ಭಿಕ್ಷೆ ಬೇಡೋಕೆ ಮುಂಬೈಗೆ ಯಾಕೆ ಬಂದೆ- ಕಂಗನಾಗೆ ರಾಖಿ ಪ್ರಶ್ನೆ

-ನೀನೇ ಕೊಹಿನೂರು ವಜ್ರನಾ?

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ರಾಖಿ ಸಾವಂತ್ ನಡುವಿನ ಜಟಾಪಟಿ ಮುಂದುವರಿದಿದೆ. ಕಂಗನಾ ರಣಾವತ್ ಮತ್ತು ಮಹಾರಾಷ್ಟ್ರ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಬಾಲಿವುಡ್ ಬಹುತೇಕ ತಾರೆಯರು ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಕಂಗನಾ ವಿರುದ್ಧ ಗುಡುಗಿರುವ ರಾಖಿ ಸಾವಂತ್ ಭಿಕ್ಷೆ ಬೇಡಲು ಮುಂಬೈಗೆ ಏಕೆ ಬಂದೆ?. ನೀವು ಇದಲ್ಲಿಯೇ ಇರಬೇಕಿತ್ತ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

ಸಿನಿಮಾ ಇಂಡಸ್ಟ್ರಿಯಲ್ಲಿರೋ ಎಲ್ಲ ನಿರ್ಮಾಪಕರು, ನಿರ್ದೇಶಕರು ಕೆಟ್ಟವರಿದ್ದಾರೆ. ನಿನ್ನ ತಲೆಯ ಮೇಲೆ ಕೊಹಿನೂರು ವಜ್ರ ಇದೆಯಾ? ನಿನ್ನ ಹೊರತು ಬಾಲಿವುಡ್‍ನಲ್ಲಿರುವವರು ಕೆಟ್ಟವರಾ? ಬಾಲಿವುಡ್ ಕಂಗನಾಳನ್ನ ಬಾಯ್‍ಕಾಟ್ ಮಾಡಿ. ಅಲ್ಲೇ ಹಿಮಾಲಯದ ಮನೆಯಲ್ಲಿ ಕುಳಿತುಕೊಳ್ಳಿ. ಬಾಲಿವುಡ್ ಸಿನಿಮಾದ ಹಣದಿಂದ ಊರಲ್ಲಿ ಮನೆ ಇದೆ. ಮೊದಲಿಗೆ ಅದು ಸಹ ಇರಲಿಲ್ಲ. ಈಗ ಬಾಲಿವುಡ್ ಕಂಗನಾಗೆ ಕೆಟ್ಟದಾಗಿ ಕಾಣುತ್ತಿದೆಯಾ ಎಂದು ರಾಖಿ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕಂಗನಾ ವಿರುದ್ಧ ಡ್ರಗ್‌ ಪರೀಕ್ಷೆ – ಸಾಬೀತಾದ್ರೆ ಮುಂಬೈ ತೊರೆಯುತ್ತೇನೆ

ಕಂಗನಾ ಹೇಳಿಕೆ ಪ್ರಕಾರ ಮುಂಬೈನಲ್ಲಿ ಭಯೋತ್ಪಾದಕರಿದ್ದಾರೆ ಅಂತೆ. ಮುಂಬೈ ನಗರವನ್ನ ಪಿಓಕೆ ಹೋಲಿಕೆ ಮಾಡೋದು ಎಷ್ಟು ಸರಿ. ಮುಂಬೈ ಬಗ್ಗೆ ಮಾತನಾಡುವ ನೀನು ಇಲ್ಲಿಗ್ಯಾಕೆ ಬಂದಿರುವೆ. ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ ಇದೆನಾ? ನೋಡೋಣ ನೀನು ಎಷ್ಟು ಜನರಿಗೆ ಉದ್ಯೋಗ ಕೊಡ್ತೀಯಾ ತಿಳಿಸು. ಬಾಲಿವುಡ್ ಸೂಪರ್ ಹಿಟ್ ಸಿನಿಮಾ ನೀಡಿರುವ ಕರಣ್ ಜೋಹರ್ ಅವರನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ನಿನ್ನ ವರ್ತನೆಗೆ ಸಿನಿಮಾಗಳು ಸಿಕ್ಕಿಲ್ಲ. ಹಾಗಾಗಿ ನಿನ್ನದೇ ಪ್ರೊಡೆಕ್ಷನ್ ಹೌಸ್ ಮಾಡಿಕೊಡು ಸಿನಿಮಾ ಮಾಡುವ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕಂಗನಾ ಕಟ್ಟಡ ನೆಲಸಮಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ: ಶಿವಸೇನೆ

ಮುಂದಿನ ದಿನಗಳಲ್ಲಿ ಕಂಗನಾ ಬೆಂಬಲ ನೀಡುತ್ತಿರುವ ಜನರಿಂದಲೇ ಛೀಮಾರಿ ಹಾಕಿಸಿಕೊಳ್ಳುವ ಕಾಲ ಬರಲಿದೆ. ಬೇಕಾದ್ರೆ ನನ್ನ ಮಾತಗಳನ್ನ ಬರೆದಿಟ್ಟುಕೊಳ್ಳಿ. ನಾರ್ಕೋಟಿಕ್ಸ್ ತಂಡದವರು ಕಂಗನಾರನ್ನ ಡ್ರಗ್ಸ್ ಪರೀಕ್ಷೆಗೆ ಒಳಪಡಿಸಿ. ಆದ್ರೆ ಡ್ರಗ್ಸ್ ಸೇವನೆ ಮಾಡುತ್ತಿರುವ ವಿಷಯ ಬೆಳಕಿಗೆ ಬರಲಿದೆ ಎಂದು ರಾಖಿ ಸಾವಂತ್ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಮನೆಯಂತೆ ನಾಳೆ ನಿನ್ನ ಅಹಂಕಾರ ನೆಲಸಮ ಆಗುತ್ತೆ: ಸಿಎಂ ಠಾಕ್ರೆ ವಿರುದ್ಧ ಕಂಗನಾ ಪ್ರಹಾರ

https://www.instagram.com/p/CE9LwJuHE3_/

ಪಟ್ಟ ಹಳ್ಳಿಗಳಿಂದ ಬಂದ ಅನೇಕರು ಸ್ಟಾರ್ ಗಳಾಗಿರುವ ಉದಾಹರಣೆಗಳು ನಮ್ಮ ಮುಂದಿವೆ. ನನ್ನನ್ನ ದೇಶದ ಜನತೆ ಪರಿಚಯಿಸಿದ್ದು ಬಾಲಿವುಡ್. ಒಂದು ಕಾಲದಲ್ಲಿ ಒಳ್ಳೆಯ ಅವಕಾಶಗಳು ಸಿಕ್ಕಿವೆ. ಮುಂದೊಂದು ದಿನ ಬಾಲಿವುಡ್ ನಮ್ಮನ್ನ ಮರೆಯಬಹುದು. ಕೆಲಸ ನೀಡದಕ್ಕೆ ಕರ್ಮಭೂಮಿ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು. ಬೇಕಾದ್ರೆ ನನ್ನ ವಿಡಿಯೋಗಳಿಂದ ನನ್ನ ಕ್ಯಾರೆಕ್ಟರ್ ಬಗ್ಗೆ ಮಾತನಾಡಿ, ಆದ್ರೆ ನನ್ನ ಧ್ವನಿಯನ್ನ ಅಡಗಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿಕಂಗನಾ V/s ಮಹಾರಾಷ್ಟ್ರ ಸರ್ಕಾರ- ಮನೆ, ಕಚೇರಿ ನೆಲಸಮಕ್ಕೆ ಹೈಕೋರ್ಟ್ ತಡೆ-ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ

https://www.instagram.com/p/CE6zD2oHACX/

Comments

Leave a Reply

Your email address will not be published. Required fields are marked *