲ್ಲ. ಅಲ್ಲಿ ನಾನು ಶುಭಾ ನಿಂತಿದ್ದಾಗ ಶುಭಾರನ್ನು ಮಾತ್ರ ಆಚೆ ಹೋಗಲು ಕರೆದೆ ಎಂದಾಗ, ಇಲ್ಲ ನಾನು ಯಾರನ್ನು ಕರೆದಿಲ್ಲ ಎಂದು ಮಂಜು ಹೇಳುತ್ತಾರೆ. ಇದಕ್ಕೆ ದಿವ್ಯಾ ಇಲ್ಲ ನೀನು ಕರೆದೆ ಅಂದಾಗ, ಶುಭಾ ಚಿಕನ್ ಕೊಟ್ಟ ನಂತರ ಕರೆದೆ, ಆ ವೇಳೆ ನೀನು ಪ್ರಶಾಂತ್ ಜೊತೆ ಮಾತನಾಡುತ್ತಿದ್ದೆ. ಹಾಗಾಗಿ ಕರೆಯುವುದು ಬೇಡ ಎಂದು ಸುಮ್ಮನಾದೆ ಅಂತಾರೆ.

ಆಗ ದಿವ್ಯಾ ಸುರೇಶ್ ಲಯರ್, ಸುಳ್ಳು ಪುರಕ, ಬೇಜಾರಾಗುತ್ತಿದೆ ನನಗೆ ಯಾರು ಮಾತನಾಡಿಸುತ್ತಿಲ್ಲ. ಎಲ್ಲರೂ ಸಿಟ್ಟಿನಲ್ಲಿದ್ದಾರೆ, ನನ್ನ ಪಾಯಿಟ್ಸ್ ಜಾಸ್ತಿ ಇರುವುದರಿಂದ ಸಿಟ್ಟಿನಲ್ಲಿದ್ದಾರೆ ಎಂದು ಹೇಳುತ್ತಾರೆ. ಆಗ ಮಂಜು ಇರಬಹುದು ಅವರಿಗೆ ಜಾಸ್ತಿ ಇದ್ದಾಗ ನೀನು ಸಿಟ್ಟಿನಲ್ಲಿ ಇದ್ದಾ? ಇಲ್ವಾಲ್ಲ ಬಿಡು ತಲೆ ಕೆಡಿಸಿಕೊಳ್ಳಬೇಡ ಎಂದು ಹೇಳುತ್ತಾರೆ.

ಈ ವೇಳೆ ದಿವ್ಯಾ ನೀನು ಕೂಡ ಮಾತನಾಡುತ್ತಿಲ್ಲ. ಆಚೆ ಕೂಡ ನನ್ನನ್ನು ಕರೆದಿಲ್ಲ. ಅಳು ಬರುತ್ತಿದೆ ಅಂತಾರೆ, ಆಗ ಮಂಜು ಹಾಗೇಲ್ಲ ಏನು ಇಲ್ಲ ಬಾ ಎಂದು ಬೆನ್ನು ತಟ್ಟಿ, ಹೆಗಲ ಮೇಲೆ ಕೈ ಹಾಕಿಕೊಂಡು ಸಮಾಧಾನ ಪಡಿಸುತ್ತಾರೆ. ಸದ್ಯ ಇಬ್ಬರಿಬ್ಬರ ಮಧ್ಯೆ ಇರುವ ಅಂಡರ್‍ಸ್ಟಡಿಂಗ್‍ಗೆ ಜನ ಮನಸೋತಿದ್ದಾರೆ ಎಂದೇ ಹೇಳಬಹುದಾಗಿದೆ.

Comments

Leave a Reply

Your email address will not be published. Required fields are marked *