ಮಂಗಳವಾರ ಸಂಜೆ 4 ಗಂಟೆಗೆ ಪ್ರಧಾನಿ ಮೋದಿ ಭಾಷಣ

ನವದೆಹಲಿ: ಮಂಗಳವಾರ ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕುರಿತು ಪ್ರಧಾನಿ ಮಂತ್ರಿಗಳ ಕಚೇರಿ ಟ್ವೀಟ್ ಮೂಲಕ ಖಚಿತಪಡಿಸಿದೆ.

ಮಂಗಳವಾರ ಅನ್‍ಲಾಕ್-1 ಅಂತ್ಯವಾಗಲಿದ್ದು, ಬುಧವಾರ ಅನ್‍ಲಾಕ್-2 ಆರಂಭವಾಗಲಿದೆ. ಈಗಾಗಲೇ ಆನ್‍ಲಾಕ್-2 ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಪ್ರಧಾನಿಗಳು ನಾಳೆಯೇ ಭಾಷಣದಲ್ಲಿ ಅನ್‍ಲಾಕ್-2 ಮತ್ತು ಕೊರೊನಾ ಪರಿಸ್ಥಿತಿಯ ಬಗ್ಗೆ ಮಾತನಾಡುವ ಸಾಧ್ಯತೆಗಳಿವೆ.

ಈಗಾಗಲೇ ದೇಶದ ಎಲ್ಲ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿರುವ ಪ್ರಧಾನಿಗಳು ರಾಜ್ಯಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಹಾಗಾಗಿ ನಾಳೆಯ ಭಾಷಣ ಕುತೂಹಲ ಹೆಚ್ಚಿಸಿದೆ.

Comments

Leave a Reply

Your email address will not be published. Required fields are marked *