ಭಾವಿ ಪತ್ನಿಯನ್ನ ಪರಿಚಯಿಸಿದ ಚಹಲ್

ನವದೆಹಲಿ: ಟೀಂ ಇಂಡಿಯಾ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ತಾವು ಮದುವೆ ಆಗುತ್ತಿರುವ ಪ್ರೇಯಸಿ ಧನಶ್ರೀ ವರ್ಮಾ ಅವರನ್ನು ಪರಿಚಯಿಸಿದ್ದಾರೆ. ಇಬ್ಬರ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿರುವ ಚಹಲ್, ಎರಡು ಕುಟುಂಬಗಳು ಸಮ್ಮುಖದಲ್ಲಿ ಮದುವೆಯ ಮೊದಲ ಶಾಸ್ತ್ರ ಮುಗಿದಿದೆ ಎಂದುಇ ಬರೆದುಕೊಂಡಿದ್ದಾರೆ.

ಧನಶ್ರೀ ವರ್ಮಾ ಡಿಜಿಟಲ್ ಕಂಟೆಂಟ್ ಕ್ರಿಯೆಟರ್ ಆಗಿದ್ದಾರೆ. ತಮ್ಮ ಇನ್‍ಸ್ಟಾಗ್ರಾಂನಲ್ಲಿ ಡಾಕ್ಟರ್, ಕೊರಿಯೋರಾಫರ್, ಯು ಟ್ಯೂಬರ್ ಮತ್ತು ಧನಶ್ರೀ ವರ್ಮಾ ಕಂಪನಿಯ ಸ್ಥಾಪಕಿ ಎಂದು ಕೆಲಸದ ಬಗ್ಗೆ ಬರೆದುಕೊಂಡಿದ್ದಾರೆ. ಹೆಣ್ಣು ನೋಡುವ ಶಾಸ್ತ್ರಮುಗಿದಿದೆ.

https://twitter.com/yuzi_chahal/status/1292049597360033794

ಚಹಲ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ಟೀಂ ಇಂಡಿಯಾ ಆಟಗಾರರು ಮತ್ತು ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಚಹಲ್ ಇದುವರೆಗೂ 52 ಏಕದಿನ ಮತ್ತು 42 ಟಿಟ್ವೆಂಟಿ ಪಂದ್ಯಗಳನ್ನಾಡಿದ್ದಾರೆ.

Comments

Leave a Reply

Your email address will not be published. Required fields are marked *