ಭಾರತ ಸೇನೆಯಿಂದ ಚೀನಾದ ಕಮಾಡಿಂಗ್ ಆಫೀಸರ್ ಹತ್ಯೆ – 40ಕ್ಕೂ ಹೆಚ್ಚು ಸೈನಿಕರು ಮಟಾಷ್

ನವದೆಹಲಿ: ಭಾರತದ ಮತ್ತು ಚೀನಾ ಗಡಿಭಾಗದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಭಾರತೀಯ ಸೇನೆ ಚೀನಾದ ಕಮಾಂಡಿಂಗ್ ಅಧಿಕಾರಿಯನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ.

ಭಾರತ ಮತ್ತು ಚೀನಾದ ಗಡಿಭಾಗ ಗಾಲ್ವಾನ್ ಕಣಿವೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರತ ಮತ್ತು ಚೀನಾದ ನಡುವೆ ಸಂಘರ್ಷ ನಡೆಯುತ್ತಿದ್ದು, ಭಾರತದ 20 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಜೊತೆಗೆ ತನ್ನ ನರಿಬುದ್ಧಿ ತೋರಿಸಿದ ತಪ್ಪಿಗೆ ಚೀನಾದ 40ಕ್ಕೂ ಜನ ಸೈನಿಕರು ಸಾವನ್ನಪ್ಪಿದ್ದು ಗಡಿಗಳಲ್ಲಿ ಹೈ ಅಲರ್ಟ್ ಜಾರಿಯಾಗಿದೆ.

ಮೂಲಗಳ ಪ್ರಕಾರ, ಸಂಘರ್ಷದಲ್ಲಿ ಹಲವಾರು ಚೀನಾ ಸೈನಿಕರು ಗಾಯಗೊಂಡಿದ್ದು, ಅವರನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರ ಮಾಡಲಾಗಿದೆ. ಗಾಲ್ವಾನ್ ನದಿಯ ಪಕ್ಕದಲ್ಲಿ ಚೀನಾ ಅಂಬುಲೆನ್ಸ್ ಗಳ ಓಡಾಟ ಕಂಡುಬಂದಿದೆ. ಇದರ ಜೊತೆಗೆ ಗಡಿಭಾಗದಲ್ಲಿ ಚೀನಾ ಹೆಲಿಕಾಪ್ಟರ್ ಗಳ ಓಡಾಡ ಜೋರಾಗಿ ನಡೆದಿದೆ. ಈ ಮಧ್ಯದಲ್ಲೇ ಚೀನಾ ಉನ್ನತ ಕಮಾಂಡಿಂಗ್ ಆಫೀಸರ್ ಅನ್ನು ಭಾರತ ಕೊಂದು ಹಾಕಿದೆ ಎಂಬ ಸುದ್ದಿ ಲಭಿಸಿದೆ.

ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೆ 17 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆಯು ಚೀನಾದ 40ಕ್ಕೂ ಹೆಚ್ಚು ಮಂದಿ ಯೋಧರನ್ನು ಸೆದೆಬಡಿದಿದೆ. ಇದರಲ್ಲಿ 100ಕ್ಕೂ ಹೆಚ್ಚು ಚೀನಾ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ತನ್ನ ಯೋಧರ ಮೃತದೇಹವನ್ನು ಹೊತ್ತೊಯ್ಯಲು ಚೀನಾ ಹೆಲಿಕಾಪ್ಟರ್ ಗಳು ಎಲ್‍ಎಸಿ ಬಳಿ ಹಾರಾಟ ನಡೆಸಿವೆ ಎಂದು ವರದಿಯಾಗಿದೆ.

ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರಧ್ಯಕ್ಷ ಜೆ.ಪಿ ನಡ್ಡಾ, ಚೀನಾ ಕುತಂತ್ರದಿಂದ ನಮ್ಮ ಕೆಚ್ಚೆದೆಯ ಸೈನಿಕರನ್ನು ಕಳೆದುಕೊಂಡಿದ್ದೇವೆ. ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾಗುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ. ನಮ್ಮ ಸೈನ್ಯವು ಎಲ್ಲದಕ್ಕೂ ಸಂಪೂರ್ಣವಾಗಿ ಸಜ್ಜುಗೊಂಡಿದೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *