ಭೂಮಿ ಮೇಲೆ ಕೊರೊನಾ ಇದೆ – ವಿಶೇಷ ವಿಮಾನದಲ್ಲಿ ಮದುವೆ

ಚೆನ್ನೈ: ಭೂಮಿ ಮೇಲೆ ಕೊರೊನಾ ಇದೆ. ಭೂಮಿ ಸಹವಾಸವೇ ಬೇಡ ಎಂದು ಆಕಾಶದಲ್ಲಿ ಮದುವೆಯಾಗುವ ಮೂಲಕವಾಗಿ ನವದಂಪತಿ ಸುದ್ದಿಯಾಗಿದ್ದಾರೆ.

ಮಧುರೈ ನಿವಾಸಿಗಳಾದ ರಾಕೇಶ್, ಧೀಕ್ಷಣಾ ಜೋಡಿ ತಮ್ಮ ಮದುವೆಗಾಗಿ ವಿಶೇಷ ವಿಮಾನವೊಂದನ್ನು ಬುಕ್ ಮಾಡಿದ್ದರು. 2 ಗಂಟೆಗಳ ಕಾಲ ಬಾಡಿಗೆ ತೆಗೆದುಕೊಂಡು ಆಕಾಶದಲ್ಲಿ ಮದುವೆಯಾಗಿದ್ದು, ಹೆಚ್ಚು ಜನರನ್ನು ಸೇರಿಸುವ ಮೂಲಕವಾಗಿ ಕೊರೊನಾ ನಿಯಮವನ್ನು ಉಲ್ಲಂಘಿಸಿದ್ದಾರೆ.

130 ಮಂದಿ ಸಂಬಂಧಿಕರನ್ನು ಸೇರಿಸಿ ಮದುವೆಯಾಗಿದ್ದಾರೆ. ಮದುವೆಗೆ ಆಪ್ತ ಸ್ನೇಹಿತರು ಮತ್ತು ಸಂಬಂಧಿಕರು ಹಾಜಾರಾಗಿದ್ದರು ಎಂದು ಹೇಳಲಾಗುತ್ತಿದೆ. ವಿಮಾನ ಮಧುರೈ ನಿಂದ ತೂತುಕುಡಿಗೆ ಸಂಚರಿಸುವ ಸಂದರ್ಭದಲ್ಲಿ ನಡೆದಿದೆ. ವಿವಾಹದ ಫೋಟೋ, ವೀಡಿಯೋಗಳು ಭಾರೀ ವೈರಲ್ ಆಗುತ್ತಿವೆ.

ಭೂಮಿ ಮೇಲೆ ಕೊರೊನಾ ಇದೆ, ಕೊರೊನಾ ನಿಮಗಳು ಇವೆ. ಅದಕ್ಕೇ ಭೂಮಿಯ ಸಹವಾಸವೇ ಬೇಡ ಎಂದು ಆಕಾಶದಲ್ಲಿ ಮದುವೆಯಾಗಿದ್ದಾರೆ. ಮದುವೆಗೆ 130 ಮಂದಿ ಆಗಮಿಸಿದ್ದು, ಕೊರೊನಾ ನಿಯಮದ ಪ್ರಕಾರ 130 ಮಂದಿ ಸೇರುವ ಹಾಗಿಲ್ಲ. ಮದುವೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಸಂಬಂಧಿಕರಿಗೂ RTPCR ಟೆಸ್ಟ್ ಮಾಡಿಸಲಾಗಿತ್ತು ಎಂದು ತಿಳಿದುಬಂದಿದೆ.

ಕೊರೊನ ಇರುವುದನ್ನು ಲೆಕ್ಕಿಸದೇ 130 ಜನರನ್ನು ಸೇರಿಸಿ ವಿಮಾನದಲ್ಲಿ ಮದುವೆ ಆಗಿರುವುದು ಟೀಕೆಗೆ ಗುರಿಯಾಗಿದೆ. ತಮಿಳುನಾಡು ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಹೊಸ ಗೈಡ್‍ಲೈನ್ಸ್ ಪ್ರಕಾರ ಎಲ್ಲಾ ಖಾಸಗಿ ಸಂಸ್ಥೆ ನೌಕರರಿಗೆ ಮನೆಯಲ್ಲಿಯೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಖಾಸಗಿ ಸಂಸ್ಥೆ ವಿಮಾನವೊಂದು ಮದುವೆಗೆ ವೇದಿಕೆ ಕಲ್ಪಸಿರೋದು ಕೊರೊನಾ ನಿಯಮದ ಪ್ರಕಾರ ತಪ್ಪಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.

Comments

Leave a Reply

Your email address will not be published. Required fields are marked *