ಸೋನಾ ಅಕ್ಕಿಗೆ ಬಂತು ಭಾರೀ ಪ್ರಮಾಣದ ಬೇಡಿಕೆ

ಹೈದರಾಬಾದ್: ಹೊಸ ತಳಿಯ ಸೋನಾ ಅಕ್ಕಿಗೆ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಬೇಡಿಕೆ ಬಂದಿದೆ. ತೆಲಂಗಾಣ ರಾಜ್ಯ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಯಶಂಕರ್ ಅಭಿವೃದ್ಧಿ ಪಡಿಸಿದ್ದ ಈ ಹೊಸ ಮಾದರಿಯ ಅಕ್ಕಿಗೆ ಎಲ್ಲೆಡೆ ಬೇಡಿಕೆ ಸೃಷ್ಟಿಯಾಗಿದೆ.

ಈ ಬೆಳೆಯು ಉತ್ತಮ ಇಳುವರಿಯನ್ನು ನೀಡುತ್ತದೆ. ಗುಣಮಟ್ಟ ಕೂಡ ಉತ್ತಮವಾಗಿದೆ. ರುಚಿಯಿದೆ ಹೀಗಾಗಿ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ ಎಂದು ತೆಲಂಗಾಣ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಜಗದೀಶ್ವರ್ ಹೇಳಿದ್ದಾರೆ.

ಅಕ್ಕಿಯಲ್ಲಿ ಸಕ್ಕರೆ ಅಂಶ ತೀರಾ ಕಡಿಮೆ ಇರುವುದರಿಂದ ಬೇಡಿಕೆ ಹೆಚ್ಚಾಗಿದೆ. ಹಲವು ಪರೀಕ್ಷೆಗಳಲ್ಲಿ ಸಕ್ಕರೆ ಅಂಶ ಕಡಿಮೆ ಇರುವುದು ಸಾಬೀತಾಗಿದೆ ಎಂದಿದ್ದಾರೆ.

ಸೋನಾ ಅಕ್ಕಿಗೆ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ 25 ಲಕ್ಷ ಎಕರೆ ಭೂಪ್ರದೇಶದಲ್ಲಿ ಈ ಅಕ್ಕಿಯನ್ನು ಬೆಳಯಲಾಗುತ್ತಿದೆ. ತೆಲಂಗಾಣ ಹೊರತುಪಡಿಸಿ ಹೊರ ರಾಜ್ಯಗಳಲ್ಲಿಯೂ 10 ಲಕ್ಷ ಎಕರೆಯಲ್ಲಿ ಈ ಅಕ್ಕಿಯನ್ನು ಬೆಳೆಯಲು ಶುರು ಮಾಡಿದ್ದಾರೆ.

ತೆಲಂಗಾಣ ಮರುಕಟ್ಟೆಯಲ್ಲಿ ಸೋನ ಅಕ್ಕಿಗೆ ಒಂದು ಕೆಜಿಗೆ 100 ರಿಂದ 145 ರೂಪಾಯಿ ಇದೆ. ಒಂದು ಕ್ವಿಂಟಾಲ್‍ಗೆ 2500 ರೂಪಾಯಿ ಇದೆ. ಕಾರ್ನಾಟಕ, ತೆಲಂಗಾಣ, ಪಂಜಾಬ್, ರಾಜಸ್ಥಾನ, ಒಡಿಶಾ, ತಮಿಳುನಾಡು ಸೇರಿದಂತೆ ಹಲವು ಕಡೆಗಳಲ್ಲಿ ಸೋನಾ ಅಕ್ಕಿಗೆ ಭಾರೀ ಪ್ರಮಣದ ಬೇಡಿಕೆ ಶುರುವಾಗಿದೆ.

Comments

Leave a Reply

Your email address will not be published. Required fields are marked *