ಮಂಜುಗೆ ರೋಮ್ಯಾನ್ಸ್ ಪಾಠ ಮಾಡಿದ ಶುಭಾ

ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳು ಆಟದ ಜೊತೆಗೆ ಸಖತ್ ಎಂಜಾಯ್ ಮಾಡುತ್ತಿರುವುದಂತೂ ಪಕ್ಕಾ ಹೌದು. ಮಂಜು ಪಾವಗಡಗೆ ಹುಡುಗಿಯರ ಕೈ ಹಿಡಿದುಕೊಳ್ಳೋದು ಹೇಗೆ ಎಂದು ಶುಭಾ ಪೂಂಜಾ ಪಾಠ ಮಾಡಿದ್ದಾರೆ.

ಮಂಜು ಮತ್ತು ಶುಭಾ ಒಂದು ಕಡೆ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಶುಭಾ ಮದುವೆಯಾಗುವ ಮುಂಚೆ ಚೆನ್ನಾಗಿರುವ ಹುಡುಗನ ಬಳಿ ಟ್ರೈನಿಂಗ್ ತಗೋ ಎಂದು ಮಂಜುಗೆ ಹೇಳಿದ್ದಾರೆ. ನೀನೇ ಹೇಳಿಕೊಡು, ನಾರ್ಮಲ್ ಕ್ವಾಲಿಟಿ ಹೇಳು ಎಂದು ಶುಭಾ ಬಳಿ ಮಂಜು ಕೇಳಿದಾಗ ನಾಜೂಕಾಗಿ, ಮೃದುವಾಗಿ ಹುಡುಗಿ ಕೈ ಹಿಡಿದುಕೊಳ್ಳಬೇಕು. ಹುಡುಗಿ ಕೈ ಸಾಫ್ಟ್ ಆಗಿ ಹಿಡಿದುಕೊಳ್ಳಬೇಕು. ಒಂದು ದಿನ ಪ್ರಾಕ್ಟೀಸ್ ಮಾಡು, ಇದು ಮೊದಲನೇ ಸ್ಟೆಪ್ ಎಂದು ಶುಭಾ ಮಂಜುಗೆ ಹೇಳಿದ್ದಾರೆ.

ನಾನು ಪ್ರಯೋಗ ಮಾಡಬೇಕಲ್ಲ ಎಂದು ಮಂಜು ಕೇಳಿದಾಗ ಇಲ್ಲಿ ಹುಡುಗಿಯರು ಇದ್ದಾರೆ, ಟ್ರೈ ಮಾಡು ಎಂದು ಶುಭಾ ರೋಮ್ಯಾನ್ಸ್ ಪಾಟವನ್ನು ಮಾಡಿದ್ದಾರೆ. ಈ ವೇಳೆ ಮಂಜು ದಿವ್ಯಾ ಸುರೇಶ್ ಅವರನ್ನು ಕೈ ಹಿಡಿದುಕೊಳ್ತಾರೆ. ದಿವ್ಯಾರ ಕೈಯನ್ನು ಮಂಜು ಹಿಡಿದಿರುವುದನ್ನು ಗಮನಿಸಿದ ಶುಭಾ, ಟೇಬಲ್ ಮೇಲೆ ಮ್ಯಾಟ್ ಇಡೋದಲ್ಲ, ಚಪಾತಿ ತಿರುಗಿಸಿ ಹಾಕೋ ತರ ಅಲ್ಲ. ಸಾಫ್ಟ್ ಆಗಿದ್ದು, ಫೀಲ್ ಮಾಡಬೇಕು ಎಂದು ಹೇಳಿದ್ದಾರೆ.

ದಿವ್ಯಾ ಉರುಡುಗ ಮುಂದೆ ಶುಭಾ ಪೂಂಜಾ ಅವರು ಹೇಗೆ ಫೀಲ್ ಮಾಡೋದು, ಮುಖ ಹೇಗೆ ಇಟ್ಟುಕೊಳ್ಳೋದು ಹೇಗೆ ಅಂತ ಮಂಜುಗೆ ಹೇಳಿಕೊಡುತ್ತಾರೆ. ಆದರೆ ಮಂಜು ಅದರಲ್ಲಿ ಎಡವುತ್ತಾರೆ. ಆಮೇಲೆ ಮಂಜುಗೆ ದಿವ್ಯಾ ಉರುಡುಗ ಟ್ರೈ ಮಾಡಿ ಎಂದಾಗ ನರ್ವಸ್ ಆಗಿದ್ದೇನೆ, ಆಗಲ್ಲ ಎಂದು ಮಂಜು ಹೇಳುತ್ತಾರೆ. ಬಲವಂತ ಮಾಡಬೇಡಿ ಎಂದು ಕೂಡ ಮಂಜು ಮನವಿ ಮಾಡಿಕೊಳ್ಳುತ್ತಾರೆ.

ಮಂಜು ಅವರು ಪದೇ ಪದೇ ಫೀಲ್ ಮಾಡುವುದರಲ್ಲಿ, ಮುಖದ ಹಾವ-ಭಾವ ರೊಮ್ಯಾಂಟಿಕ್ ಆಗಿರದ್ದನ್ನು ಕಂಡ ಶುಭಾ ಪೂಂಜಾ ಅವರು ರೊಮ್ಯಾಂಟಿಸಂ ನಿನ್ನಲ್ಲಿ ಇಲ್ಲವೇ ಇಲ್ಲ ಅನಿಸತ್ತೆ ಅಂತ ಹೇಳ್ತಾರೆ. ಅದಕ್ಕೆ ಉತ್ತರ ನೀಡಿದ ಮಂಜು ಹೌದು ಎಂದರೆ, ದಿವ್ಯಾ ಸುರೇಶ್ ಅವರು ಚಾನ್ಸೇ ಇಲ್ಲ ಎನ್ನುತ್ತಾರೆ. ಒಟ್ಟಾರೆಯಾಗಿ ಮಂಜು ಇಂದು ಬಿಗ್‍ಮನೆಯ ಹೆಂಗಳೆಯರಿಂದ ರೋಮ್ಯಾನ್ಸ್ ಮಾಡುವುದು ಹೇಗೆ ಎಂಬುದನ್ನು ಕೇಳಿ ತಿಳಿದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *