ಮಂಗಳೂರು ಸ್ಟೈಲಿನಲ್ಲಿ ಮಾಡಿ ಖಡಕ್ ಬಂಗುಡೆ ಪುಳಿಮುಂಚಿ

ಪ್ರಕೃತಿ ನಮಗೆ ನೀಡಿರುವಂತಹ ಆರೋಗ್ಯಕರ ಆಹಾರಗಳಲ್ಲಿ ಮೀನು ಕೂಡ ಒಂದಾಗಿದೆ. ಮೀನು ಮಾಂಸಹಾರಿಗಳಿಗೆ ತುಂಬಾ ಪ್ರಿಯ ಆಹಾರ. ಅದರಲ್ಲೂ ಕರಾವಳಿ ತೀರದವರಿಗೆ ಮೀನು ಪಂಚಪ್ರಾಣ. ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಡಿ, ಕ್ಯಾಲ್ಸಿಯಂ, ಫೋಸ್ಫರಸ್ ಲಭ್ಯವಿದೆ. ಮೀನಿನಲ್ಲಿ ಕಬ್ಬಿನ, ಸತು, ಮೆಗ್ನಿಶಿಯಂ, ಐಯೋಡಿನ್ ಮತ್ತು ಪೊಟಾಶಿಯಂನಂತಹ ಖನಿಜಾಂಶಗಳಿವೆ. ಮೀನು ಕೇವಲ ರುಚಿಕರವಾಗಿರೋದು ಮಾತ್ರವಲ್ಲ ಹೃದಯ ಸಮಸ್ಯೆ, ಮಹಿಳೆಯರ ಋತುಸ್ರಾವ ಸಮಸ್ಯೆ ನಿವಾರಿಸಲು ಸಹ ಮೀನು ಸಹಾಯಕ. ಅಲ್ಲದೆ ಹಲವು ರೋಗಗಳಿಗೆ ಮೀನು ರಾಮಬಾಣವೂ ಹೌದು. ಇದುವರೆಗೆ ನೀವು ಮೀನಿನ ಸಾರು, ಮೀನು ಫ್ರೈ ತಿಂದಿರ್ತೀರಾ. ಹೀಗಾಗಿ ಇಲ್ಲಿ ನಿಮಗೆ ರುಚಿ ರುಚಿಯಾದ ಖಡಕ್ ಬಂಗುಡೆ ಪುಳಿಮುಂಚಿ ಮಾಡುವ ಸುಲಭ ವಿಧಾನವನ್ನು ಹೇಳಿಕೊಡಲಾಗಿದೆ.

ಬೇಕಾಗುವ ಸಾಮಗ್ರಿಗಳು:
* ಬಂಗುಡೆ(ಐಲೆ)- ಅರ್ಧ ಕೆ.ಜಿ
* ಬ್ಯಾಡಗಿ ಮೆಣಸು- 20 (10 ನಿಮಿಷ ಬಿಸಿನೀರಿನಲ್ಲಿ ನೆನೆಸಿಡಿ)
* ಕೊತ್ತಂಬರಿ ಬೀಜ- 2 ಚಮಚ
* ಜೀರಿಗೆ- ಅರ್ಧ ಚಮಚ
* ಬೆಳ್ಳುಳ್ಳಿ- 4 ಎಸಳು
* ಚಿಕ್ಕ ಈರುಳ್ಳಿ- 1
* ಶುಂಠಿ- ಒಂದೂವರೆ ಇಂಚು
* ಹುಣಸೆ ಹಣ್ಣು- ಸಣ್ಣ ತುಂಡು
* ಅರಿಶಿಣ- ಕಾಲು ಚಮಚ
* ಎಣ್ಣೆ

ಮಾಡುವ ವಿಧಾನ:
* ಮೊದಲು ಮೀನನ್ನು ಕ್ಲೀನ್ ಮಾಡಿಕೊಂಡು ನಂತರ ಮಸಾಲೆ ಎಳೆದುಕೊಳ್ಳುವಂತೆ ಅದರ ಮೇಲೆ ಗೆರೆಗಳನ್ನು ಹಾಕಬೇಕು.
* ಇತ್ತ ಬ್ಯಾಡಗಿ ಮೆಣಸನ್ನು 10 ನಿಮಿಷ ಬಿಸಿನೀರಿನಲ್ಲಿ ನೆನೆಸಿಡಿ. (ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ನ್ಯೂಸ್ ಅಥವಾ ವಿನೇಗರ್ ಕೂಡ ಹಾಕಬಹುದು. ಇದು ಹಾಕಿದರೆ ಮಸಾಲೆ ಇನ್ನಷ್ಟು ಸಾಫ್ಟ್ ಆಗುತ್ತದೆ).
* ನಂತರ ಮಿಕ್ಸ್ ಜಾರಿಗೆ ನೆನೆಸಿಟ್ಟ ಮೆಣಸು, ಕೊತ್ತಂಬರಿ ಕಾಳು, ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿ, ಶುಂಠಿ, ಹುಣಸೆ ಹಣ್ಣು ಹಾಗೂ ಅರಿಶಿಣ ಹಾಕಿ ಕಡಿಮೆ ನೀರು ಬಳಸಿ ನುಣ್ಣಗೆ ರುಬ್ಬಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಬಳಸಿಕೊಳ್ಳಿ.
* ಇತ್ತ ಒಂದು ಪ್ಲೇಟ್ ಗೆ 4 ಟೀ ಸ್ಪೂನ್ ನಷ್ಟು ಮಸಾಲೆ ತೆಗೆದು ಸಪರೇಟ್ ಆಗಿ ಇಟ್ಕೊಳ್ಳಿ. (ಬೇಕೆಂದರೆ ಮಾತ್ರ ಈ ಮಸಾಲೆ 1 ಚಮಚ ಕಾನ್ ಫ್ಲವರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕಾನ್ ಫ್ಲವರ್ ಹಾಕಿದ್ರೆ ಮಸಾಲೆ ಮೀನಿಗೆ ಚೆನ್ನಾಗಿ ಅಂಟಿಕೊಳ್ಳುತ್ತೆ ಹಾಗೆಯೇ ಕ್ರಿಪ್ಸಿ ಆಗುತ್ತದೆ).

* ಈಗ ಮೀನಿನ ಮೇಲೆ ಈ ಮಸಾಲೆಯನ್ನು ಹಾಕಿ ಚೆನ್ನಾಗಿ ಅಂಟಿಸಿ ಅರ್ಧ ಗಂಟೆ ಹಾಗೆಯೇ ಬಿಡಿ ( ಫ್ರಿಡ್ಜ್ ಅಥವಾ ಹೊರಗಡೆಯೂ ಇಡಬಹುದು).
* ಇತ್ತ ಸ್ಟೌ ಮೇಲೆ ಒಂದು ತವಾವನ್ನು ಬಿಸಿ ಮಾಡಲು ಬಿಡಿ. ತವಾ ಬಿಸಿಯಾದ ಬಳಿಕ ಫ್ರೈ ಮಾಡಲು ಬೇಕಾದಷ್ಟು ತೆಂಗಿನ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ.
* ಎಣ್ಣೆ ಕಾದ ಬಳಿಕ ಮಸಾಲೆ ಮಿಶ್ರಿತ ಮೀನನ್ನು ಎಣ್ಣೆಯಲ್ಲಿ ಬಿಡಿ. ನಂತರ ಎರಡೂ ಕಡೆನೂ ಚೆನ್ನಾಗಿ ಬೇಯಿಸಿ. ಬಳಿಕ ಮೀನನ್ನು ತೆಗೆದು ಅದೇ ಎಣ್ಣೆಗೆ ಸ್ವಲ್ಪ ಕರಿಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಿ. ನಂತರ ಅದರ ಮೇಲೆ ಆಗಲೇ ತೆಗೆದಿಟ್ಟಿದ್ದ ಮಸಾಲೆಯನ್ನು ಪೂರ್ತಿಯಾಗಿ ಹಾಕಿ ಕಂದು ಬಣ್ಣ ಬರುವವರೆಗೂ ರೋಸ್ಟ್ ಮಾಡಿ.
* ಮಸಾಲೆ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಈಗಾಗಲೇ ಫ್ರೈ ಮಾಡಿಟ್ಟ ಮೀನನ್ನು ಮಸಾಲೆ ಜೊತೆ ಬೆರೆಸಿ ಚೆನ್ನಾಗಿ ಕೋಟ್ ಮಾಡಿದರೆ ಮಸಾಲೆ ಫಿಶ್ ಫ್ರೈ ಸವಿಯಲು ರೆಡಿ.

Comments

Leave a Reply

Your email address will not be published. Required fields are marked *